HEALTH TIPS

ಗಾಝಾದಲ್ಲಿ ಮುಂದುವರಿದ ಆಕ್ರಮಣ | ಇಸ್ರೇಲ್‌ ಗೆ ಬುಲ್ಡೋಝರ್ ಮಾರಾಟ ವಿರೋಧಕ್ಕೆ ಅಮೆರಿಕದಲ್ಲಿ ಹೆಚ್ಚಿದ ಬೆಂಬಲ

ವಾಷಿಂಗ್ಟನ್: ಫೆಲೆಸ್ತೀನ್‌ ನ ಗಾಝಾ, ವೆಸ್ಟ್ ಬ್ಯಾಂಕ್ ಹಾಗೂ ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್‌ ಗೆ ಕ್ಯಾಟರ್ಪಿಲ್ಲರ್ ಡಿ-9 ಬುಲ್ಡೋಝರ್‌ ಗಳ ಮಾರಾಟವನ್ನು ತಡೆಯಲು ಅಮೆರಿಕದ ಸೆನೆಟ್‌ ನಲ್ಲಿ ನಡೆದ ಮತದಾನದಲ್ಲಿ 40 ಮಂದಿ ಸೆನೆಟರ್‌ಗಳು ಬೆಂಬಲ ಸೂಚಿಸಿದ್ದಾರೆ.

ಈ ನಡೆಯನ್ನು 'ಐತಿಹಾಸಿಕ' ಬೆಳವಣಿಗೆ ಎಂದು ಶ್ಲಾಘಿಸಲಾಗಿದೆ.

ತಹ್ರೀರ್ ಇನ್‌ಸ್ಟಿಟ್ಯೂಟ್ ಫಾರ್ ಮಿಡಲ್ ಈಸ್ಟ್ ಪಾಲಿಸಿಯ ಕಾರ್ಯನಿರ್ವಾಹಕ ನಿರ್ದೇಶಕಿ ಮೈ ಎಲ್-ಸದನಿ ಅವರು, ಈ ಮತದಾನವು ಅಮೆರಿಕದ ರಾಜಕೀಯ ವಾತಾವರಣದಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡುತ್ತದೆ ಎಂದು ಹೇಳಿದ್ದಾರೆ.

"ಗಾಝಾ, ವೆಸ್ಟ್ ಬ್ಯಾಂಕ್ ಮತ್ತು ಲೆಬನಾನ್ ಪ್ರದೇಶಗಳಲ್ಲಿ ನಾಗರಿಕ ಹಾನಿಯನ್ನು ಉಲ್ಲೇಖಿಸಿ ಇಸ್ರೇಲ್‌ ಗೆ ಕ್ಯಾಟರ್ಪಿಲ್ಲರ್ ಡಿ-9 ಬುಲ್ಡೋಝರ್‌ ಗಳ ಮಾರಾಟವನ್ನು ತಡೆಯಲು 40 ಮಂದಿ ಸೆನೆಟರ್‌ ಗಳು ಮತ ಚಲಾಯಿಸಿರುವುದು ಸಂಪೂರ್ಣವಾಗಿ ಐತಿಹಾಸಿಕ," ಎಂದು ಅವರು ಹೇಳಿದರು.

ಈ ನಿರ್ಣಯವು ನಿರೀಕ್ಷಿತ ರೀತಿಯಲ್ಲಿ ಸೋತಿದ್ದರೂ, ಅಮೆರಿಕದ ರಾಜಕೀಯದಲ್ಲಿ ಬದಲಾವಣೆಯ ಅಲೆ ಮೂಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. "ಕಳೆದ ವರ್ಷ ಇದೇ ವಿಷಯದಲ್ಲಿ ಕೇವಲ 27 ಮಂದಿ ಮಾತ್ರ ಬೆಂಬಲಿಸಿದ್ದರು. ಈಗ ಆ ಸಂಖ್ಯೆ 40ಕ್ಕೆ ಏರಿಕೆಯಾಗಿದೆ," ಎಂದು ಅವರು ವಿವರಿಸಿದರು.

ಇದೇ ವೇಳೆ, ಇಸ್ರೇಲ್‌ ಗೆ 1,000 ಪೌಂಡ್ ತೂಕದ ಬಾಂಬ್‌ ಗಳ ಮಾರಾಟವನ್ನು ತಡೆಯಲು 36 ಮಂದಿ ಸೆನೆಟರ್‌ ಗಳು ಬೆಂಬಲ ಸೂಚಿಸಿರುವುದೂ ಗಮನಾರ್ಹ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

"ಈ ಸಂಖ್ಯೆಗಳು ಕ್ರಾಂತಿಕಾರಿಯಾಗಿದ್ದು, ಈ ವಿಷಯಗಳ ಕುರಿತು ಅಮೆರಿಕದ ಮತದಾರರು ಹಾಗೂ ಅವರ ಪ್ರತಿನಿಧಿಗಳ ಮನೋಭಾವದಲ್ಲಿ ಉಂಟಾಗುತ್ತಿರುವ ಮಹತ್ತರ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆ," ಎಂದು ಅವರು ಹೇಳಿದರು.

ವಾಷಿಂಗ್ಟನ್‌ ಮೂಲದ ಈ ಸಂಸ್ಥೆಯು ಈ ಮತದಾನಕ್ಕೆ ಮುನ್ನ ಸೆನೆಟರ್‌ಗಳನ್ನು ಬೆಂಬಲಿಸಲು ಒತ್ತಾಯಿಸಿತ್ತು ಎಂಬುದೂ ತಿಳಿದುಬಂದಿದೆ ಎಂದು Aljazeera ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries