ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಏಪ್ರಿಲ್ 17 ರಂದು ಆರಂಭವಾಗಿ ಏಪ್ರಿಲ್ 28ರ ತನಕ ನಡೆಯಲಿದೆ. ಪೂರ್ವಭಾವಿಯಾಗಿ ಮೈಸೂರು ಪ್ರಾದೇಶಿಕ ಸಮಿತಿಯ ನೇತೃತ್ವದಲ್ಲಿ ಶ್ರೀಕ್ಷೇತ್ರಕ್ಕೆ ಹಸಿರುವಾಣಿ, ದವಸಧಾನ್ಯಗಳನ್ನು ಸಮರ್ಪಿಸಲಾಯಿತು.
ಮೈಸೂರು ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಜ್ಯೋತಿಷಿ ವೆಂಕಟೇಶ್ವರ ಭಟ್ ಕುಂಜಾರು ಅವರ ನೇತೃತ್ವದಲ್ಲಿ ಮೈಸೂರಿನ ಭಗವದ್ಭಕ್ತರು ಸಾವಯವ ಕೃಷಿಯನ್ನು ಮಾಡಿದ್ದರು. ಸೋಮವಾರ ಬೆಳಗ್ಗೆ ಲಾರಿಗಳಲ್ಲಿ ಆಗಮಿಸಿದ ಹಸಿರುವಾಣಿಯನ್ನು ಶ್ರೀಕ್ಷೇತ್ರದ ಪದಾಧಿಕಾರಿಗಳು ಸ್ವೀಕರಿಸಿದರು. ಅರ್ಚಕ ಶಿವರಾಮ ಭಟ್ ಪೆರಡಾಲ ಪ್ರಾರ್ಥನೆಯನ್ನು ಸಲ್ಲಿಸಿದರು. ಮೊಕ್ತೇಸರರಾದ ಜಗನ್ನಾಥ ರೈ ಪೆರಡಾಲಗುತ್ತು, ಸೀತಾರಾಮ ನವಕಾನ, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಆಹಾರ ಸಮಿತಿಯ ಪ್ರಧಾನ ಸಂಚಾಲಕ ಗಣೇಶಕೃಷ್ಣ ಅಳಕ್ಕೆ, ಜೊತೆಕಾರ್ಯದರ್ಶಿ ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಲೆಕ್ಕಪರಿಶೋಧಕ ಸತೀಶ ಪುದ್ಯೋಡು, ಕಾರ್ಯದರ್ಶಿ ಗಣೇಶ ಪ್ರಸಾದ ಕಡಪ್ಪು, ಜೊತೆಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಶಿವಶಕ್ತಿ ಕ್ಲಬ್ಬಿನ ಸದಸ್ಯರು, ಉಗ್ರಾಣ ಸಮಿತಿಯ ಅಧ್ಯಕ್ಷ ಸದಾಶಿವ ಮುರಿಯಂಕೂಡ್ಲು, ಮಾತೃಸಮಿತಿ ಪದಾಧಿಕಾರಿಗಳು, ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಭಗವದ್ಭಕ್ತರು ಪಾಲ್ಗೊಂಡಿದ್ದರು.

.jpeg)
.jpeg)
