ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಟಿಎಂಸಿಗೆ ಹಿನ್ನಡೆಯಾಗಲಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿವೆ.
ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು, ಇಂದು ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ.• ಬಿಜೆಪಿಗೆ ಸ್ಪಷ್ಟ ಬಹುಮತದ ನಿರೀಕ್ಷೆಪಿ-ಮಾರ್ಕ್ (P-MARQ) ಸೇರಿದಂತೆ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.• ಟಿಎಂಸಿ ಪಾಲಿಗೆ ಅನಿಶ್ಚಿತತೆಯ ಫಲಿತಾಂಶ2011ರಿಂದ ಸತತ ಮೂರು ಅವಧಿಗೆ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಈ ಬಾರಿ ತೀವ್ರ ಪೈಪೋಟಿ ಎದುರಿಸುತ್ತಿದ್ದು, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ.• ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷವು ಕನಿಷ್ಠ 148 ಸ್ಥಾನಗಳನ್ನು ಗಳಿಸಬೇಕಿದೆ.• ವಿವಿಧ ಸಂಸ್ಥೆಗಳ ಸಮೀಕ್ಷೆಗಳ ಭಿನ್ನತೆಪಿ-ಮಾರ್ಕ್ ಮತ್ತು ಮ್ಯಾಟ್ರೈಜ್ ಬಿಜೆಪಿ ಪರ ಒಲವು ವ್ಯಕ್ತಪಡಿಸಿದ್ದರೆ, ಪೀಪಲ್ಸ್ ಪಲ್ಸ್ ಸಂಸ್ಥೆಯು ಟಿಎಂಸಿಯೇ ಅಧಿಕಾರಕ್ಕೆ ಮರಳಲಿದೆ ಎಂದು ಸಮೀಕ್ಷೆ ನೀಡಿದೆ.ಪ್ರಮುಖ ಅಂಕಿಅಂಶಗಳು294ಒಟ್ಟು ವಿಧಾನಸಭಾ ಕ್ಷೇತ್ರಗಳು148ಬಹುಮತಕ್ಕೆ ಬೇಕಾದ ಸ್ಥಾನಗಳುಏಪ್ರಿಲ್ 23ಮೊದಲ ಹಂತದ ಮತದಾನ ದಿನಾಂಕಏಪ್ರಿಲ್ 29ಎರಡನೇ ಹಂತದ ಮತದಾನ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕೋಲ್ಕತ್ತ: ತೀವ್ರ ಜಿದ್ದಾಜಿದ್ದಿ, ಹಲವೆಡೆ ಘರ್ಷಣೆಗೆ ಸಾಕ್ಷಿಯಾದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ, ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು P-MARQ ಭವಿಷ್ಯ ನುಡಿದಿದೆ.
ಈ ಭವಿಷ್ಯವು, ಸತತ ಮೂರು ಅವಧಿಗೆ ಅಂದರೆ, 2011ರಿಂದಲೂ ಅಧಿಕಾರದಲ್ಲಿರುವ ಟಿಎಂಸಿಗೆ ಆಘಾತ ಎದುರಾಗುವ ಸೂಚನೆ ನೀಡಿವೆ.
294 ಸದಸ್ಯ ಬಲ ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ 152 ಕ್ಷೇತ್ರಗಳಿಗೆ ಏಪ್ರಿಲ್ 23ರಂದು ಹಾಗೂ ಉಳಿದ 142 ಸ್ಥಾನಗಳಿಗೆ ಇಂದು (ಏಪ್ರಿಲ್ 29) ಮತದಾನ ನಡೆದಿದೆ.
ಬಹುಮತ ಸಾಧಿಸಲು ಯಾವುದೇ ಪಕ್ಷಕ್ಕೆ 148 ಸ್ಥಾನಗಳು ಬೇಕಿದೆ.
ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು?
P-MARQ
ಟಿಎಂಸಿ: 118-138
ಬಿಜೆಪಿ: 150-175
ಇತರೆ: 02-06
ಮ್ಯಾಟ್ರೈಜ್
ಟಿಎಂಸಿ: 125-140
ಬಿಜೆಪಿ: 146-161
ಇತರೆ: 6-10
ಚಾಣಾಕ್ಯ ಸ್ಟ್ರಾಟರ್ಜೀಸ್
ಟಿಎಂಸಿ: 130-140
ಬಿಜೆಪಿ: 150-160
ಇತರೆ: 6-10
JVC ಸಮೀಕ್ಷೆ
ಟಿಎಂಸಿ: 131-152
ಬಿಜೆಪಿ: 138-159
ಇತರೆ: 0-4
ಪೀಪಲ್ಸ್ ಪಲ್ಸ್
ಟಿಎಂಸಿ: 177-187
ಬಿಜೆಪಿ: 95-100
ಇತರೆ: 0-1

