ಆಲಪ್ಪುಳ: ಆಲಪ್ಪುಳ ಸೇಂಟ್ ಸೆಬಾಸ್ಟಿಯನ್ಸ್ ಎಲ್ ಪಿ ಶಾಲೆ ವಿಧಾನಸಭಾ ಚುನಾವಣೆಯಲ್ಲಿ ಚಿತ್ರರಂಗದ ಜನರ ಉಪಸ್ಥಿತಿಯಿಂದ ಗಮನ ಸೆಳೆದಿದೆ. ನಿರ್ದೇಶಕ ಫಾಸಿಲ್, ತಾರೆಯರಾದ ಫಹಾದ್ ಫಾಸಿಲ್, ಕುಂಚಾಕೋ ಬೋಬನ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಇಲ್ಲಿ ಮತದಾನ ಮಾಡಿದರು. ಮತಗಟ್ಟೆ ಸಂಖ್ಯೆ 218ರಲ್ಲಿ ಬೆಳಗ್ಗೆ 11 ಗಂಟೆಗೆ ಫಾಸಿಲ್ ಮತ ಚಲಾಯಿಸಿದರು.
ಕುಂಚಾಕೊ ಬೋಬನ್ ಎರ್ನಾಕುಳಂ ಶೂಟಿಂಗ್ ಸೆಟ್ನಿಂದ ನೇರವಾಗಿÁಗಮಿಸಿ ಮತ ಚಲಾಯಿಸಿದರು. ನಟ ಫಹಾದ್ ಫಾಸಿಲ್ ಮತ್ತು ಅವರ ಸಹೋದರ ಫರ್ಹಾನ್ ಫಾಸಿಲ್ ಕೂಡ ಮಧ್ಯಾಹ್ನ ಮತ ಚಲಾಯಿಸಿದರು. ಹೈದರಾಬಾದ್ನಲ್ಲಿರುವ ತೆಲುಗು ಚಿತ್ರವೊಂದರ ಶೂಟಿಂಗ್ ಸ್ಥಳದಿಂದ ಕೊಚ್ಚಿಗೆ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಆಲಪ್ಪುಳಕ್ಕೆ ಬಂದು ಮತ ಚಲಾಯಿಸಿದರು. ಇಬ್ಬರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಥೆಗಾರ ಶಾಹಿ ಕಬೀರ್ ಇದೇ ಶಾಲೆಯಲ್ಲಿ ಮತದಾನ ಮಾಡಿದರು.

