HEALTH TIPS

'ನಿರ್ಮಮ್' ಸರ್ಕಾರ ಕಿತ್ತೊಗೆಯಿರಿ: ಪಶ್ಚಿಮ ಬಂಗಾಳದ ಮತದಾರರಿಗೆ ಮೋದಿ ಕರೆ

ಹಲ್ದಿಯಾ: ಚುನಾವಣೆ ಹೊಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆ‍ಪಿ ಪರವಾಗಿ ಗುರುವಾರ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಜತೆಗೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಮತದಾರರನ್ನು ಪ್ರಧಾನಿ ಆಗ್ರಹಿಸಿದ್ದಾರೆ.

ಪುರ್ಬಾ ಮೇದಿನಿಪುರದ ಬಂದರು ನಗರಿ 'ಹ‌ಲ್ದಿಯಾ'ದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ ರ‍್ಯಾಲಿ ನಡೆಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ನೇತೃತ್ವದ ಸರ್ಕಾರವನ್ನು'ನಿರ್ಮಮ್' (ಮಮಕಾರವೇ ಇಲ್ಲದ; ಕ್ರೂರ) ಸರ್ಕಾರ ಎಂದು ಮೋದಿ ಕರೆದಿದ್ದಾರೆ.

'ಇಡೀ ದೇಶವು ಅಭಿವೃದ್ಧಿಯ ಮಾರ್ಗದಲ್ಲಿ ನಡೆಯುತ್ತಿದ್ದರೆ, ಇತ್ತ ಮಮತಾ ಅವರ 'ನಿರ್ಮಮ್‌' ಸರ್ಕಾರ ರಾಜ್ಯವನ್ನು ಹಿಂದುಳಿಯುವಂತೆ ಮಾಡುತ್ತಿದೆ. ಪಶ್ಚಿಮ ಬಂಗಾಳವು ವಿಕಸಿತ ಬಂಗಾಳವಾಗಬೇಕಾದರೆ ಟಿಎಂಸಿಯನ್ನು ಕಿತ್ತೊಗೆಯಬೇಕು' ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ

ಟಿಎಂಸಿ ಆಡಳಿತದಲ್ಲಿ ಭಯದ ವಾತಾವರಣ ಆವರಿಸಿಕೊಂಡಿದೆ. ಎಲ್ಲಿ ಭಯವಿರುತ್ತದೆಯೋ ಅಲ್ಲಿ ಹೂಡಿಕೆ ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಾಸದ ವಾತಾವರಣ ಸೃಷ್ಟಿಸಿ, ನಂಬಿಕೆ ಆಧಾರದಲ್ಲಿ ಹೂಡಿಕೆಗಳನ್ನು ರಾಜ್ಯಕ್ಕೆ ತರಲಿದೆ ಎಂದೂ ಮೋದಿ ಭರವಸೆ ನೀಡಿದ್ದಾರೆ. ಅಲ್ಲದೇ, ಮೀನುಗಾರಿಕೆ ಮತ್ತು ಸಾಗರ ಆಹಾರೋತ್ಪನ್ನ ವಲಯದಲ್ಲಿ ರಾಜ್ಯವನ್ನು ಸ್ವಾವಲಂಬಿಯಾಗಿಸುವುದಾಗಿಯೂ ಹೇಳಿದ್ದಾರೆ.

ಆರು ಮೋದಿ ಗ್ಯಾರಂಟಿಗಳು:

  • ಟಿಎಂಸಿ ಆಡಳಿತದಲ್ಲಿರುವ ಭಯದ ವಾತಾವರಣವನ್ನು ತೊಡೆದುಹಾಕಿ ವಿಶ್ವಾಸ, ನಂಬಿಕೆ ಆಧರಿತ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು

  • ಸಾರ್ವಜನಿಕ ಸೇವೆಯಲ್ಲಿರುವವರು ತೆಗೆದುಕೊಳ್ಳುವ ಎಲ್ಲಾ ಕ್ರಮಗಳು ಸಾರ್ವಜನಿಕರಿಗೆ ಉತ್ತರದಾಯಿ ಆಗಿರುವಂತೆ ಮಾಡುವುದು

  • ಟಿಎಂಸಿ ಮುಚ್ಚಿಹಾಕಿರುವ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳು, ಮಹಿಳೆಯರ ವಿರುದ್ಧದ ದೌರ್ಜನ್ಯ ‍ಪ್ರಕರಣಗಳನ್ನು ಬಿಜೆಪಿ ಮತ್ತೆ ತೆರೆದು ತನಿಖೆ ನಡೆಸಲಿದೆ

  • ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲಾ ನಾಯಕರನ್ನೂ ಜೈಲಿಗೆ ಕಳುಹಿಸಲಾಗುವುದು, ಟಿಎಂಸಿಯ ಯಾವ ಗೂಂಡಾ ಕೂಡ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು

  • ಎಲ್ಲಾ ಅರ್ಹ ನಾಗರಿಕರಿಗೆ ಸರ್ಕಾರದ ಸೌಲಭ್ಯ, ಯೋಜನೆ ತಲುಪುವಂತೆ ಮಾಡಲಾಗುವುದು. ನುಸುಳುಕೋರರಿಗೆ ದೇಶದಲ್ಲಿ ಇರಲು ಅವಕಾಶ ನೀಡಲಾಗದು

  • ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗಾಗಿ 7ನೇ ಹಣಕಾಸು ಆಯೋಗವನ್ನು ಬಿಜೆಪಿ ಸರ್ಕಾರ ರಚನೆಯಾದ ತಕ್ಷಣವೇ ಅನುಷ್ಠಾನಗೊಳಿಸಲಾಗುವುದು

ನಾರಿಶಕ್ತಿಯ ಒಟ್ಟಾಗಿ ಬಲಪಡಿಸೋಣ: ಮೋದಿ

ನವದೆಹಲಿ: ಮಹಿಳಾ ಮೀಸಲಾತಿ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಯು ಕೇವಲ ಶಾಸನ ಜಾರಿ ಪ್ರಕ್ರಿಯೆ ಅಲ್ಲ. ಬದಲಿಗೆ ಭಾರತದಾದ್ಯಂತ ಕೋಟ್ಯಂತರ ಮಹಿಳೆಯರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಈ ಕ್ರಮವನ್ನು ಬೆಂಬಲಿಸಲು ಎಲ್ಲಾ ಸಂಸದರೂ ಒಟ್ಟಾಗಬೇಕು ಎಂದು ಪ್ರಧಾನಿ ಮೋದಿ ಗುರುವಾರ ಕರೆ ನೀಡಿದ್ದಾರೆ.

'ನಾರಿ ಶಕ್ತಿ ವಂದನಾ ಅಧಿನಿಯಮ' ಅಥವಾ ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಕರಡು ಮಸೂದೆಗಳಿಗೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆ ನೀಡಿದೆ. 2029ರ ಸಾರ್ವತ್ರಿಕ ಚುನಾವಣೆಯಿಂದಲೇ ಮೀಸಲು ಅನ್ವಯಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಗುರುವಾರ ತಮ್ಮ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಮಸೂದೆಗೆ ಬೆಂಬಲ ಸೂಚಿಸುವಂತೆ ಸಂಸದರನ್ನು ಕೋರಿದ್ದಾರೆ.

ಜತೆಗೆ ಮಹಿಳಾ ಮೀಸಲಾತಿಯ ಬಗ್ಗೆ ಚರ್ಚಿಸಲು ಹಾಗೂ ಮಸೂದೆಯನ್ನು ಅಂಗೀಕರಿಸಲು ಸಂಸತ್‌ನ ಬಜೆಟ್ ಅಧಿವೇಶನವನ್ನು ವಿಸ್ತರಿಸಲಾಗಿದೆ ಏಪ್ರಿಲ್‌ 16ರಿಂದ 18ರವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದೂ ತಿಳಿಸಿದ್ದಾರೆ.

ಅಲ್ಲದೇ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ನಾರಿ ಶಕ್ತಿಯನ್ನು ಬಲಪಡಿಸಲು ಈ ಅವಕಾಶವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳೋಣ ಎಂದೂ ಪ್ರಧಾನಿ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries