HEALTH TIPS

'ಪಿಕ್ಚರ್ ಅಭಿ ಬಾಕಿ ಹೈ': ಎಎಪಿಗೆ ರಾಘವ್ ಛಡ್ಡಾ ತಿರುಗೇಟು

 ನವದೆಹಲಿ: ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಆರೋಪಗಳಿಗೆ ರಾಜಸ್ಯಭೆ ಸದಸ್ಯ ರಾಘವ್ ಛಡ್ಡಾ, ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ವಿಡಿಯೊ ಬಿಡುಗಡೆ ಮಾಡಿದ್ದಾರೆ. 


'ಸಂಸತ್ತಿನಲ್ಲಿ ಪಂಜಾಬ್‌ನ ಸಮಸ್ಯೆಗಳ ಕುರಿತು ಧ್ವನಿ ಎತ್ತುವಲ್ಲಿ ರಾಘವ್ ಛಡ್ಡಾ ವಿಫಲರಾಗಿದ್ದಾರೆ ಎಂದು ಆರೋಪಿಸುವ ಎಎಪಿಯ ಸಹೋದ್ಯೋಗಿಗಳಿಗೆ ಇಲ್ಲಿ ಚಿಕ್ಕದಾದ ಟ್ರೇಲರ್ ಇದೆ. ಪಿಕ್ಚರ್ ಅಭಿ ಬಾಕಿ ಹೈ' ಎಂದಿದ್ದಾರೆ.

'ಪಂಜಾಬ್ ನನ್ನ ಮನೆ, ನನ್ನ ಕರ್ತವ್ಯ, ನನ್ನ ಮಣ್ಣು ಮತ್ತು ನನ್ನ ಆತ್ಮ' ಎಂದು ಅವರು ಉಲ್ಲೇಖಿಸಿದ್ದಾರೆ.

ಪಂಜಾಬ್‌ನಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದು, ಎಂಎಸ್‌ಪಿ ಹಾಗೂ ಭಗತ್ ಸಿಂಗ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡುತ್ತಿರುವುದು ಛಡ್ಡಾ ಬಿಡುಗಡೆ ಮಾಡಿರುವ ವಿಡಿಯೊದಲ್ಲಿದೆ.

ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ರಾಘವ್‌ ಛಡ್ಡಾ ಅವರನ್ನು ಎಎಪಿ ಕೆಳಗಿಳಿಸಿತ್ತು. ಇದರ ಬೆನ್ನಲ್ಲೇ ಎಎಪಿ ಹಾಗೂ ರಾಘವ್ ಛಡ್ಡಾ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.


To my colleagues in AAP who were forced to issue videos saying that “Raghav Chadha failed to raise Punjab’s issues in Parliament”, here is a small trailer…Picture Abhi Baaki Hai. Punjab isn’t a talking point for me. It is my home, my duty, my soil, my soul❤️







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries