ಕಣ್ಣೂರು: ಬಿಜೆಪಿ ಮಹಿಳಾ ಮೋರ್ಚಾ ನೇತಾರೆಯನ್ನು ತನ್ನ ಪುತ್ರ ಕತ್ತು ಸೀಳಿ ಕೊಲೆಗೈದ ದಾರುಣ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಕಣ್ಣೂರಿನ ಕೊಳಕ್ಕಾಡ್ ಶಾನಿಕುನ್ನು ಮಡತ್ತಿಪರಂಬಿಲ್ ನಿವಾಸಿ ತಂಗಚ್ಚನ್ ಅವರ ಪತ್ನಿ ಗೀತಮ್ಮ(52)ಮೃತಪಟ್ಟ ಮಹಿಳೆ. ಈಕೆಯ ಪುತ್ರ ಜಸ್ಟಿನ್(25)ಕೊಲೆ ಆರೋಪಿ. ಕೃತ್ಯವೆಸಗಿದ ನಂತರ ಈತ ಪೊಲೀಸ್ ಠಾಣೆಗೆ ಶರಣಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಗೀತಮ್ಮ ಮಹಿಳಾಮೋರ್ಚಾ ಕಣ್ಣೂರು ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದು, ಕೇಳಗಂ ಎಂಬಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಅಲ್ಲದೆ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಶುಕ್ರವಾರ ಘಟನೆ ನಡೆದಿದೆ. ತಾಯಿ ಮತ್ತು ಮಗನ ನಡುವೆ ರಾತ್ರಿ ವಾಗ್ವಾದ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದು ಬೆಡ್‍ರೂಮ್‍ಗೆ ತೆರಳಿ ತಾಯಿಯ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ತಂಗಚ್ಚನ್ ಮನೆಯಿಂದ ಹೊರಗೆ ತೆರಳಿದ್ದ ಸಂದರ್ಭ ಕೃತ್ಯ ನಡೆದಿದೆ. ಆರೋಪಿ ಕ್ರಿಸ್ಟಿ ಬೆಂಗಳೂರಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದು, ಶಿಕ್ಷಣ ಅರ್ಧಕ್ಕೆ ಸ್ಥಗಿತಗೊಳಿಸಿ ಊರಿಗೆ ವಾಪಸಾಗಿದ್ದನು. ಈತ ಮಾದಕ ದ್ರವ್ಯ ವ್ಯಸನಿಯಾಗಿದ್ದನೆಂದು ಪೆÇಲೀಸರು ತಿಳಿಸಿದ್ದಾರೆ.


