HEALTH TIPS

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ 210 ಮಂಡಲಗಳು

 ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 210ಕ್ಕೇರಲಿದೆ. ಪ್ರಸ್ತುತ 140 ಮಂಡಲಗಳಿವೆ. 2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಪ್ರಸ್ತುತ ಇರುವ 20ರಿಂದ 30ಕ್ಕೇರಲಿದೆ. ಇದರೊಂದಿಗೆ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 543ರಿಂದ 816ಕ್ಕೇರಲಿದೆ. ದೇಶದಲ್ಲಿ ಮಹಿಳೆಯರಿಗೆ ಕಾನೂನು ನಿರ್ಮಾಣ ಸಭೆಗಳಲ್ಲಿ ಮೂರರಲ್ಲೊಂದು ಪ್ರಾತಿನಿಧ್ಯ ಖಚಿತಪಡಿಸುವ ಅಂಗವಾಗಿ 2023ರಲ್ಲಿ ನಾರಿವಂದನ್ ನಿಯಮವನ್ನು ಪಾರ್ಲಿಮೆಂಟ್ ಮಂಜೂರು ಮಾಡಿತ್ತು.


2029ರ ಲೋಕಸಭಾ ಚುನಾವಣೆಯಲ್ಲಿ 2026ರ ಜನಗಣತಿ ಅನುಸರಿಸಿ ಮಹಿಳಾ ಮೀಸಲಾತಿ ಜ್ಯಾರಿಗೊಳಿಸಬೇಕು ಎಂದು ಕಾನೂನು ನಿರ್ದೇಶಿಸಿತ್ತು. ಇದಕ್ಕೆ 2011ರ ಜನಗಣತಿಯ ಆಧಾರದಲ್ಲಿ ವಿಧಾನಸಭಾ ಕ್ಷೇತ್ರಗಳ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆ 50 ಶೇಕಡಾ ಹೆಚ್ಚಿಸಲು ಹಾಗೂ ಒಟ್ಟು ಸೀಟಿನ ಮೂರರಲ್ಲೊಂದನ್ನು ಮಹಿಳೆಯರಿಗೆ ಮೀಸಲಿಡಲು ಈಗಿನ ಸಂವಿಧಾನ ತಿದ್ದುಪಡಿ ಮೂಲಕ ಉದ್ದೇಶಿಸಲಾಗಿದೆ. ಈ ಬಗ್ಗೆ ಸಂವಿಧಾನ ತಿದ್ದುಪಡಿ ನಡೆಸಲು ಪಾರ್ಲಿಮೆಂಟ್‌ನಲ್ಲಿ ಮೂರರಲ್ಲಿ ಎರಡು ಬಹುಮತ ಅನಿವಾರ್ಯವಾಗಿದೆ. ಇದಕ್ಕೆ ಕೇಂದ್ರ ಸರಕಾರ ವಿಪಕ್ಷಗಳ ಸಹಕಾರವನ್ನು ವಿನಂತಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries