HEALTH TIPS

ಅಮರಾವತಿ ಆಂಧ್ರಪ್ರದೇಶದ ಏಕೈಕ ಮತ್ತು ಅಧಿಕೃತ ರಾಜಧಾನಿ ಕಾಯ್ದೆಗೆ ರಾಷ್ಟ್ರಪತಿ ಅಂಕಿತ; ಗೆಜೆಟ್​ನಲ್ಲಿ ಪ್ರಕಟಿಸಿದ ಕೇಂದ್ರ

ನವದೆಹಲಿ: ಅಮರಾವತಿಯನ್ನು(Amaravati) ಆಂಧ್ರಪ್ರದೇಶದ ಏಕೈಕ ಮತ್ತಿ ಅಧಿಕೃತ ರಾಜಧಾನಯನ್ನಾಗಿ ಮಾಡುವ ಆಂಧ್ರಪ್ರದೇಶ ಪುನರ್ವಿಂಗಡಣೆ (ತಿದ್ದುಪಡಿ) ಕಾಯ್ದೆ-2026ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಮಂಗಳವಾರ ಕೇಂದ್ರ ಸರ್ಕಾರ ತನ್ನ ಗೆಜಟ್​ನಲ್ಲಿ ಪ್ರಕಟಿಸಿದೆ.

ಈ ಕುರಿತು ಎಕ್ಸ್​ನಲ್ಲಿ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂಬ ಗೆಜೆಟ್ ಪ್ರತಿಯನ್ನು ಅನ್ನು ಶೇರ್ ಮಾಡಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಮರಾವತಿಯನ್ನು ರಾಜ್ಯದ ಏಕೈಕ ರಾಜಧಾನಿಯಾಗಿ ಗುರುತಿಸಿರುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ಪುನರ್‌ಸಂಘಟನೆ (ತಿದ್ದುಪಡಿ) ಕಾಯ್ದೆ 2026ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಪ್ಪಿಗೆ ನೀಡಿದ್ದಕ್ಕಾಗಿ, ನಮ್ಮ ರಾಜಧಾನಿಯ ಬಹುದಿನಗಳ ಕನಸನ್ನು ನನಸಾಗಿಸಿದಕ್ಕಾಗಿ ಆಂಧ್ರಪ್ರದೇಶದ ನನ್ನ ಜನರ ಪರವಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ನಮ್ಮ ರಾಜ್ಯಕ್ಕೆ ಬದ್ಧತೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಮಸೂದೆಯನ್ನು ಬೆಂಬಲಿಸಿದ ಎಲ್ಲಾ ಸಂಸದರಿಗೆ, ನಮ್ಮ ರಾಜ್ಯ ನಾಯಕರಿಗೆ ಮತ್ತು ನಮ್ಮೊಂದಿಗೆ ನಿಂತ ಪ್ರತಿಯೊಬ್ಬ ನಾಗರಿಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಆಂಧ್ರಪ್ರದೇಶದ ನನ್ನ ಜನರಿಗೆ, ವಿಶೇಷವಾಗಿ ಅಮರಾವತಿಯ ನನ್ನ ರೈತರಿಗೆ ಸಿಕ್ಕ ಜಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ಬಳಿಕ 2014ರ ಮೂಲ ಕಾಯಿದೆಯು ಹೈದರಾಬಾದ್ ಅನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹತ್ತು ವರ್ಷಗಳ ಕಾಲ ಎರಡು ರಾಜ್ಯಗಳ ರಾಜ್ಯಧಾನಿಯಾಗಿರುತ್ತದೆ. ನಂತರ ಹೈದರಾಬಾದ್ ತೆಲಂಗಾಣದ ರಾಜಧಾನಿಯಾಗಿರುತ್ತದೆ. ಆಂಧ್ರಪ್ರದೇಶಕ್ಕೆ ಹೊಸ ರಾಜಧಾನಿ ಇರುತ್ತದೆ ಎಂದು ಹೇಳಿತ್ತು.

ಮಾರ್ಚ್ 28ರಂದು ಆಂಧ್ರ ಪ್ರದೇಶ ವಿಧಾನಸಭೆಯು ಅಮರಾವತಿಯನ್ನು ಒಂದೇ ರಾಜಧಾನಿ ಮತ್ತು ಏಕೈಕ ರಾಜಧಾನಿಯನ್ನಾಗಿ ಬೆಂಬಲಿಸುವ ನಿರ್ಣಯವನ್ನು ತೆಗೆದುಕೊಂಡು, ಸಂಸತ್​ನಲ್ಲಿ ಅದನ್ನು ಅಧಿಕೃತ ಕಾನೂನು ಮಾಡಲು ಕಳುಹಿಸಿತ್ತು. ಈ ಹಿಂದೆ ವೈಎಸ್​ಆರ್​ಸಿಪಿ ಸರ್ಕಾರದಲ್ಲಿ ಅಮರಾವತಿ ಒಂದೇ ರಾಜಧಾನಿ ಎಂಬುದನ್ನು ಕೈಬಿಟ್ಟು ಅಮರಾವತಿಯನ್ನು ಹಿಡಿದುಕೊಂಡು ಮೂರು ರಾಜಧಾನಿಯನ್ನು ನಿರ್ಮಾಣ ಮಾಡಲೊರಟಿತ್ತು.
ಈ ಹಿನ್ನೆಲೆ ಏಪ್ರಿಲ್ 1ರಂದು ಲೋಕಸಭೆಯು ಆಂಧ್ರಪ್ರದೇಶ ಪುನರ್ವಿಂಗಡಣಾ ಕಾಯ್ದೆ- 2014ಕ್ಕೆ ತಿದ್ಧುಪಡಿ ಮಾಡಿ ಅಮರಾವತಿ ಆಂಧ್ರದ ಹೊಸ ಮತ್ತು ಏಕೈಕ ರಾಜಧಾನಿ ಎಂಬ ಮಸೂದೆಯನ್ನು ಪಾಸ್ ಮಾಡಿತು. ರಾಜ್ಯಸಭೆಯಲ್ಲಿ ಬಿಲ್ ಪಾಸಾಯ್ತು. ಈ ವೇಳೆ ವಿಪಕ್ಷ ವೈಎಸ್​ಆರ್​ಸಿಪಿ ವಿರೋಧಿಸಿ ಸಭಾತ್ಯಾಗವನ್ನು ಮಾಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries