ಕಾಸರಗೋಡು: ನಗರದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಶ್ರೀಮೂಕಾಂಬಿಕಾ ದೇವಿಗೆ ಏ. 30ರಂದು ಬೆಳಗ್ಗೆ 9.30ರಿಂದ 11ರ ತನಕ ಒದಗುವ ಶುಭ ಮುಹೂರ್ತದಲ್ಲಿ 'ಬ್ರಹ್ಮಕಲಶಾಭಿಷೇಕ' ನೆರವೇರಲಿದೆ.
ಕ್ಷೇತ್ರದ ತಂತ್ರಿವರ್ಯ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ಅವರ ನೇತೃತ್ವದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 6ಕ್ಕೆ ಗಣಪತಿಹೋಮ, ಸಾಮೂಹಿಕ ಪ್ರಾರ್ಥನೆ, ಕವಾಟೋದ್ಘಾಟನೆ, ಶ್ರೀ ದೇವಿ ಹಾಗೂ ಪರಿವಾರ ದೈವ ದೇವರುಗಳಿಗೆ ಬೆಳಗ್ಗೆ 9.30ರಿಂದ 11.00 ಗಂಟೆಯ ತನಕ ಒದಗುವ ಶುಭ ಮುಹೂರ್ತದಲ್ಲಿ 'ಬ್ರಹ್ಮಕಲಶಾಭಿಷೇಕ' ನಿತ್ಯನೈಮಿತ್ತಿಕ ಕಾರ್ಯಗಳ ನಿರ್ಣಯ, 11.30ಕ್ಕೆ ನಾಗತಂಬಿಲ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯುವುದು.
ಸಂಜೆ 6.55ಕ್ಕೆ ದೀಪಾರಾಧನೆ, ರಾತ್ರಿ 7.30 : ಅಂಜನೇಯ ಸೇವೆ, ವೀರಭದ್ರನಿಗೆ ವಿಶೇಷ ಮಹಾಪೂಜೆ, 9ಕ್ಕೆ ಶ್ರೀ ದೇವಿಯ ಮಹಾಪೂಜೆ ನಡೆಯುವುದು.
ಶೀ ಸರಸ್ವತೀ ಮಂಟಪದಲ್ಲಿ ಬೆಳಗ್ಗೆ 6ರಿಂದ ವಿವಿಧ ತಂಡಗಳಿಂದ ಭಜನೆ, ಯಕ್ಷಗಾನ ತಾಳಮದ್ದಳೆ, ರಾತ್ರಿ 8ಕ್ಕೆ ಶ್ರೀ ಮೂಕಾಂಬಿಕಾ ವೇದಿಕೆಯಲ್ಲಿ ರಾತ್ರಿ 8ಕ್ಕೆ ಲಯನ್ಸ್ ಕಿಶೋರ್ ಡಿ ಶೆಟ್ಟಿಯವರ ರಚನೆ ಮತ್ತು ನಿರ್ದೇಶನದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರ್ ಅಭಿನಯಿಸುವ 'ಅಂಟೀ ಬೊಕ್ಕ ಅಂಕಲ್' ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳುವುದು.
ಮೇ 1ರಂದು ಬೆಳಗ್ಗೆ 9ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ ದೀಪಾರಾಧನೆ, ರಾತ್ರಿ 8ಕ್ಕೆ ಶ್ರೀದೇವಿಯ ಮಹಾಪೂಜೆ, ಶಕ್ತಿಪೂಜೆ, ಮಂಗಳಸೇವೆ ನಡೆಯುವುದು. ಸಂಜೆ 5ಕ್ಕೆ ನಡೆಯುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನಿಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷಡಾ. ಕೆ.ಎನ್. ವೆಂಕಟರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ತಂತ್ರವರ್ಯರಾದ ರವೀಶ್ ತಂತ್ರಿ ಕುಂಟಾರು ಹಾಗೂ ಶ್ರೀಕೃಷ್ಣ ಗುರೂಜಿ ಕುಕ್ಕಾಜೆ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಭಾಚಣ ಮಾಡುವರು. ದೈವ ನರ್ತಕರು ಹಾಗೂ ಉಪನ್ಯಾಸಕ ಡಾ. ರವೀಶ್ ಪಡುಮಲೆ ಧಾರ್ಮಿಕ ಭಾಷಣ ಮಾಡುವರು. ಸಂಜೆ 7.30ಕ್ಕೆ ನೃತ್ಯ ವೈಭವ, ರಾತ್ರಿ 9ಕ್ಕೆ ಚಲನಚಿತ್ರ ಹಿನ್ನೆಲೆ ಗಾಯಕ, ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ರಮೇಶ್ಚಂದ್ರ ಬೆಂಗಳೂರು ಹಾಗೂ ಪ್ರಸಿದ್ಧ ಕಲಾವಿದರ ಸಹಯೋಗದೊಂದಿಗೆ ಸುಗಮ ಸಂಗೀತ ನಡೆಯುವುದು.
ಮೇ 2ರಂದು ಸಂಜೆ 5ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 6ಕ್ಕೆ ಶ್ರೀ ಗುಳಿಗ ದೈವದ ಕೋಲ, ರಾತ್ರಿ 8ಕ್ಕೆ ಶ್ರೀ ಕೊರಗ ತನಿಯ ದೈವದ ಜೋಡಿಕೋಲ ನಡೆಯಲಿರುವುದು.

