ಕಾಸರಗೋಡು: ಗಡಿನಾಡು ಕಾಸರಗೋಡಿನ ಜನಪ್ರಿಯ ಕನ್ನಡ ಸೇವಾ ಸಂಸ್ಥೆಯಾದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನ ಪ್ರಕಾಶನದ ಸ್ಥಾಪಕ ಸಂಚಾಲಕರೂ, ಸಾರಥಿಯೂ ಆಗಿರುವ ಸಂಧ್ಯಾರಾಣಿ ಟೀಚರ್ ಅವರಿಗೆ ಉಡುಪಿ ಶ್ರೀ ಕೃಷ್ಣ ಮಠದ ಗೌರವಾನ್ವಿತ, ಪೂಜ್ಯ "ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ"2026.ನೀಡಿ ಗೌರವಿಸಲಾಗುವುದು. ಉಡುಪಿಯ ಪರ್ಯಾಯ ಶಿರೂರು ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನ, ಕಥಾಬಿಂದು ಸಾಹಿತ್ಯ ವೇದಿಕೆ (ರಿ.)ರೂವಾರಿ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಏ. 12ರಂದು ನಡೆಯಲಿರುವ "ಕಥಾಬಿಂದು ಸಾಹಿತ್ಯ ಸಮ್ಮೇಳನ-2026'ಕಾರ್ಯಕ್ರಮದಲ್ಲಿ ಉಡುಪಿಯ ರಜಾ0ನ್ಗನದಲ್ಲಿ ನಡೆಯಲಿರುವುದು.
ಶಿರೂರು ಮಠದ ಶ್ರೀ ವೇದವರ್ದನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಧರ್ಮದರ್ಶಿ, ಡಾ. ಹರಿಕೃಷ್ಣ ಪುನಃರೂರ್ ಅದ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿರುವುದು.

.jpg)
