ನವದೆಹಲಿ (PTI): 2047ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ರೂಪಿಸುವ ಗುರಿ ಮುಟ್ಟಲು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ದೇಶದಾದ್ಯಂತ ಜನರನ್ನು ಒಗ್ಗೂಡಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಸೋಮವಾರ ಕರೆ ನೀಡಿದ್ದಾರೆ.
ಬಿಜೆಪಿಯ 47ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಬಿಜೆಪಿಯನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವನ್ನಾಗಿ ಕಟ್ಟುವಲ್ಲಿ 'ತ್ಯಾಗ ಮತ್ತು ಬಲಿದಾನ' ನೀಡಿದ ನಾಯಕರು ಮತ್ತು ಕಾರ್ಯಕರ್ತರ ಪ್ರೇರಣೆ ಪಡೆದು ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಬೆಳಸಬೇಕಿದೆ' ಎಂದು ಹೇಳಿದರು.
'2047ರ ವೇಳೆಗೆ ವಿಕಸಿತ ಭಾರತ ರೂಪಿಸಲು ಮತ್ತು ಪಂಚಾಯಿತಿಯಿಂದ ಸಂಸತ್ತಿನವರೆಗೂ 'ಭಗವಾಧ್ವಜ' (ಕೇಸರಿ) ಹಾರಿಸುವ ಕನಸು ಈಡೇರಿಸಲು ಮುಂದಡಿ ಇಡಬೇಕಿದೆ' ಎಂದರು.

