ಬರ್ಪೇಟಾ: ಅಸ್ಸಾಂನ ಬರ್ಪೇಟಾ ಜಿಲ್ಲೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಇಂದು ಸೋಮವಾರ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ನಿಲುವಿಗೆ ಹೊಂದಾಣಿಕೆ ಮಾಡಿಕೊಂಡಿದೆ ಇಂತಹ ನಿಲುವು ರಾಷ್ಟ್ರದ ಭದ್ರತೆಗೆ ಹಾನಿ ಉಂಟುಮಾಡುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರ ಪಾಕಿಸ್ತಾನದಲ್ಲಿನ ಉಗ್ರ ಶಿಬಿರಗಳನ್ನು ಗುರಿಯಾಗಿಸಿಕೊಂಡು ‘ಆಪರೇಶನ್ ಸಿಂದೂರ್’ ನಡೆಸಿದರೆ, ವಿರೋಧ ಪಕ್ಷ ಮಾತ್ರ ಪಕ್ಕದ ದೇಶದ ಧ್ವನಿಗೆ ತಕ್ಕಂತೆ ಮಾತನಾಡುತ್ತಿದೆ. ಈ ಪಾಕಿಸ್ತಾನ ಜೊತೆಗೆ ಸಂಪರ್ಕ ರಾಷ್ಟ್ರ ಭದ್ರತೆಗೆ ಧಕ್ಕೆ ತರುತ್ತದೆ, ಇದಕ್ಕೆ ನಾವು ಎಂದಿಗೂ ಒಪ್ಪಿಗೆ ಕೊಡುವುದಿಲ್ಲ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ದೃಷ್ಟಿಕೋನ ಚಿಕ್ಕದಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಎಲ್ಲಾ ವರ್ಗಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದರು.

