ಸೈಂಟ್ ಪೀಟರ್ಸ್ಬಗ್: ಪಶ್ಚಿಮ ಏಷ್ಯಾಕ್ಕೆ ಶಾಂತಿಯನ್ನು ತರಲು ರಷ್ಯಾ ತನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧ ಎಂದು ರಷ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಜೊತೆ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಸಭೆ ನಡೆಸಿದ ಪುಟಿನ್ ` ತಮ್ಮ ಸಾರ್ವಭೌಮತ್ವಕ್ಕಾಗಿ ಕೆಚ್ಚೆದೆಯಿಂದ ಮತ್ತು ವೀರಾವೇಷದಿಂದ ಹೋರಾಡಿದ ಇರಾನ್ ಜನರನ್ನು ಶ್ಲಾಘಿಸಿದರು.
ಮಧ್ಯಪ್ರಾಚ್ಯದಲ್ಲಿ ಸಾಧ್ಯವಾದಷ್ಟು ಬೇಗ ಶಾಂತಿಯನ್ನು ಸಾಧಿಸಲು ಎಲ್ಲಾ ನೆರವು ನೀಡುವುದಾಗಿ ಪುನರುಚ್ಚರಿಸಿದರು' ಎಂದು ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಎಲ್ಲರಿಗೂ ಸ್ವೀಕಾರಾರ್ಹವಾದ ಯಾವುದೇ ಮಧ್ಯಸ್ಥಿಕೆ ಸೇವೆಗಳಿಗೆ ರಷ್ಯ ಸಿದ್ಧವಿದೆ. ಶಾಂತಿಯನ್ನು ಖಾತರಿಪಡಿಸುವ ಮತ್ತು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಎಲ್ಲಾ ಕಾರ್ಯಗಳಿಗೆ ನಾವು ಸಿದ್ಧವಿದ್ದೇವೆ' ಎಂದು ರಷ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ರಷ್ಯ ಅಧ್ಯಕ್ಷರೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದ್ದು ಇರಾನ್ಗೆ ರಷ್ಯ ನೀಡುತ್ತಿರುವ ಸ್ಥಿರ, ಅಚಲ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿರುವುದಾಗಿ ವರದಿಯಾಗಿದೆ.

