ಪೆರ್ಲ: ಕಾನತ್ತೂರು ಓಟೆಕ್ಕಾಡು ನಿವಾಸಿ, ಕಾಕುಂಜೆ ಮನೆತನದ, ಪ್ರಗತಿಪರ ಕೃಷಿಕ, ಪ್ರಸಕ್ತ ಪೆರ್ಲ ಬಜಕೂಡ್ಲಿನಲ್ಲಿ ವಾಸಿಸುತ್ತಿರುವ ಶಂಕರನಾರಾಯಣ ಭಟ್ ಅವರ ಪತ್ನಿ ಶಾರದಾ(70)ಮಂಗಳವಾರ ತಿರುವನಂತಪುರದ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಅವರು ಪತಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.


