HEALTH TIPS

ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ: ಸಾವಿನ ವದಂತಿ ತಳ್ಳಿ ಹಾಕಿದ ಪ್ರತಿನಿಧಿ

 ನವದೆಹಲಿ: ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಆರೋಗ್ಯವಾಗಿದ್ದಾರೆ ಎಂದು ಭಾರತದಲ್ಲಿನ ಅವರ ಉಪ ಪ್ರತಿನಿಧಿ ಡಾ. ಮೊಹಮ್ಮದ್ ಹೊಸೈನ್ ಜಿಯಾಯೆನೀಯಾ ತಿಳಿಸಿದ್ದಾರೆ. 


ಆ ಮೂಲಕ ಮೊಜ್ತಬಾ ಖಮೇನಿ ಆರೋಗ್ಯ ಕುರಿತು ಇದ್ದ ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

'ದೇವರ ದಯೆಯಿಂದ ಇರಾನ್‌ನ ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಆರೋಗ್ಯ ಉತ್ತಮವಾಗಿದೆ. ಯಾವುದೇ ಊಹಾಪೋಹಗಳಿಗೆ ಆಸ್ಪದ ಕೊಡಬಾರದು' ಎಂದಿದ್ದಾರೆ.

'ಖಮೇನಿ ಅವರಿಗೆ ಆರೋಗ್ಯ ಸಮಸ್ಯೆಗಳಿದ್ದು, ಈ ಕುರಿತಾಗಿನ ವದಂತಿಗಳು ಅಧಿಕೃತವಲ್ಲ. ಅವರು ಚೆನ್ನಾಗಿಯೇ ಇದ್ದಾರೆ' ಎಂದು ಖಚಿತಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ನಿಲುವನ್ನು ಪುನರುಚ್ಚರಿಸಿದ ಅವರು, 'ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧವನ್ನು ಆರಂಭಿಸಿದೆ. ಆದರೆ ನಾವದನ್ನು ಕೊನೆಗೊಳಿಸಲಿದ್ದೇವೆ' ಎಂದು ಹೇಳಿದ್ದಾರೆ.

ಅಮೆರಿಕ-ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮೊಜ್ತಾಬಾ ಖಮೇನಿ ಬದುಕುಳಿದಿದ್ದರು. ಆದರೆ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಿದಾಡುತ್ತಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries