ನವದೆಹಲಿ: ಮಹಿಳೆಯರಿಗೆ ಮೂರನೇ ಒಂದಂಶದಷ್ಟು ಸ್ಥಾನಗಳನ್ನು ಮೀಸಲಾತಿ ಕಲ್ಪಿಸುವ ಭಾಗವಾಗಿ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಗೆ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026' ಅನ್ನು ಗುರುವಾರ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಮಹಿಳೆಯರಿಗೆ ಮೀಸಲಾತಿ ಒದಗಿಸುವ ಪ್ರಕ್ರಿಯೆಯನ್ನು ಕ್ಷೇತ್ರ ಪುನರ್‌ವಿಂಗಡಣೆ ಜೊತೆ ಜೋಡಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧಪಕ್ಷಗಳು ಪ್ರತಿ ಹೋರಾಟಕ್ಕೆ ಸಜ್ಜಾಗಿವೆ.
ಮರುವಿಂಗಡಣೆ ಪ್ರಸ್ತಾವದ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ 50ರವರೆಗೆ ಹೆಚ್ಚಿಸಲು ಅವಕಾಶ ಸಿಗಲಿದೆ. ಲೋಕಸಭೆಯ ಸದಸ್ಯರ ಸಂಖ್ಯೆ ಪ್ರಸ್ತುತ 543 ಇದ್ದು, ಗರಿಷ್ಠ 850 ಸ್ಥಾನ ಮೀರುವಂತಿಲ್ಲ ಎಂಬ ಪ್ರಸ್ತಾಪವಿದೆ. ಈ ಏರಿಕೆಯಲ್ಲಿ ರಾಜ್ಯಗಳ ಪಾಲು 815 ಸ್ಥಾನಗಳಾದರೆ, ಉಳಿದ 35 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಗಳಿಗೆ ದೊರೆಯಲಿವೆ ಎಂಬ ಲೆಕ್ಕಾಚಾರ ಹಾಕಲಾಗಿದೆ.
ಮಹಿಳಾ ಮೀಸಲಿಗೆ ಮುಂದಡಿ: ಕ್ಷೇತ್ರ ಪುನರ್‌ವಿಂಗಡಣೆ ಜೋಡಣೆಗೆ ವಿಪಕ್ಷಗಳ ಆಕ್ಷೇಪ
ಒಂದು ಸಾಲಿನಲ್ಲಿಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವ 'ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026' ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಪ್ರಮುಖ ಅಂಶಗಳು• ಮಹಿಳಾ ಮೀಸಲಾತಿ ಮತ್ತು ಮಸೂದೆಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡಲು 2026ರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸುತ್ತಿದೆ.• ಕ್ಷೇತ್ರಗಳ ಸಂಖ್ಯೆ ಹೆಚ್ಚಳಪ್ರಸ್ತಾವಿತ ಮಸೂದೆಯ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.• ವಿರೋಧ ಪಕ್ಷಗಳ ಆಕ್ಷೇಪಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.• ಮರು ವಿಂಗಡಣಾ ಆಯೋಗಮಸೂದೆ ಅಂಗೀಕಾರದ ನಂತರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಕ್ಷೇತ್ರ ಪುನರ್‌ವಿಂಗಡಣಾ ಆಯೋಗ ರಚನೆಯಾಗಲಿದೆ.• ದಕ್ಷಿಣ ರಾಜ್ಯಗಳ ಕಳವಳಕ್ಷೇತ್ರಗಳ ಸಂಖ್ಯೆ ಹೆಚ್ಚಳವು ಜನಸಂಖ್ಯಾ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ರಾಜ್ಯಗಳಿಗೆ ಹಾನಿಕಾರಕವೆಂದು ವಿಪಕ್ಷಗಳು ಆರೋಪಿಸಿವೆ.ಪ್ರಮುಖ ಅಂಕಿಅಂಶಗಳು850ಲೋಕಸಭೆಯ ಗರಿಷ್ಠ ಸ್ಥಾನಗಳ ಪ್ರಸ್ತಾವ336ಕರ್ನಾಟಕದ ಪ್ರಸ್ತಾವಿತ ವಿಧಾನಸಭೆ ಸ್ಥಾನಗಳು293ಲೋಕಸಭೆಯಲ್ಲಿ ಎನ್‌ಡಿಎ ಬಲಏಪ್ರಿಲ್ 16, 17 ಮತ್ತು 18ಮಸೂದೆ ಚರ್ಚೆ ನಡೆಯುವ ದಿನಾಂಕಶೇ 50ಕ್ಷೇತ್ರಗಳ ಸಂಖ್ಯೆಯಲ್ಲಿನ ಏರಿಕೆಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ರಾಜ್ಯ ವಿಧಾನಸಭೆಗಳಿಗೂ ಶೇ 50ರಷ್ಟು ಸ್ಥಾನಗಳ ಹೆಚ್ಚಳಕ್ಕೆ ಪ್ರಸ್ತಾವ ಹೊಂದಿದ್ದರೂ ಪ್ರತಿ ವಿಧಾನಸಭೆಗೆ 500 ಸ್ಥಾನಗಳ ಗರಿಷ್ಠ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಉತ್ತರ ಪ್ರದೇಶ ವಿಧಾನಸಭೆ ಮಾತ್ರ 403ರಷ್ಟು ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಹೊಂದಿದ್ದು, ಅಲ್ಲಿ ಶೇ 50ರಷ್ಟು ಸ್ಥಾನಗಳ ಹೆಚ್ಚಳಕ್ಕೆ ಅವಕಾಶ ಇಲ್ಲ. ಮಸೂದೆ ಪ್ರಕಾರ, ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಬಂದ ಜನಗಣತಿ ವರದಿಯ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದ್ದು, ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಾತಿನಿಧ್ಯ ಒದಗಿಸಲು ಅನುವು ಮಾಡಿಕೊಡಲಿದೆ.
ಕೇಂದ್ರವು 'ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಸ್ಥಾನಗಳ ಹೆಚ್ಚಳ ಕುರಿತ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ- 2026' ಮತ್ತು 'ಕೇಂದ್ರಾಡಳಿತ ಪ್ರದೇಶಗಳ ಕಾನೂನು ಗಳು (ತಿದ್ದುಪಡಿ) ಮಸೂದೆ- 2026'ರ ಪ್ರತಿಗಳನ್ನು ಸಂಸದರಿಗೆ ವಿತರಿಸಿದೆ.
ಒಂದು ವೇಳೆ, ಕ್ಷೇತ್ರಗಳ ಸಂಖ್ಯೆಯನ್ನು ಆಯೋಗವು ಶೇ 50 ಹೆಚ್ಚಿಸಿದರೆ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಹಾಗೂ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224ರಿಂದ 336ಕ್ಕೆ ಏರಿಕೆ ಆಗಲಿದೆಕರ್ನಾಟಕ; ಶಾಸಕರ ಸಂಖ್ಯೆ 336ಕ್ಕೆ ಏರಿಕೆ?
ಕ್ಷೇತ್ರ ಮರುವಿಂಗಡಣೆ ಹಾದಿ
ಮಸೂದೆಗಳು ಅಂಗೀಕಾರವಾದ ನಂತರ, ಕ್ಷೇತ್ರ ಮರುವಿಂಗಡಣೆ ಆಯೋಗ ರಚಿಸಲಾಗುತ್ತದೆ
ಲೋಕಸಭೆ ಮತ್ತು ವಿಧಾನಸಭೆಗಳಲ್ಲಿನ ಸ್ಥಾನಗಳ ಸಂಖ್ಯೆಯನ್ನು ಆಯೋಗ ನಿರ್ಧರಿಸುತ್ತದೆ
ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರಕ್ಕೆ ವಿರೋಧ ಪಕ್ಷದ ಬೆಂಬಲ ಬೇಕಾಗುತ್ತದೆ
ಲೋಕಸಭೆಯಲ್ಲಿ ಎನ್‌ಡಿಎ 293 ಸಂಸದರನ್ನು ಹೊಂದಿದೆ. ಇಂಡಿಯಾ ಮೈತ್ರಿಕೂಟದ 234 ಸಂಸದರು ಇದ್ದಾರೆ. ಇತರರು 13 ಸಂಸದರು ಇದ್ದಾರೆ
ಎಲ್ಲ 540 ಸಂಸದರು (ಮೂರು ಖಾಲಿ ಹುದ್ದೆಗಳು) ಹಾಜರಿದ್ದರೆ, ಮಸೂದೆ ಅಂಗೀಕರಿಸಲು ಸರ್ಕಾರಕ್ಕೆ 360 ಮತಗಳು ಬೇಕಾಗುತ್ತವೆ
ಏಪ್ರಿಲ್ 16, 17ರಂದು ಲೋಕಸಭೆಯಲ್ಲಿ ಮತ್ತು ಏಪ್ರಿಲ್ 18 ರಂದು ರಾಜ್ಯಸಭೆಯಲ್ಲಿ ಮಸೂದೆ ಬಗ್ಗೆ ಚರ್ಚಿಸಲಾಗುತ್ತದೆ
ಮಸೂದೆಗೆ ಒಪ್ಪಿಗೆ ಸಿಕ್ಕ ಬಳಿಕ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ರಚನೆ ಆಗಲಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಮೂರ್ತಿ ಆಯೋಗದ ಅಧ್ಯಕ್ಷರಾಗಿರುವರು. ಮುಖ್ಯ ಚುನಾವಣಾ ಆಯುಕ್ತರು (ಅಥವಾ ನಾಮನಿರ್ದೇಶಿತ ಚುನಾವಣಾ ಆಯುಕ್ತರು) ಮತ್ತು ಸಂಬಂಧಪಟ್ಟ ರಾಜ್ಯದ ರಾಜ್ಯ ಚುನಾವಣಾ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಪ್ರತಿ ರಾಜ್ಯದಲ್ಲಿ ಆಯೋಗದ ಕಾರ್ಯನಿರ್ವಹಣೆಗೆ ಸಹಾಯ ಮಾಡಲು 10 ಸಹ ಸದಸ್ಯರನ್ನು ನೇಮಿಸಲಾಗುತ್ತದೆ. ಇದರಲ್ಲಿ ಐವರು ಸಂಸದರು ಮತ್ತು ವಿಧಾನಸಭಾಧ್ಯಕ್ಷರು ನಾಮನಿರ್ದೇಶನ ಮಾಡಿದ ಐವರು ಶಾಸಕರು ಇರಲಿದ್ದಾರೆ. ಆದಾಗ್ಯೂ, ಈ ಸಹ ಸದಸ್ಯರು ಆಯೋಗದ ನಿರ್ಧಾರಗಳಿಗೆ ಸಹಿ ಹಾಕುವ ಮತದಾನದ ಹಕ್ಕು ಅಥವಾ ಅಧಿಕಾರ ಹೊಂದಿರುವುದಿಲ್ಲ.ಆಯೋಗಕ್ಕೆ ನ್ಯಾಯಮೂರ್ತಿ ನೇತೃತ್ವ
ಮಹಿಳಾ ಮೀಸಲಾತಿ ಸವಾಲು
ಸಂವಿಧಾನ ತಿದ್ದುಪಡಿ ಮಸೂದೆಯ ಜೊತೆಗೆ, ಕೇಂದ್ರವು 2002ರ ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆ ರದ್ದುಗೊಳಿಸಲು ಮತ್ತು ಬದಲಿಸಲು 2026ರ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಯನ್ನೂ ಮಂಡಿಸಲಿದೆ.
2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲು ಜಾರಿಗೆ ತರುವ ಉದ್ದೇಶದಿಂದ ಮೂರು ಮಸೂದೆಗಳ ಕುರಿತ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಏಪ್ರಿಲ್ 16ರಿಂದ 18ರವರೆಗೆ ಅಧಿವೇಶನ ನಡೆಯಲಿದೆ.
ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರಗಳ ಅಂತಿಮ ಸಂಖ್ಯೆಯನ್ನು ನಿರ್ಧರಿಸುವ ಅಧಿಕಾರವನ್ನು ಕ್ಷೇತ್ರ ಪುನರ್‌ವಿಂಗಡಣಾ ಆಯೋಗಕ್ಕೆ ಬಿಡಲಾಗಿದೆ. ಮಸೂದೆಗೆ ಒಪ್ಪಿಗೆ ಸಿಕ್ಕ ಬಳಿಕ ಸರ್ಕಾರ ಆಯೋಗವನ್ನು ರಚಿಸಲಿದೆ.
ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾವವವು ದಕ್ಷಿಣ ರಾಜ್ಯಗಳು, ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಇರುವ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳಿಗೆ ಹಾನಿಕಾರಕವಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ.
ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆಯ ಪ್ರಕಾರ, ಈ ಮಸೂದೆಯು ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಒದಗಿಸುವ ಕಾನೂನಿನ ಜಾರಿಗೆ ಅನುವು ಮಾಡಿಕೊಡುತ್ತದೆ.
ಸ್ಥಾನಗಳ ಸಂಖ್ಯೆ ಮತ್ತು ಮಿತಿ ನಿರ್ಣಯಕ್ಕೆ ಸಂಬಂಧಿಸಿದ 81, 82 ಮತ್ತು 170ನೇ ಪರಿಚ್ಛೇದಗಳನ್ನು ತಿದ್ದುಪಡಿ ಮಾಡುವುದರ ಜೊತೆಗೆ, ಮಹಿಳಾ ಮೀಸಲಾತಿಯ ಅನುಷ್ಠಾನಕ್ಕಾಗಿ 334 (ಎ) ಪರಿಚ್ಛೇದಕ್ಕೆ ಬದಲಾವಣೆಗಳನ್ನೂ ಮಸೂದೆ ಪ್ರಸ್ತಾಪಿಸುತ್ತದೆ. ಮಹಿಳೆಯರಿಗೆ ಮೀಸಲಾಗಿರುವ ಕ್ಷೇತ್ರಗಳನ್ನು ರೋಸ್ಟರ್ (ಸರದಿ) ಪ್ರಕಾರ ಬದಲಾಯಿಸುತ್ತಾ ಹೋಗಲಾಗುತ್ತದೆ.
ಪ್ರಸ್ತುತ, ಸಂವಿಧಾನದ 82 ಮತ್ತು 170(3)ನೇ ಪರಿಚ್ಛೇದದ ಪ್ರಕಾರ ಪ್ರತಿ ಜನಗಣತಿಯ ನಂತರ ಕ್ಷೇತ್ರ ಪುನರ್‌ವಿಂಗಡಣೆಗೆ ಅವಕಾಶ ನೀಡಲಾಗಿದ್ದರೂ, ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದನ್ನು ಸ್ಥಗಿತಗೊಳಿಸಲಾಗಿತ್ತು. ಈ ಸ್ಥಗಿತವು 2001ರವರೆಗೆ ಜಾರಿಯಲ್ಲಿತ್ತು ಮತ್ತು 2002ರ ನಂತರದ ಜನಗಣತಿ ವರದಿಗೆ ಅನುಸಾರವಾಗಿ ಕ್ಷೇತ್ರ ಪುನರ್‌ವಿಂಗಡಣೆ ಮಾಡಲಾಗಿತ್ತು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿವೆ. ವಿಶೇಷವಾಗಿ, ಉತ್ತರ ಪ್ರದೇಶ ಮತ್ತು ಉತ್ತರ ಭಾರತದ ಇತರ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಈ ರಾಜ್ಯಗಳಿಗೆ ಅನನುಕೂಲ ಆಗಬಾರದು ಎಂಬ ಕಾರಣಕ್ಕೆ 1971ರ ಜನಗಣತಿಯ ಆಧಾರದಲ್ಲಿ ಸ್ಥಾನಗಳ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿತ್ತು.

