ವಾಷಿಂಗ್ಟನ್/ಟೆಹರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಕದನ ವಿರಾಮ ಘೋಷಿಸಿ 24 ಗಂಟೆ ಕಳೆಯುವ ಮುನ್ನವೇ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ.
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮವನ್ನು ಬುಧವಾರ ಘೋಷಿಸಲಾಗಿತ್ತು. ಈ ಒಪ್ಪಂದದ ಭಾಗವಾಗಿ ಜಾಗತಿಕ ಇಂಧನ ಪೂರೈಕೆಯನ್ನು ಸುಗಮಗೊಳಿಸಲು ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಒಪ್ಪಿಕೊಂಡಿತ್ತು. ಆದರೆ, ಇಸ್ರೇಲ್ ಸೇನೆ ಕೇವಲ ಹತ್ತೇ ನಿಮಿಷಗಳಲ್ಲಿ ಲೆಬನಾನ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಲೆಬನಾನ್ ಮತ್ತು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ದಾಳಿಯಲ್ಲಿ 112 ಮಂದಿ ಮೃತಪಟ್ಟಿದ್ದು, 837 ಮಂದಿ ಗಾಯಗೊಂಡಿದ್ದಾರೆ. ಇದು ಇರಾನ್ನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇರಾನ್ ಜೊತೆಗಿನ ಅಮೆರಿಕದ ಕದನ ವಿರಾಮ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹಿರಂಗವಾಗಿ ಬೆಂಬಲಿಸಿದ್ದಾರೆಯಾದರೂ, ಈ ಒಪ್ಪಂದವು ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಇರಾನ್ ತಕ್ಷಣವೇ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಅಮೆರಿಕ, ಇಸ್ರೇಲ್ ಮೇಲಿನ ದಾಳಿಗಳನ್ನು ನಿಲ್ಲಿಸುವ ಷರತ್ತಿನ ಆಧಾರದ ಮೇಲೆ, ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸುತ್ತೇವೆ' ಎಂದೂ ನೆತನ್ಯಾಹು ತಿಳಿಸಿದ್ದಾರೆ.
'ಅಮೆರಿಕ, ಇಸ್ರೇಲ್, ಅರಬ್ ರಾಷ್ಟ್ರಗಳು ಸೇರಿದಂತೆ ಇಡೀ ಜಗತ್ತಿಗೆ ಇರಾನ್ನಿಂದ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನೆಯ ಬೆದರಿಕೆ ಇಲ್ಲದಂತೆ ಮಾಡುವ ಅಮೆರಿಕದ ಪ್ರಯತ್ನವನ್ನೂ ಇಸ್ರೇಲ್ ಬೆಂಬಲಿಸುತ್ತದೆ. ಆದರೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ಬೆದರಿಕೆಯನ್ನು ಹತ್ತಿಕ್ಕುವ ಉದ್ದೇಶದಿಂದ ದಕ್ಷಿಣ ಲೆಬನಾನ್ನಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ' ಎಂದು ನೆತನ್ಯಾಹು ಹೇಳಿದ್ದಾರೆ.
ಅಮೆರಿಕ ಹೇಳಿದ್ದೇನು?
ಕದನ ವಿರಾಮದ ಹೊರತಾಗಿಯೂ 'ಹೊರ್ಮುಜ್ ಜಲಸಂಧಿ'ಯನ್ನು ಮುಚ್ಚಿರುವುದು ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ತಿಳಿಸಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ತಕ್ಷಣ ಮತ್ತು ಸುರಕ್ಷಿತವಾಗಿ ಮುಕ್ತಗೊಳಿಸಬೇಕು ಎಂಬುದು ಟ್ರಂಪ್ ಅವರ ಬೇಡಿಕೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಇಸ್ರೇಲ್ ದಾಳಿಗೆ ಟ್ರಂಪ್ ಬೆಂಬಲ: ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ಟ್ರಂಪ್ ಬೆಂಬಲಿಸಿದ್ದಾರೆ. ವಾಷಿಂಗ್ಟನ್ ಮತ್ತು ಟೆಹರಾನ್ ನಡುವಿನ ಒಪ್ಪಂದದಲ್ಲಿ ಹಿಜ್ಬುಲ್ಲಾ ಭಾಗವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕದನ ವಿರಾಮದ ನಡುವೆಯೂ ಲೆಬನಾನ್ ಅನ್ನು ಏಕೆ ಗುರಿಯಾಗಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ಹೌದು, ಹಿಜ್ಬುಲ್ಲಾ ಬಂಡುಕೋರರನ್ನು ಒಪ್ಪಂದದಲ್ಲಿ ಸೇರಿಸಿಲ್ಲ. ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು, ಎಲ್ಲವೂ ಸರಿಯಾಗಲಿದೆ' ಎಂದಿದ್ದಾರೆ.: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಕದನ ವಿರಾಮ ಘೋಷಿಸಿ 24 ಗಂಟೆ ಕಳೆಯುವ ಮುನ್ನವೇ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್, ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದೆ.
ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮವನ್ನು ಬುಧವಾರ ಘೋಷಿಸಲಾಗಿತ್ತು. ಈ ಒಪ್ಪಂದದ ಭಾಗವಾಗಿ ಜಾಗತಿಕ ಇಂಧನ ಪೂರೈಕೆಯನ್ನು ಸುಗಮಗೊಳಿಸಲು ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಇರಾನ್ ಒಪ್ಪಿಕೊಂಡಿತ್ತು. ಆದರೆ, ಇಸ್ರೇಲ್ ಸೇನೆ ಕೇವಲ ಹತ್ತೇ ನಿಮಿಷಗಳಲ್ಲಿ ಲೆಬನಾನ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿಗಳನ್ನು ನಡೆಸಿದೆ.
ಲೆಬನಾನ್ ಮತ್ತು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ದಾಳಿಯಲ್ಲಿ 112 ಮಂದಿ ಮೃತಪಟ್ಟಿದ್ದು, 837 ಮಂದಿ ಗಾಯಗೊಂಡಿದ್ದಾರೆ. ಇದು ಇರಾನ್ನ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇರಾನ್ ಜೊತೆಗಿನ ಅಮೆರಿಕದ ಕದನ ವಿರಾಮ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹಿರಂಗವಾಗಿ ಬೆಂಬಲಿಸಿದ್ದಾರೆಯಾದರೂ, ಈ ಒಪ್ಪಂದವು ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಇರಾನ್ ತಕ್ಷಣವೇ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದು ಮತ್ತು ಅಮೆರಿಕ, ಇಸ್ರೇಲ್ ಮೇಲಿನ ದಾಳಿಗಳನ್ನು ನಿಲ್ಲಿಸುವ ಷರತ್ತಿನ ಆಧಾರದ ಮೇಲೆ, ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ನಿಲ್ಲಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸುತ್ತೇವೆ' ಎಂದೂ ನೆತನ್ಯಾಹು ತಿಳಿಸಿದ್ದಾರೆ.
'ಅಮೆರಿಕ, ಇಸ್ರೇಲ್, ಅರಬ್ ರಾಷ್ಟ್ರಗಳು ಸೇರಿದಂತೆ ಇಡೀ ಜಗತ್ತಿಗೆ ಇರಾನ್ನಿಂದ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನೆಯ ಬೆದರಿಕೆ ಇಲ್ಲದಂತೆ ಮಾಡುವ ಅಮೆರಿಕದ ಪ್ರಯತ್ನವನ್ನೂ ಇಸ್ರೇಲ್ ಬೆಂಬಲಿಸುತ್ತದೆ. ಆದರೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಯ ಬೆದರಿಕೆಯನ್ನು ಹತ್ತಿಕ್ಕುವ ಉದ್ದೇಶದಿಂದ ದಕ್ಷಿಣ ಲೆಬನಾನ್ನಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ' ಎಂದು ನೆತನ್ಯಾಹು ಹೇಳಿದ್ದಾರೆ.
ಅಮೆರಿಕ ಹೇಳಿದ್ದೇನು?
ಕದನ ವಿರಾಮದ ಹೊರತಾಗಿಯೂ 'ಹೊರ್ಮುಜ್ ಜಲಸಂಧಿ'ಯನ್ನು ಮುಚ್ಚಿರುವುದು ಸ್ವೀಕಾರಾರ್ಹವಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆರೋಲಿನ್ ಲೀವಿಟ್ ತಿಳಿಸಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ತಕ್ಷಣ ಮತ್ತು ಸುರಕ್ಷಿತವಾಗಿ ಮುಕ್ತಗೊಳಿಸಬೇಕು ಎಂಬುದು ಟ್ರಂಪ್ ಅವರ ಬೇಡಿಕೆಯಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಇಸ್ರೇಲ್ ದಾಳಿಗೆ ಟ್ರಂಪ್ ಬೆಂಬಲ: ಲೆಬನಾನ್ ಮೇಲಿನ ಇಸ್ರೇಲ್ ದಾಳಿಯನ್ನು ಟ್ರಂಪ್ ಬೆಂಬಲಿಸಿದ್ದಾರೆ. ವಾಷಿಂಗ್ಟನ್ ಮತ್ತು ಟೆಹರಾನ್ ನಡುವಿನ ಒಪ್ಪಂದದಲ್ಲಿ ಹಿಜ್ಬುಲ್ಲಾ ಭಾಗವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕದನ ವಿರಾಮದ ನಡುವೆಯೂ ಲೆಬನಾನ್ ಅನ್ನು ಏಕೆ ಗುರಿಯಾಗಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ಹೌದು, ಹಿಜ್ಬುಲ್ಲಾ ಬಂಡುಕೋರರನ್ನು ಒಪ್ಪಂದದಲ್ಲಿ ಸೇರಿಸಿಲ್ಲ. ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು, ಎಲ್ಲವೂ ಸರಿಯಾಗಲಿದೆ' ಎಂದಿದ್ದಾರೆ.