HEALTH TIPS

Exit Poll Result 2026: ಎಲ್ಲಿ ಯಾರಿಗೆ ಅಧಿಕಾರ? ಇಲ್ಲಿದೆ ಮತಗಟ್ಟೆ ಭವಿಷ್ಯ

ನವದೆಹಲಿ:  ವಿವಿಧ ರಾಜ್ಯಗಳ 2026ರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶಗಳು ಆಯಾ ರಾಜ್ಯಗಳ ಭವಿಷ್ಯದ ರಾಜಕೀಯ ಚಿತ್ರಣವನ್ನು ಬಹಿರಂಗಪಡಿಸಿವೆ.

ತಮಿಳುನಾಡಿನಲ್ಲಿ ಡಿಎಂಕೆ ಪ್ರಾಬಲ್ಯಹೊಸ ಪಕ್ಷ ಟಿವಿಕೆ ಮತ್ತು ಎನ್‌ಡಿಎ ಮೈತ್ರಿಕೂಟದ ಪೈಪೋಟಿಯ ಹೊರತಾಗಿಯೂ, ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆಗಳು ತಿಳಿಸಿವೆ.• ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತ್ಯಂತರದೀರ್ಘಕಾಲದಿಂದ ಟಿಎಂಸಿ ಆಡಳಿತವಿದ್ದ ಪಶ್ಚಿಮ ಬಂಗಾಳದಲ್ಲಿ, ಈ ಬಾರಿ ಬಿಜೆಪಿ ಅಧಿಕಾರಕ್ಕೇರಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.• ಅಸ್ಸಾಂನಲ್ಲಿ ಬಿಜೆಪಿಯ ಮುನ್ನಡೆಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯಲ್ಲಿ, ಅಸ್ಸಾಂನಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುವ ಮುನ್ಸೂಚನೆಯನ್ನು ಸಮೀಕ್ಷೆಗಳು ನೀಡಿವೆ.• ಕೇರಳದಲ್ಲಿ ಕಾಂಗ್ರೆಸ್ ಮೈತ್ರಿಕೂಟಕ್ಕೆ ಒಲವುತ್ರಿಕೋನ ಸ್ಪರ್ಧೆ ಇರುವ ಕೇರಳದಲ್ಲಿ ಸಿಪಿಐ ನೇತೃತ್ವದ ಎಲ್‌ಡಿಎಫ್‌ಗೆ ಬದಲಾಗಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.• ಪುದುಚೇರಿಯ ಫಲಿತಾಂಶದ ಮುನ್ಸೂಚನೆಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ, ಆಲ್‌ ಇಂಡಿಯಾ ಎನ್‌.ಆರ್‌. ಕಾಂಗ್ರೆಸ್‌ ನೇತೃತ್ವದ ಎನ್‌ಡಿಎಗೆ ಬಹುಮತ ದೊರೆಯಲಿದೆ ಎನ್ನಲಾಗುತ್ತಿದೆ.ಪ್ರಮುಖ ಅಂಕಿಅಂಶಗಳು150-175ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಂದಾಜು ಸೀಟುಗಳು122-145ತಮಿಳುನಾಡಿನಲ್ಲಿ ಡಿಎಂಕೆ+ ಅಂದಾಜು ಸೀಟುಗಳು82-101ಅಸ್ಸಾಂನಲ್ಲಿ ಬಿಜೆಪಿ+ ಅಂದಾಜು ಸೀಟುಗಳು70-90ಕೇರಳದಲ್ಲಿ ಯುಡಿಎಫ್‌ ಅಂದಾಜು ಸೀಟುಗಳು16-19ಪುದುಚೇರಿಯಲ್ಲಿ ಎನ್‌ಡಿಎ ಸೀಟುಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೇರಿ, ಕೇರಳ ಹಾಗೂ ಅಸ್ಸಾಂ ವಿಧಾಸಭೆಗಳಿಗೆ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.

ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ, ಆಡಳಿತಾರೂಢ ಡಿಎಂಕೆ ಮತ್ತು ಹೊಸ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹಣಾಹಣಿಗೆ ವೇದಿಕೆಯಾಗಿದ್ದ ತಮಿಳುನಾಡಿನಲ್ಲಿ ಈ ಬಾರಿಯೂ ಡಿಎಂಕೆ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಂಸ್ಥೆಗಳು ಭವಿಷ್ಯ ನುಡಿದಿವೆ.

2011ರಿಂದಲೂ ಅಧಿಕಾರದಲ್ಲಿರುವ ಟಿಎಂಸಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಡುವಣ ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಗೆ ಅಧಿಕಾರ ಸಿಗಬಹುದು ಎಂಬುದು ಮತದಾನೋತ್ತರ ಸಮೀಕ್ಷೆಗಳ ಅಂದಾಜು ಆಗಿದೆ.

ಕೇರಳದಲ್ಲಿ ಆಡಳಿತಾರೂಢ ಸಿಪಿಐ ನೇತೃತ್ವದ ಎಲ್‌ಡಿಎಫ್‌ ಮೈತ್ರಿಕೂಟ, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮಿತ್ರಕೂಟ ಹಾಗೂ ಬಿಜೆಪಿ ಮುಂದಾಳತ್ವದ ಎನ್‌ಡಿಎ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ಬಾರಿ, ಯುಡಿಎಫ್‌ ಸರ್ಕಾರ ಬರಬಹುದು ಎಂಬುದು ಮತಗಟ್ಟೆ ಸಮೀಕ್ಷಗಳ ಅಂದಾಜು ಆಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಇರುವ ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೇರಲಿದೆ ಎನ್ನಲಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ, ಆಲ್‌ ಇಂಡಿಯಾ ಎನ್‌.ಆರ್‌. ಕಾಂಗ್ರೆಸ್‌ ನೇತೃತ್ವದ ಎನ್‌ಡಿಎಗೆ ಬಹುಮತ ದೊರೆಯಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸೀಟು?

1. ಪಶ್ಚಿಮ ಬಂಗಾಳ

  • P-MARQ

ಟಿಎಂಸಿ: 118-138
ಬಿಜೆಪಿ: 150-175
ಇತರೆ: 02-06

  • ಮ್ಯಾಟ್ರೈಜ್‌

ಟಿಎಂಸಿ: 125-140
ಬಿಜೆಪಿ: 146-161
ಇತರೆ: 6-10

  • ಚಾಣಾಕ್ಯ ಸ್ಟ್ರಾಟರ್ಜೀಸ್

ಟಿಎಂಸಿ: 130-140
ಬಿಜೆಪಿ: 150-160
ಇತರೆ: 6-10

  • JVC ಸಮೀಕ್ಷೆ

ಟಿಎಂಸಿ: 131-152
ಬಿಜೆಪಿ: 138-159
ಇತರೆ: 0-4

  • ಪೀಪಲ್ಸ್‌ ಪಲ್ಸ್‌

ಟಿಎಂಸಿ: 177-187
ಬಿಜೆಪಿ: 95-100
ಇತರೆ: 0-1

2. ತಮಿಳುನಾಡು

  • ಮ್ಯಾಟ್ರೈಜ್ ಇಂಡಿಯಾ

ಡಿಎಂಕೆ + : 122-132

ಎಐಎಡಿಎಂಕೆ + : 87 - 100

ಟಿವಿಕೆ : 10-12

ಇತರೆ: 00

  • ಪಿ-ಮಾರ್ಕ್

ಡಿಎಂಕೆ + : 125-145

ಎಐಎಡಿಎಂಕೆ +: 65-85

ಟಿವಿಕೆ : 16-26

  • ಪಿಎಂಎಆರ್‌ಕ್ಯೂ

ಡಿಎಂಕೆ + 125-145

ಎಐಎಡಿಎಂಕೆ + 65-85

ಟಿವಿಕೆ 16-26

ಇತರೆ 1-6

3. ಅಸ್ಸಾಂ

  • ಆಕ್ಸಿಸ್ ಮೈ ಇಂಡಿಯಾ

ಕಾಂಗ್ರೆಸ್+: 80-100

ಬಿಜೆಪಿ+: 20-36

  • ಪಿ- ಮಾರ್ಕ್

ಕಾಂಗ್ರೆಸ್+: 30-40

ಬಿಜೆಪಿ+: 82-94

  • ಮ್ಯಾಟ್ರಿಜ್

ಕಾಂಗ್ರೆಸ್+: 25-32

ಬಿಜೆಪಿ+: 85-95

  • ಜೆವಿಎಸ್

ಕಾಂಗ್ರೆಸ್+: 23-33

ಬಿಜೆಪಿ+: 88-101

  • ವೋಟೆವಿಬ್

ಕಾಂಗ್ರೆಸ್+:23-33

ಬಿಜೆಪಿ+: 90-100

4. ಕೇರಳ

  • ಎನ್‌ಡಿಟಿವಿ

ಎಲ್‌ಡಿಎಫ್‌: 55-65
ಯುಡಿಎಫ್‌: 75-85
ಇತರೆ 0-3

  • ಆಕ್ಸಿಸ್‌ ಮೈ ಇಂಡಿಯಾ

ಯುಡಿಎಫ್‌: 78-90
ಎಲ್‌ಡಿಎಫ್‌: 49- 62
ಇತರೆ: 0-3

  • ಮ್ಯಾಟ್ರಿಕ್‌

ಯುಡಿಎಫ್‌: 70-75
ಎಲ್‌ಡಿಎಫ್‌: 60-65
ಇತರೆ: 0-4

  • ಪಿ-ಮಾರ್ಕ್‌

ಯುಡಿಎಫ್‌: 72-79
ಎಲ್‌ಡಿಎಫ್‌: 62-69
ಇತರೆ: 0-3

5. ಪುದುಚೇರಿ

  • ಪೋಲ್ ಆಫ್ ಎಕ್ಸಿಟ್ ಪೋಲ್ಸ್

ಬಿಜೆಪಿ+ : 17

ಕಾಂಗ್ರೆಸ್+: 09

ಇತರೆ: 3

  • ಆಯಕ್ಸಿಸ್ ಮೈ ಇಂಡಿಯಾ

ಬಿಜೆಪಿ +: 16-20

ಕಾಂಗ್ರೆಸ್ +: 6-8

ಇತರೆ: 3-7

  • ಪೀಪಲ್ಸ್ ಪ್ಲಸ್

ಬಿಜೆಪಿ+: 16-19

ಕಾಂಗ್ರೆಸ್+: 10-13

ಇತರೆ: 1-2

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries