HEALTH TIPS

ರಶ್ಯಾದ ತೈಲವನ್ನು ಖರೀದಿಸಲು ಭಾರತಕ್ಕೆ ನೀಡಿದ್ದ ಅವಕಾಶವನ್ನು ವಿಸ್ತರಿಸುವುದಿಲ್ಲ: ಅಮೆರಿಕ

ವಾಷಿಂಗ್ಟನ್: ಇರಾನ್ ಮತ್ತು ರಶ್ಯಾದಿಂದ ಕಚ್ಚಾತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಅವಕಾಶ ನೀಡಿದ್ದ ತಾತ್ಕಾಲಿಕ ನಿರ್ಬಂಧ ವಿನಾಯಿತಿಯನ್ನು ಅಮೆರಿಕವು ಮುಂದುವರಿಸುವುದಿಲ್ಲ ಎಂದು ವಿತ್ತಸಚಿವ ಸ್ಕಾಟ್ ಬೆಸೆಂಟ್ ಅವರು ಬುಧವಾರ ತಿಳಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಿನಾಯಿತಿಯು ಮಾರ್ಚ್ 11ಕ್ಕೆ ಮೊದಲು ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಚ್ಚಾತೈಲಕ್ಕೆ ಸಂಬಂಧಿಸಿತ್ತು. ಅವೆಲ್ಲವನ್ನೂ ಬಳಸಲಾಗಿದೆ, ಹೀಗಾಗಿ ವಿನಾಯಿತಿಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಅಮೆರಿಕವು ಮಾ.5ರಂದು ಪಶ್ಚಿಮ ಏಶ್ಯಾ ಸಂಘರ್ಷದ ನಡುವೆ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ರಶ್ಯಾದ ತೈಲವನ್ನು ಖರೀದಿಸಲು ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ 30 ದಿನಗಳ ಅವಕಾಶವನ್ನು ನೀಡಿತ್ತು. ಆ ಸಮಯದಲ್ಲಿ ಬೆಸೆಂಟ್ ಅವರು, ಇದು ಜಾಗತಿಕ ತೈಲ ಪೂರೈಕೆ ಅಸ್ತವ್ಯಸ್ತಗೊಳ್ಳದಂತೆ ನೋಡಿಕೊಳ್ಳಲು ತಾತ್ಕಾಲಿಕ ಕ್ರಮವಾಗಿದೆ ಎಂದು ತಿಳಿಸಿದ್ದರು. ಇದರಿಂದ ರಷ್ಯಾಕ್ಕೆ ಗಮನಾರ್ಹ ಆರ್ಥಿಕ ಲಾಭವಾಗುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದರು.

ಈ ಸಡಿಲಿಕೆಯು ಜಾಗತಿಕ ಅಡೆತಡೆಗಳ ನಡುವೆ ಹೆಚ್ಚುವರಿ ರಶ್ಯನ್ ತೈಲವನ್ನು ಖರೀದಿಸಲು ಭಾರತಕ್ಕೆ ಅವಕಾಶ ನೀಡಿತ್ತು. ಈ ಅವಧಿಯಲ್ಲಿ ತೈಲ ಸಂಸ್ಕರಾಣಾಗಾರಗಳು ಸುಮಾರು 30 ಮಿಲಿಯನ್ ಬ್ಯಾರೆಲ್ ಕಚ್ಚಾತೈಲವನ್ನು ಖರೀದಿಸಿವೆ ಎನ್ನಲಾಗಿದೆ.

ಭಾರತಕ್ಕೆ ವಿನಾಯಿತಿ ನೀಡಿದ ಒಂದು ವಾರದ ಬಳಿಕ ಅಮೆರಿಕವು ಮಾ.11ಕ್ಕೆ ಮೊದಲು ಟ್ಯಾಂಕರ್‌ಗಳಿಗೆ ತುಂಬಲಾಗಿದ್ದ ರಶ್ಯದ ತೈಲವನ್ನು ಖರೀದಿಸಲು ಇತರ ದೇಶಗಳಿಗೂ 30 ದಿನಗಳ ಅವಕಾಶವನ್ನು ನೀಡಿದ್ದು,ಇದು ಎ.11ರಂದು ಅಂತ್ಯಗೊಂಡಿದೆ.

ಮಾ.20ಕ್ಕೆ ಮುನ್ನ ಲೋಡ್ ಮಾಡಲಾದ ಇರಾನಿನ ಕಚ್ಚಾತೈಲ ಖರೀದಿಗೆ ನೀಡಿದ್ದ ಅವಕಾಶವೂ ರವಿವಾರ ಅಂತ್ಯಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries