HEALTH TIPS

ಒಂದೇ ದಿನ ಸರ್ವಋತು ಹವಾಮಾನಕ್ಕೆ ಸಾಕ್ಷಿಯಾದ ದೆಹಲಿ!

 ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನ ತೀವ್ರ ಸೆಕೆಯ ವಾತಾವರಣ ಮುಂದುವರಿದಿದ್ದು, ಪ್ರಸಕ್ತ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 41 ಡಿಗ್ರಿ ಸೆಲ್ಷಿಯಸ್ ತಲುಪಿದೆ. ಆದರೆ ಸಂಜೆ ಅನಿರೀಕ್ಷಿತ ಮಳೆ ಬಿದ್ದಿದ್ದು, ರಾತ್ರಿ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ. 


ಸಂಜೆ ವೇಳೆಗೆ ದೆಹಲಿ- ಎನ್ಸಿಆರ್ ಪ್ರದೇಶಗಳಲ್ಲಿ ಗುಡುಗು ಸಹಿತ ತೀವ್ರ ಮಳೆ, ರಭಸದ ಗಾಳಿ ಕಾರಣದಿಂದ ಪ್ರಮುಖ ಮಾರ್ಗಗಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಇದರಿಂದಾಗಿ ಪ್ರಯಾಣಿಕರು ಸಿಕ್ಕಿಹಾಕಿಕೊಂಡರು.

ಆದರೆ ಶನಿವಾರ ಅಥವಾ ರವಿವಾರ ಮಳೆ ಅಥವಾ ಗಾಳಿ ಬಗ್ಗೆ ಐಎಂಡಿ ಯಾವುದೇ ಮುನ್ಸೂಚನೆ ನೀಡಿಲ್ಲ. ಗರಿಷ್ಠ ತಾಪಮಾನ ಶನಿವಾರ 39-41 ಡಿಗ್ರಿ ಸೆಲ್ಷಿಯಸ್ ಹಾಗೂ ರವಿವಾರ 40-42 ಡಿಗ್ರಿ ಇರುವ ನಿರೀಕ್ಷೆ ಇದೆ. ರವಿವಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.

ಶುಕ್ರವಾರ ಬೆಳಿಗ್ಗೆ ತೇವಾಂಶದಿಂದ ಕೂಡಿದ್ದ ವಾತಾವರಣವಿದ್ದು, ನಗರದಲ್ಲಿ ಲಘು ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ಆರ್ದ್ರತೆ ಹೆಚ್ಚಿದ್ದು, ತಾಪಮಾನವನ್ನು ವಾಡಿಕೆಗಿಂತ ಅಧಿಕಗೊಳಿಸಿದೆ. ಸಫ್ದರ್ಜಂಗ್ ಮಾಪನ ಕೇಂದ್ರದಲ್ಲಿ ಗರಿಷ್ಠ 41 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದ್ದು, ಇದು ವಾಡಿಕೆ ತಾಪಮಾನಕ್ಕಿಂತ 4 ಡಿಗ್ರಿಯಷ್ಟು ಅಧಿಕ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಷಿಯಸ್ ಇದ್ದು, ಇದು ಕೂಡಾ ವಾಡಿಕೆಯ ಸರಾಸರಿಗಿಂತ ಅಧಿಕ.

ಆದರೆ ಸಂಜೆ 4 ಗಂಟೆಯಿಂದ 6 ಗಂಟೆಯ ವೇಳೆಗೆ ಲಘು ಮಳೆಯ ಕಾರಣದಿಂದ ತಾಪಮಾನ ನಗರದ ವಿವಿಧೆಡೆಗಳಲ್ಲಿ 4-10 ಡಿಗ್ರಿವರೆಗೂ ಕುಸಿಯಿತು. ಇದರಿಂದ ಜನತೆ ನಿರಾಳವಾದರು. ಆದರೆ ಸಂಜೆ 5.30ರಿಂದ 8.30ರ ಅವಧಿಯಲ್ಲಿ ನಗರದಾದ್ಯಂತ ಭಾರಿ ಮಳೆ ಬಿದ್ದಿದ್ದು, ಸಫ್ದರ್ಜಂಗ್ ನಲ್ಲಿ 10.4 ಮಿಲಿಮೀಟರ್, ಪಾಲಂನಲ್ಲಿ 16 ಮಿಲಿಮೀಟರ್, ಪುಸಾದಲ್ಲಿ 8 ಮಿಲಿಮೀಟರ್, ಮಯೂರ ವಿಹಾರದಲ್ಲಿ 6.5 ಮಿಲಿಮೀಟರ್ ಮಳೆ ಬಿದ್ದಿದೆ. ಬಲವಾದ ಗಾಳಿ ಬೀಸುತ್ತಿದ್ದು, ರಾತ್ರಿ 8ರ ವೇಳೆಗೆ ಪಾಲಂನಲ್ಲಿ ಗಾಳಿಯ ವೇಗ ಗಂಟೆಗೆ 55 ಕಿಲೋಮೀಟರ್ ತಲುಪಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries