HEALTH TIPS

ವಿದೇಶದಿಂದ ಕೇರಳಕ್ಕೆ ಆಡಂಬರ ವಾಹನಗಳ ಕಳ್ಳಸಾಗಾಟ-ಭೂತಾನ್ ಕಸ್ಟಮ್ಸ್ ತಂಡದಿಂದ ಕೇರಳದಲ್ಲಿ ತನಿಖೆ

ಕೊಚ್ಚಿ: ವಿದೇಶಿ ವಾಹನಗಳನ್ನು ಕಳ್ಳ ಸಾಗಾಟ ಮೂಲಕ ಕೇರಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳಿಗೆ ಪೂರೈಸುತ್ತಿರುವ ಜಾಲದ ಬಗ್ಗೆ ತನಿಖೆ ನಡೆಸಲು ಭೂತಾನ್‍ನ ಕಸ್ಟಮ್ಸ್ ತಂಡ ಕೇರಳಕ್ಕೆ ಆಗಮಿಸಿದೆ. ಈ ಪ್ರಕರಣದ ಬಗ್ಗೆ ಭಾರತ ಮತ್ತು ಭೂತಾನ್‍ನ ಸಂಯುಕ್ತ ಕಸ್ಟಮ್ಸ್ ಗ್ರೂಪ್ ತನಿಖೆ ನಡೆಸಲಿದೆ. 

ಭೂತಾನ್ ಕಸ್ಟಮ್ಸ್ ಕಮಿಶನರ್ ಸೇರಿದಂತೆ 10 ಮಂದಿಯ ತಂಡ ತನಿಖೆಗಾಗಿ ಕೇರಳಕ್ಕೆ ಆಗಮಿಸಿದ್ದು, ತಂಡ ಕೊಚ್ಚಿಯಲ್ಲಿ ಭಾರತೀಯ ಕಸ್ಟಮ್ಸ್ ವಿಭಾಗದ ಅಧಿಕಾರಿಗಳೊಂದಿಗೆ  ಸಮಾಲೋಚನೆ ನಡೆಸಿತು.  ವಿದೇಶದಿಂದ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ 15 ಸಾವಿರದಷ್ಟು ಆಡಂಬರ ವಾಹನಗಳನ್ನು ಕಳ್ಳ ಸಾಗಾಟದ ಮೂಲಕ ಹಾಗೂ ತೆರಿಗೆ ವಂಚಿಸಿ ಸಾಗಿಸಲಾಗಿದ್ದು,  ಇಂತಹ ವಾಹನಗಳನ್ನು ಈಶಾನ್ಯ ರಾಜ್ಯಗಳಲ್ಲಿ ನಕಲಿಯಾಗಿ ನೋಂದಾವಣೆ ನಡೆಸಿರುವುದಾಗಿಯೂ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಹೀಗೆ ಸಾಗಿಸಲಾಗುವ ವಾಹನಗಳಲ್ಲಿ ಕಾರುಗಳು, ಬೈಕ್‍ಗಳು ಸೇರಿ ಹಲವು ಆಡಂಬರ ವಾಹನಗಳು ಒಳಗೊಂಡಿವೆ. ಕಳ್ಳ ಸಾಗಾಟದಿಂದ ಭಾರತ ಸರ್ಕಾರಕ್ಕೆ  ಕೋಟ್ಯಂತರ ರೂ. ತೆರಿಗೆ ವಂಚನೆ ನಡೆಸಲಾಗಿದೆಯೆಂಬುವುದನ್ನೂ ಪತ್ತೆಹಚ್ಚಲಾಗಿದೆ. ಇದರಲ್ಲಿ 466 ವಾಹನಗಳನ್ನು ಆಸ್ಟ್ರೇಲಿಯ ನೋಂದಾಯಿಸಿದ್ದು ಅದರಲ್ಲಿ ಹಲವು ವಾಹನಗಳನ್ನು ಕೇರಳಕ್ಕೆ ಸಾಗಿಸಲಾಗಿದೆ. ಮಲೆಯಾಳ ಚಿತ್ರರಂಗದ ನಾಯಕ ನಟರೊಬ್ಬರ ಪುತ್ರ ಈ ರೀತಿ ಕೇರಳಕ್ಕೆ ಸಾಗಿಸಲಾದ ವಾಹನವೊಂದನ್ನು ಖರೀದಿಸಿರುವುದೂ ತನಿಖೆಯಲ್ಲಿ ಬಹಿರಂಗಗೊಂಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries