ಕಾಸರಗೋಡು: ಜಿಲ್ಲಾ ಪಂಚಾಯಿತಿ ಕಾಸರಗೋಡು ಕೇಂದ್ರ ಕಚೇರಿ ವಠಾರದಲ್ಲಿ ನಿರ್ಮಾಣ ಹಂತದಲ್ಲಿರುವ ಖ್ಯಾತ ಶಿಲ್ಪಿ ಕಾನಾಯಿ ಕುಞÂರಾಮನ್ ವಿನ್ಯಾಸಗೊಳಿಸುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತ 'ತಾಯಿ ಮತ್ತು ಮಗು' ಕಾಂಕ್ರೀಟ್ ಶಿಲ್ಪದ ಅಂತಿಮ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿಬರುತ್ತಿದೆ.
ಕಾಸರಗೋಡು ಜಿಲ್ಲೆಯನ್ನು ತಲ್ಲಣಗೊಳಿಸಿರುವ ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಸಂತ್ರಸ್ತರಾದವರ ನೆನಪಿಗಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಈ ಕಾಂಕ್ರೀಟ್ ಶಿಲ್ಪ ನಿರ್ಮಾಣಕ್ಕೆ ಸುಮಾರು ಎರಡು ದಶಕದ ಹಿಂದೆ ಚಾಲನೆ ನೀಡಿದ್ದರೂ, ಕಾಮಗಾರಿ ಪೂರ್ತಿಗೊಳಿಸಲಾಗದೆ, ಕುಂಟುತ್ತಾ ಸಾಗಿ ಬಂದಿದೆ.
ಕೈ ಮುಷ್ಠಿ ಹಿಡಿದು ಸಹಾಯಕ್ಕಾಗಿ ಯಾಚಿಸುತ್ತಿರುವ ಸಂತ್ರಸ್ತ ತಾಯಿ ಹಾಗೂ ಸನಿಹದಲ್ಲಿ ಅಳುತ್ತಿರುವ ಮಗುವಿನ ಈ ಕಾಂಕ್ರೀಟ್ ಶಿಲ್ಪ, ಖ್ಯಾತ ಕಾಂಕ್ರೀಟ್ ಶಿಲ್ಪ ಕಲಾವಿದ ಕಾನಾಯಿ ಕುಞÂರಾಮನ್ ಅವರ ಕನಸಿನ ಕೂಸಾಗಿದೆ.
ಪ್ರಸಕ್ತ ಕಾನಾಯಿ ಕುಞÂರಾಮನ್ ಅವರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ, ಶಿಲ್ಪದ ರಚನೆಯನ್ನು ಖುದ್ದು, ತಮ್ಮ ಉಪಸ್ಥಿತಿಯಲ್ಲಿ ನಡೆಸುತ್ತಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರ ಬದುಕು ಮತ್ತು ನೋವಿನ ಸಂಕೇತವಾಗಿ ಜಿಲ್ಲಾ ಪಂಚಾಯತ್ ಕಲ್ಪಿಸಿಕೊಂಡಿರುವ ಈ ಐತಿಹಾಸಿಕ ಸ್ಮಾರಕವು ಹದಿನೆಂಟು ವರ್ಷಗಳ ಕಾಯುವಿಕೆಯ ನಂತರ ಪೂರ್ಣಗೊಳ್ಳುವ ಹಂತಕ್ಕೆ ತಲುಪುತ್ತಿದೆ.
ವಯೋಸಹಜ ಸಮಸ್ಯೆಗಳನ್ನು ಬದಿಗಿರಿಸಿ, ಜಿಲ್ಲೆಯಲ್ಲಿ ಕೈಗೊಂಡಿರುವ ತಮ್ಮ ಪ್ರಮುಖ ಧ್ಯೇಯವೊಂದನ್ನು ಪೂರ್ತಿಗೊಳಿಸುವಲ್ಲಿ ಕಾನಾಯಿ ಕುಞÂರಾಮನ್ ಕೊನೆಗೂ ಯಶಸ್ವಿಯಾಗಿದ್ದಾರೆ. ವರ್ಷದ ಹಿಂದೆ ಬಿದ್ದು ಗಾಯಗೊಂಡಿದ್ದ ಇವರು ತಿಂಗಳುಗಳ ಚಿಕಿತ್ಸೆಯ ನಂತರ, ಕಾನಾಯಿ ಕುಞÂರಾಮನ್ ಅವರು ತಮ್ಮ ಪತ್ನಿ ನಳಿನಿ ಅವರ ಬೆಂಬಲದೊಂದಿಗೆ 40 ಅಡಿ ಎತ್ತರದ ಕಾಂಕ್ರೀಟ್ ಶಿಲ್ಪದ ಅಂತಿಮ ಹಂತದ ಕಾಮಗಾರಿಯ ಪ್ರತಿಯೊಂದು ಸೂಕ್ಷ್ಮ ಕೆಲಸವನ್ನೂ ಖುದ್ದುಪರಿಶೀಲಿಸುತ್ತಿದ್ದಾರೆ. ಶೀಲ್ಪದ ಅಂತಿಮ ಹಂತದ ಕಾಂಗಾರಿಯಲ್ಲಿ ತಮಿಳುನಾಡಿನ ಮಾತಾರ್ಂಡಮ್‍ನ ನುರಿತ ಕೆಲಸಗಾರರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿವಿಧ ಕಾರಣಗಳಿಂದ ಶಿಲ್ಪದ ನಿರ್ಮಾಣವು ಸ್ವಲ್ಪ ಸಮಯದಿಂದ ಸ್ಥಗಿತಗೊಂಡಿದ್ದರೂ, ಪ್ರಸ್ತುತ ಆಡಳಿತ ಸಮಿತಿಯು ಕೆಲಸವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ದೃಢವಾಗಿ ನಿರ್ಧರಿಸಿದೆ. ಜಿಲ್ಲಾ ಪಂಚಾಯಿತಿ ಮುಂದಿನ ತಿಂಗಳುಗಳಲ್ಲಿ ನಿರ್ಮಾಣವನ್ನು ಪೂರ್ಣಗೊಳಿಸಿ ಶಿಲ್ಪವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿಯನ್ನು ಹೊಂದಿರುವುದಗಿ ಜಿಪಂ ಅದ್ಯಕ್ಷರು ತಿಳಿಸಿದ್ದಾರೆ.
ಅಭಿಮತ:
ಕಾಸರಗೋಡಿನ ಎಂಡೋಸಲ್ಪಾನ್ ಸಂತ್ರಸ್ತ ತಾಯಂದಿರ ರೋದನವನ್ನು ಈ ಶಿಲ್ಪ ಪ್ರತಿಬಿಂಬಿಸುತ್ತಿದೆ. ಕಾಸರಗೋಡಿನ ಸಾಂಸ್ಕøತಿಕ ನಕ್ಷೆಯಲ್ಲಿ ಪ್ರಮುಖ ಹೆಗ್ಗುರುತಾಗಲಿರುವ ಈ ಶಿಲ್ಪದ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.
ಕಾನಾಯಿ ಕುಞÂರಾಮನ್,
ಅಂತಾರಾಷ್ಟ್ರೀಯ ಕಾಂಕ್ರೀಟ್ ಶಿಲ್ಪ ಕಲಾವಿದ




