HEALTH TIPS

ಸ್ಪರ್ಶಂ-ವಿಶೇಷ ಚೇತನ ಮಕ್ಕಳ ಕಲಾಮೇಳ ಸಮಾಪ್ತಿ

ಮಂಜೇಶ್ವರ: ಹಾಸಿಗೆಯಲ್ಲೇ ಇರುವ ವಿಶೇಷಚೇತನ ಮಕ್ಕಳ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕಾಸರಗೋಡು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತಿ ಸಂಯುಕ್ತವಾಗಿ 'ಸ್ಪರ್ಶಂ' ವಿಶೇಷ ಚೇತನ ಮಕ್ಕಳ ಕಲಾಮೇಳವನ್ನು ಉಪ್ಪಳದಲ್ಲಿರುವ ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.


ಕಾರ್ಯಕ್ರಮವ


ನ್ನು ಸಮಗ್ರ ಶಿಕ್ಷಣ ಕಾಸರಗೋಡು ಡಿ.ಪಿ.ಒ. ಪ್ರಕಾಶನ್ ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಡಿ.ಡಿ.ಇ ಇಬ್ರಾಹಿಂ ಬಿ, ಎ.ಎಸ್.ಎಸ್.ಕೆ.ಯ ಡಿ.ಪಿ.ಒ. ಅಗಸ್ಟಿನ್ ಬರ್ನಾರ್ಡ್ ಮೊಂತೆರೋ ಹಾಗೂ ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ತ ಸಿ.ಎಚ್ ಉಪಸ್ಥಿತರಿದ್ದರು.

ಪ್ರಸಿದ್ಧ ಜನಪದ ಗಾಯಕ ಹಾಗೂ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕøತ ಶೈಜು ಬೆರಿಕ್ಕುಳಂ ಹಾಗೂ ಕಲಾಭವನ ಮಣಿ ಫೌಂಡೇಶನ್ ನ ಓಡಪ್ಪಳಂ ಪ್ರಶಸ್ತಿ ಪುರಸ್ಕೃತ ಪ್ರವೀಣ್ ಪೂಂಗೋಡ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಳಿಕ ನಡೆದ ಜನಪದ ಕಲಾಮೇಳ ಹಾಗೂ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು. ಮಂಜೇಶ್ವರ ಎ.ಇ.ಒ ಜಾರ್ಜ್ ಕ್ರಾಸ್ತ ಅಧ್ಯಕ್ಷತೆ ವಹಿಸಿದರು.

ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಸಿ. ರಾಜಗೋಪಾಲನ್ ಪಿ. ಬಹುಮಾನ ವಿತರಿಸಿದರು. ಸ್ಪೆಷಲ್ ಎಜುಕೇಟರ್ ಗಳು, ತಜ್ಞ ಶಿಕ್ಷಕರು ಮತ್ತು ಕ್ಲಸ್ಟರ್ ಸಂಯೋಜಕರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಿ.ಆರ್.ಸಿ. ಸಂಯೋಜಕ ನಾರಾಯಣ ರಾಜ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries