ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತಾಪಿತ ಕಾನೂನಿನ ಉದ್ದೇಶ ಮತ್ತು ರಚನೆ ಎರಡನ್ನೂ ಪ್ರಶ್ನಿಸಿದರು.
''ಸರ್ಕಾರವು ಸಂವಿಧಾನದ ಬದಲಿಗೆ ಮನುವಾದಕ್ಕೆ ಪ್ರಾಶಸ್ತ್ಯ ನೀಡುತ್ತಿದೆ. ಜಾತಿ ಗಣತಿ ಆರಂಭವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ಮನೆಗಳಿಗೆ ಜಾತಿ ಇಲ್ಲ ಎಂದು ಅವರು ಎರಡು ಬಾರಿ ಹೇಳಿದ್ದಾರೆ. ಇಲ್ಲಿರುವ ಪ್ರಶ್ನೆ ಎಂದರೆ, ಸಂಸತ್ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪ್ರಾತಿನಿಧ್ಯಕ್ಕೆ ಜಾತಿ ಗಣತಿಯನ್ನು ಬಳಸಲಾಗುವುದೇ ಎನ್ನುವುದು. ಶಾಸನಸಭೆಗಳಲ್ಲಿ ಪ್ರಾತಿನಿಧ್ಯಕ್ಕೂ ಜಾತಿ ಗಣತಿಗೂ ಮುಂದಿನ 15 ವರ್ಷಗಳ ಕಾಲ ಯಾವುದೇ ನಂಟು ಇರುವುದಿಲ್ಲ ಎಂಬ ಸೂಚನೆಯನ್ನು ಈಗ ನೀಡಲಾಗುತ್ತಿದೆ,'' ಎಂದು ರಾಹುಲ್ ಹೇಳಿದರು.
''ಸರ್ಕಾರ ಈಗ ಮಾಡುತ್ತಿರುವುದು ರಾಷ್ಟ್ರ ವಿರೋಧಿ ಕೃತ್ಯಕ್ಕೆ ಸಮವಾಗಿದೆ. ಈ ಮಸೂದೆಗಳು ಅಂಗೀಕಾರವಾಗಲು ನಾವು ಬಿಡುವುದಿಲ್ಲ. ಇವುಗಳನ್ನು ಸೋಲಿಸಲು ಇಡೀ ಪ್ರತಿಪಕ್ಷ ಒಂದಾಗಿ ನಿಲ್ಲಲಿದೆ,'' ಎಂದು ಅವರು ಹೇಳಿದರು.

