ಕೊಚ್ಚಿ/ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನ ಮತ್ತು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದರು. ಎರಡೂ ದೇವಸ್ಥಾನಗಳಿಗೆ ತಲಾ 3 ಕೋಟಿ ರೂ. ದೇಣಿಗೆ ನೀಡಿದರು. ರಾಜರಾಜೇಶ್ವರ ದೇವಸ್ಥಾನದ ಸಮಗ್ರ ನವೀಕರಣಕ್ಕಾಗಿ 12 ಕೋಟಿ ರೂ. ದೇಣಿಗೆ ನೀಡುವುದಾಗಿಯೂ ಅವರು ಭರವಸೆ ನೀಡಿದರು. ಐತಿಹಾಸಿಕವಾಗಿ ಮಹತ್ವದ ಪೂರ್ವ ಗೋಪುರದ ಪುನಃಸ್ಥಾಪನೆ ಸೇರಿದಂತೆ ಹಲವು ವಿಷಯಗಳಿಗೆ ಈ ಮೊತ್ತವನ್ನು ಬಳಸಲಾಗುವುದು. ಗುರುವಾಯೂರಿನಲ್ಲಿ ಆನೆ ಕಲ್ಯಾಣ ಚಟುವಟಿಕೆಗಳಿಗೆ ಹೆಚ್ಚುವರಿ ಬೆಂಬಲವನ್ನು ಅವರು ಘೋಷಿಸಿದರು.
ಏಪ್ರಿಲ್ 2 ರಂದು ರಾತ್ರಿ 8 ಗಂಟೆಗೆ ತಳಿಪರಂಬದ ರಾಜರಾಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಅನಂತ್ ಅಂಬಾನಿ, ಪೆÇನ್ನುಂಕುಡಂ, ಪಟ್ಟೋಂ, ತಾಳಿ, ನೆಯ್ಯಮೃತ್‍ನಂತಹ ಸಾಂಪ್ರದಾಯಿಕ ಕೊಡುಗೆಗಳನ್ನು ಅರ್ಪಿಸಿ ಅಶ್ವಮೇಧ ನಮಸ್ಕಾರ ಮಾಡಿದರು. ದೇವಾಲಯದ ನವೀಕರಣಕ್ಕಾಗಿ ಅವರು 3 ಕೋಟಿ ರೂ.ಗಳ ಚೆಕ್ ಅನ್ನು ಸಹ ಹಸ್ತಾಂತರಿಸಿದರು.
12 ಕೋಟಿ ರೂ.ಗಳ ಸಮಗ್ರ ನವೀಕರಣದ ಭಾಗವಾಗಿ, ಪೂರ್ವ ಗೋಪುರದ ನವೀಕರಣಕ್ಕೆ ತಮ್ಮ ಬೆಂಬಲವನ್ನು ಸಹ ಅವರು ಘೋಷಿಸಿದರು. ಈ ಮೊತ್ತದ ಒಂದು ಭಾಗವನ್ನು ಪಾಕಿರ್ಂಗ್ ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸುಧಾರಿಸಲು ಬಳಸಲಾಗುವುದು.
ಅನಂತ್ ಅಂಬಾನಿ ಅವರೊಂದಿಗೆ ಆಪ್ತ ಸಹೋದ್ಯೋಗಿಗಳು ದೇವಾಲಯಕ್ಕೆ ಭೇಟಿ ನೀಡಿದರು. ಟಿಟಿಕೆ ದೇವಸ್ವಂ ಅಧ್ಯಕ್ಷ ಟಿ.ಪಿ. ವಿನೋದ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಪಿ. ವಿನಯನ್, ಮುಖ್ಯ ತಂತ್ರಿ ಇ.ಪಿ. ಕುಬೇರನ್ ನಂಬೂದಿರಿ ಮತ್ತು ದೇವಸ್ವಂ ಮಂಡಳಿಯ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.
ನಂತರ ಅನಂತ್ ಅಂಬಾನಿ ಗುರುವಾಯೂರ್ ದೇವಾಲಯಕ್ಕೂ ಭೇಟಿ ನೀಡಿದರು. ಅವರು ದೇವಾಲಯದ ಟ್ರಸ್ಟ್‍ಗೆ 3 ಕೋಟಿ ರೂ.ಗಳನ್ನು ದೇಣಿಗೆ ನೀಡಿದರು. ಗುರುವಾಯೂರಿನಲ್ಲಿ ದೇವಾಲಯದ ಆನೆಗಳ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳಿಗೆ ಅವರು ತಮ್ಮ ಬೆಂಬಲವನ್ನು ಘೋಷಿಸಿದರು. ಇವುಗಳಲ್ಲಿ ವಿಶೇಷ ಆನೆ ಆಸ್ಪತ್ರೆ ನಿರ್ಮಾಣ, ಸರಪಳಿ ರಹಿತ ಅಭಯಾರಣ್ಯ ಮತ್ತು ಆನೆಗಳಿಗೆ ವೈಜ್ಞಾನಿಕ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆಧುನಿಕ ಸೌಲಭ್ಯಗಳ ಅಭಿವೃದ್ಧಿ ಸೇರಿವೆ. ಗುರುವಾಯೂರಿನಲ್ಲಿ ದೇವಸ್ವಂ ಅಧ್ಯಕ್ಷ ಎ.ವಿ. ಗೋಪಿನಾಥ್ ಸೇರಿದಂತೆ ದೇವಾಲಯದ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು.

