ಮುಳ್ಳೇರಿಯ: ಕೇರಳದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಎಡಪಕ್ಷ ಕೇರಳವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಅಧಃಪತನಕ್ಕೆ ತಳ್ಳಿದ್ದಾರೆ. ಆ ಹಿಂದಿನ ಉಮ್ಮನ್ ಚಾಂಡಿಯವರ ಅಭಿವೃದ್ಧಿಯನ್ನು ಮೂಲೆಗೆಸೆಯಲಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಕರ್ನಾಟಕದಲ್ಲಿ 2.5ಶೇ. ನಿರುದ್ಯೋಗ ಪ್ರಮಾಣವಬಿದ್ದರೆ ಕೇರಳದಲ್ಲದು 8 ಶೇ.ಕ್ಕೇರಲು ಕಾರಣ ಎಡಪಕ್ಷದ ದುರಾಡಳಿತವಾಗಿದೆ. ಈ ರಾಜ್ಯವನ್ನು ಬೃಹತ್ ಸಾಲದ ಕೂಪಕ್ಕೆ ಎಡಪಕ್ಷ ತಳ್ಳಿರುವುದರಿಂದ ಇಲ್ಲಿಯ ಯುವ ಸಮೂಹ ಉದ್ಯೋಗ ಅರಸಿ ದೇಶ-ವಿದೇಶಕ್ಕೆ ಪಲಾಯನ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಭಾ ಪಲಾಯನ ತಡೆಗಟ್ಟಲು ಮತ್ತೆ ಕಾಂಗ್ರೆಸ್ಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿಯಾಗಿ ಕಣದಲ್ಲಿರುವ ಕಲ್ಲಟ್ರ ಮಾಹಿನ್ ಪರ ಮತಯಾಚಿಸಲು ಭಾನುವಾರ ಸಂಜೆ ಮುಳ್ಳೇರಿಯ ಪೇಟೆಯಲ್ಲಿ ಆಯೋಜಿಸಲಾದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಹಣದುಬ್ಬರ ಪ್ರಮಾಣ 8.05ರಷ್ಟಿದ್ದರೆ, ಕರ್ನಾಟಕದಲ್ಲಿ ಆ ಪ್ರಮಾಣ 2 ರಿಂದ 4 ಶೇ.ಮಾತ್ರ ಇದ್ದು ಕಾರಣ ಕಾಂಗ್ರೆಸ್ಸ್ ಸರ್ಕಾರದ ಜನಪರ ಆಡಳಿತವಾಗಿದೆ. ಕಾಸರಗೋಡು ಕ್ಷೇತ್ರದ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ಅಭಿವೃದ್ಧಿಪರ ಕೇರಳವನ್ನು ಸಾಕಾರಗೊಳಿಸಲು ಮತದಾರರು ಮತ ಚಲಾಯಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭ ಅಭ್ಯರ್ಥಿ ಕಲ್ಲಟ್ರ ಮಾಹಿನ್, ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,Á್ಮಜಿ ಶಾಸಕ ರಮಾನಾಥ ರೈ, ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ.ಫೈಝಲ್, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಸದಸ್ಯ ವಕೀಲ ಸುಬ್ಬಯ್ಯ ರೈ, ಮಾಜಿ ಶಾಸಕ ಸಿ.ಟಿ.ಅಹಮ್ಮದ್ ಅಲಿ, ಬಾಲಕೃಷ್ಣ ಪೆರಿಯ, ಹಾಲಿ ಶಾಸಕ ಎನ್.ಎ. ನೆಲ್ಲಿಕುನ್ನು, ಮುಖಂಡ ಮಾಹಿನ್ ಕೇಳೋಟ್ ಸಹಿತ ಇನ್ನಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

.jpg)
.jpg)
