ಕಾಸರಗೋಡು: ಕೇರಳದಲ್ಲಿ ಮೂರನೇ ಬಾರಿಗೆ ಎಡರಂಗ ಸರ್ಕಾರ ಅಧಿಕಾರಕ್ಕೇರುವುದು ಖಚಿತವಾಗಿದ್ದು, ಇದುರಾಜ್ಯದ ಜನತೆಯ ಆಗ್ರಹವೂ ಆಗಿರುವುದಾಗಿ ಸಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬಿನೋಯ್ ವಿಶ್ವಂ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ ಕ್ಲಬ್ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ'ವೋಟ್ ಅಂಡ್ ವಾಯ್ಸ್'ಕಾರ್ಯಕ್ರಮದನ್ವಯ ನಡೆದ ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹೇಗಾದರೂ ಮಾಡಿ ಅಧಿಕಾರಿ ಕೈವಶಪಡಿಸಲು ಹವಣಿಸುತ್ತಿರುವ ಕಾಂಗ್ರೆಸ್, ಎಡರಂಗ ಬಿಜೆಪಿಯೊಂದಿಗೆ ಡೀಲ್ ಮಾಡಿಕೊಂಡಿದೆ ಎಂ ಸುಳ್ಳು ಪ್ರಚಾರದ ಮೂಲಕ ಜನತೆಯನ್ನು ವಂಚಿಸಲು ಮುಂದಾಗುತ್ತಿದೆ. ಐಕ್ಯರಂಗ-ಬಿಜೆಪಿ ಬಾಂಧವ್ಯ ಮರೆಮಾಚಲು ಎಲ್.ಡಿ.ಎಫ್-ಬಿಜೆಪಿ ಡೀಲ್ ಎಂಬ ಪ್ರಚಾರ ಹರಿಯಬಿಡುತ್ತಿದ್ದು, ಈ ಬಗ್ಗೆ ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಿದರು. ಬಿಜೆಪಿ ತನ್ನ ರಾಜಕೀಯ ತಂತ್ರಗಾರಿಕೆಗಾಗಿ ಎಸ್‍ಐಆರನ್ನು ಬಳಸಿಕೊಳ್ಳುತ್ತಿದೆ. ಎಫ್‍ಸಿಆರ್‍ಎ ಮಸೂದೆ ಮೂಲಕ ಅಲ್ಪಸಂಖ್ಯಾತರು ನಡೆಸುತ್ತಿರುವ ಚಾರಿಟಿ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರದ ಬಿಜೆಪಿ ಸರ್ಕಾರ ಹವಣಿಸುತ್ತಿದೆ ಎಂದು ತಿಳಿಸಿದರು. ಶಬರಿಮಲೆ ಇರಲಿ, ಚರ್ಚ್, ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳಿಂದ ಕಳವು ನಡೆದರೂ, ಸರ್ಕಾರ ಕಳ್ಳರಿಗೆ ಅನುಕೂಲವಾಗಿ ಎಂದಿಗೂ ನಿಲ್ಲದು ಎಂದು ತಿಳಿಸಿದರು.
ಕಾಸರಗೋಡು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಬ್ದುಲ್ಲಕುಞÂ ಉದುಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರದೀಪ್ ನಾರಾಯಣ ಸ್ವಾಗತಿಸಿದರು.

