HEALTH TIPS

ಉಖ್ರುಲ್‌ನಲ್ಲಿ ನಾಗಾ-ಕುಕಿ ಸಂಘರ್ಷ: ಮೂವರ ಹತ್ಯೆ, ಐವರಿಗೆ ಗಾಯ

ಗುವಾಹಟಿ: ಜನಾಂಗೀಯ ಹಿಂಸೆಯಿಂದ ತತ್ತರಿಸಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೂವರು ಸಂಘರ್ಷಕ್ಕೆ ಬಲಿಯಾಗಿದ್ದಾರೆ. ತಂಗ್ಕುಲ್ ನಾಗಾ ಸಮುದಾಯಕ್ಕೆ ಸೇರಿದ ಒಬ್ಬ ಹಾಗೂ ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಗುಂಡೇಟಿನಿಂದ ಮೃತಪಟ್ಟಿದ್ದಾರೆ.

ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ನಾಗಾ ಹಾಗೂ ಕುಕಿ ಸಮುದಾಯಗಳ ನಡುವಿನ ಗುಂಡಿನ ಕಾಳಗದಲ್ಲಿ ಇತರ ಐದು ಮಂದಿ ಗಾಯಗೊಂಡಿದ್ದಾರೆ.

ಇದೇ ವೇಳೆ ಮ್ಯಾನ್ಮಾರ್ ಕುಕಿ ನ್ಯಾಷನಲ್ ಆರ್ಮಿ-ಬರ್ಮಾ (ಕೆಎನ್‌ಎ-ಬಿ) ಸಂಘಟನೆಯ ಐದು ಮಂದಿಯನ್ನು ಕೆಮ್ಜಾಂಗ್ ಜಿಲ್ಲೆಯಲ್ಲಿ ಹತ್ಯೆ ಮಾಡಿರುವುದಾಗಿ ಎನ್‌ಎಸ್‌ಸಿಎನ್ ಸಂಘಟನೆಯ ಒಂದು ಬಣ ಹೇಳಿಕೆ ನೀಡಿದೆ. ಆದರೆ ಈ ಬಗ್ಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ಉಖ್ರುಲ್ ಜಿಲ್ಲೆಯಲ್ಲಿ ಹತರಾದವರಲ್ಲಿ 29 ವರ್ಷದ ತಂಗ್ಕುಲ್ ನಾಗಾ ಹಾಗೂ ಹೊರ್ಷೋಕ್ಮಿ ಜಮಾಂಗ್ ಸೇರಿದ್ದಾರೆ. ಜಮಾಂಗ್ ಅವರನ್ನು ಸಶಸ್ತ್ರ ಕುಕಿ ಉಗ್ರರು ಹತ್ಯೆ ಮಾಡಿದ್ದು, ಶುಕ್ರವಾರ ಮುಂಜಾನೆ ಸಿನಕತೇಯಿ ಬಳಿ ನಡೆದ ದಾಳಿಯಲ್ಲಿ ಕಾರ್ಯಾಚರಣೆ ಒಪ್ಪಂದ ಮಾಡಿಕೊಂಡ ಶಂಕೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ತಂಗ್ಕುಲ್ ನಾಗಾ ಲಾಂಗ್ (ಟಿಎನ್‌ಎಲ್) ಅಧಿಕೃತ ಹೇಳಿಕೆ ನೀಡಿದೆ.

ಜಮಾಂಗ್ ನಾಗಾ ವಿಲೇಜ್ ಗಾರ್ಡ್‌ನ ಸದಸ್ಯರಾಗಿದ್ದು, ಸಿನಕತೇಯಿ ಸಂಘರ್ಷದ ವೇಳೆ ಗ್ರಾಮದಲ್ಲಿ ಈ ಸಂಘಟನೆ ಗಸ್ತು ತಿರುಗುತ್ತಿತ್ತು ಎಂದು ಹೇಳಲಾಗಿದೆ.

ಕುಕಿ ಸಮುದಾಯದ ಇಬ್ಬರು ಹತರಾಗಿದ್ದು, ಮುಲಾಮ್ ಗ್ರಾಮದಲ್ಲಿ ಅವರ ಮೃತದೇಹಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿವೆ. ಇವರನ್ನು ಪಾವೊಮಿನ್ಮಿಲಿನ್ ಹಾಲಾಯ್ (19) ಮತ್ತು ಲೆತ್ಲಲ್ ಸಿತ್ಲೋಹು (43) ಎಂದು ಗುರುತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries