ಗುವಾಹಟಿ: ಅಸ್ಸಾಂ ವಿಧಾನಸಭೆಯ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಇರುವ ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ.
ಅಸ್ಸಾಂ ರಾಜ್ಯದಲ್ಲಿ 35 ಜಿಲ್ಲೆಗಳಿದ್ದು, 126 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 722 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈ ಬಾರಿ ಅಸ್ಸಾಂನಲ್ಲಿ ದಾಖಲೆಯ (ಶೇ 82.04ರಷ್ಟು) ಮತದಾನವಾಗಿದೆ. ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ.
ಯಾವ ಸಮೀಕ್ಷೆಯಲ್ಲಿ ಯಾರಿಗೆ ಅಧಿಕಾರ?
ಆಕ್ಸಿಸ್ ಮೈ ಇಂಡಿಯಾ
ಕಾಂಗ್ರೆಸ್+: 80-100
ಬಿಜೆಪಿ+: 20-36
ಪಿ- ಮಾರ್ಕ್
ಕಾಂಗ್ರೆಸ್+: 30-40
ಬಿಜೆಪಿ+: 82-94
ಮ್ಯಾಟ್ರಿಜ್
ಕಾಂಗ್ರೆಸ್+: 25-32
ಬಿಜೆಪಿ+: 85-95
ಜೆವಿಎಸ್
ಕಾಂಗ್ರೆಸ್+: 23-33
ಬಿಜೆಪಿ+: 88-101
ವೋಟೆವಿಬ್
ಕಾಂಗ್ರೆಸ್+:23-33
ಬಿಜೆಪಿ+: 90-100

