ಕಾಸರಗೋಡು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಿಗೆ ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ರ್ಯಾಂಡಮೈಸೇಶನ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ನೌಕರರನ್ನು ಶೇಕಡಾ 20 ರಷ್ಟು ಮೀಸಲು ಸೇರಿದಂತೆ ಮತದಾನ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಸಾಮಾನ್ಯ ವೀಕ್ಷಕರಾದ ವಿಜಯ್ ಬಾಲಕೃಷ್ಣ ವಾಘ್ಮಾರೆ ಮತ್ತು ಧ್ಯಾನೇಶ್ವರ ಕೊಂಡಿ ಬಹುಕಿಲಾರಿ ಪಾಲ್ಗೊಂಡಿದ್ದರು.
ಮಂಜೇಶ್ವರ ಕ್ಷೇತ್ರದ 230 ಮತಗಟ್ಟೆಗಳಿಗೆ 276 ಅಧ್ಯಕ್ಷಾಧಿಕಾರಿಗಳು, 276 ಪ್ರಥಮ ಮತಗಟ್ಟೆ ಅಧಿಕಾರಿಗಳು ಮತ್ತು 552 ಮತಗಟ್ಟೆ ಅಧಿಕಾರಿಗಳು, ಕಾಸರಗೋಡು ಕ್ಷೇತ್ರದ 219 ಮತಗಟ್ಟೆಗಳಿಗೆ 263 ಅಧ್ಯಕ್ಷಾಧಿಕಾರಿಗಳು, 263 ಪ್ರಥಮ ಮತಗಟ್ಟೆ ಅಧಿಕಾರಿಗಳು ಮತ್ತು 526 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ.
ಉದುಮ ಕ್ಷೇತ್ರದ 238 ಮತಗಟ್ಟೆಗಳಿಗೆ 286 ಅಧ್ಯಕ್ಷಾಧಿಕಾರಿಗಳು, 286 ಪ್ರಥಮ ಮತಗಟ್ಟೆ ಅಧಿಕಾರಿಗಳು ಮತ್ತು 572 ಮತಗಟ್ಟೆ ಅಧಿಕಾರಿಗಳು, ಕಾಂಞಂಗಾಡ್ ಕ್ಷೇತ್ರದ 239 ಮತಗಟ್ಟೆಗಳಿಗೆ 287 ಅಧ್ಯಕ್ಷಾಧಿಕಾರಿಗಳು, 287 ಪ್ರಥಮ ಮತಗಟ್ಟೆ ಅಧಿಕಾರಿಗಳು ಮತ್ತು 574 ಮತಗಟ್ಟೆ ಅಧಿಕಾರಿಗಳು, ತ್ರಿಕರಿಪುರ ಕ್ಷೇತ್ರದಲ್ಲಿ 220 ಮತಗಟ್ಟೆ ಕೇಂದ್ರಗಳಿಗೆ 264 ಅಧ್ಯಕ್ಷಾಧಿಕಾರಿಗಳು, 264 ಪ್ರಥಮ ಮತಗಟ್ಟೆ ಅಧಿಕಾರಿಗಳು ಮತ್ತು 528 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ.
ಎರಡನೇ ಹಂತದ ತರಬೇತಿಗೆ ಮುಂಚಿತವಾಗಿ ಚುನಾವಣಾ ಕರ್ತವ್ಯಕ್ಕೆ ಸಂಬಂಧಿಸಿದ ಗುರುತಿನ ಚೀಟಿಗಾಗಿ ಮತದಾನ ಕರ್ತವ್ಯಕ್ಕೆ ನಿಯೋಜಿಸಲಾದ ಎಲ್ಲಾ ಸಿಬ್ಬಂದಿಗೆ ತಮ್ಮ ಫೆÇೀಟೋ, ಮತದಾರರ ಗುರುತಿನ ಚೀಟಿ ಮತ್ತು ಬ್ಯಾಂಕ್ ವಿವರಗಳನ್ನು 'ಆರ್ಡರ್' ಸಾಫ್ಟ್‍ವೇರ್‍ನಲ್ಲಿ ಅಪ್‍ಲೋಡ್ ಮಾಡಿಕೊಳ್ಳಳು ಸೂಚಿಸಲಾಐಇತು. ಎಡಿಎಂ ಕೆ.ವಿ. ಶ್ರುತಿ, ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಎನ್‍ಐಸಿ ಜಿಲ್ಲಾ ಮಾಹಿತಿ ಅಧಿಕಾರಿ ಕೆ. ಲೀನಾ, ಮತ್ತು ಕಲೆಕ್ಟರೇಟ್ ಚುನಾವಣಾ ಇಲಾಖೆಯ ಜೂನಿಯರ್ ಸೂಪರಿಂಟೆಂಡೆಂಟ್ ಎ. ರಾಜೀವನ್ ಪಾಳ್ಗೊಂಡಿದ್ದರು.



