HEALTH TIPS

ಯುವಜನ ತಪ್ಪದೇ ಮತದಾನ ಮಾಡುವಂತೆ ಕೇರಳ ಮುಖ್ಯ ಚುನಾವಣಾ ಅಧಿಕಾರಿಯ ಜೆನ್‌ಝೀ ನೃತ್ಯ!

 ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಭರ್ಜರಿ ತಯಾರಿ ನಡೆದಿದ್ದು, ಇದೇ ಏಪ್ರಿಲ್ 9 ರಂದು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾನ ಪ್ರಮಾಣ ಹೆಚ್ಚಿಸಲು ಹಾಗೂ ಹೊಸ ಮತದಾರರನ್ನು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲು ಚುನಾವಣಾ ಆಯೋಗ ಹಲವು ಪ್ರಯತ್ನಗಳನ್ನು ಮಾಡುವುದು ವಾಡಿಕೆ. 


ಇದೀಗ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಕೇರಳ ಚುನಾವಣಾ ಆಯೋಗ ಹೊಸ ಮತದಾರರನ್ನು ಸೆಳೆಯಲು 'ಜೆನ್‌ಝೀ' (ಜನರೇಷನ್ ಝೆಡ್) ನೃತ್ಯ ಮಾಡಿದ್ದು, ಆ ನೃತ್ಯ ಭಾರಿ ಗಮನ ಸೆಳೆದಿದೆ.

ಈ ನೃತ್ಯದಲ್ಲಿ ಸ್ವತಃ ಕೇರಳ ಚುನಾವಣಾ ಆಯೋಗದ ಸಿಇಒ (ಮುಖ್ಯ ಚುನಾವಣಾ ಅಧಿಕಾರಿ) ರತನ್ ಕೇಳ್ಕರ್ ಅವರು ತಮ್ಮ ತಂಡದೊಂದಿಗೆ ಜೆನ್‌ಜಿ ನೃತ್ಯ ಮಾಡಿದ್ದಾರೆ.

ಬೀಚ್ ಒಂದರಲ್ಲಿ ಮತದಾನಕ್ಕೆ ಪ್ರೇರೆಪಿಸುವ ನೃತ್ಯವನ್ನು ರತನ್ ಮಾಡಿದ್ದಾರೆ. ಅವರ ಜೊತೆಗೆ ತಿರುವನಂತಪುರ ಡಿಸಿ ಅನು ಕುಮಾರಿ, ಸಹಾಯಕ ಜಿಲ್ಲಾಧಿಕಾರಿ ಶಿವಶಕ್ತಿವೇಲ್ ಅವರು ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಅಷ್ಟೇ ಅಲ್ಲದೇ ಈ ನೃತ್ಯದಲ್ಲಿ ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಜೆನ್‌ಝೀ ತಲೆಮಾರಿನ ಯುವಕ-ಯುವತಿಯರೂ ಹೆಜ್ಜೆ ಹಾಕಿದ್ದಾರೆ.

'ಇದು ನಿಮ್ಮ ಮತ, ನಿಮ್ಮ ಮತ ನಮ್ಮ ರಾಜ್ಯಕ್ಕೆ ಬೇಕು, ಒಂದು ದೃಢ ನಿರ್ಧಾರ ಪಂದ್ಯದ ದಿಕ್ಕಿನ ಬದಲಾವಣೆಗೆ ಆಧಾರ, ಹಾಗೇ ನಿಮ್ಮ ಒಂದು ಮತ ರಾಜ್ಯದ ಭವಿಷ್ಯದ ನಿರ್ಧಾರ' ಎಂದು ಹಾಡಿನಲ್ಲಿ ಪ್ರಚಾರ ಮಾಡಲಾಗಿದೆ.

ಚುನಾವಣಾ ಆಯೋಗದ ಜೊತೆ ಅನೇಕ ಸಂಘ-ಸಂಸ್ಥೆಗಳು ಮತದಾನ ಹೆಚ್ಚಿಸಲು ಹಲವು ಆಕರ್ಷಣೆಯ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿವೆ.

ಇದೇ ಏಪ್ರಿಲ್ 9 ರಂದು ಕೇರಳ ವಿಧಾನಸಭೆಯ 146 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries