ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭ ನವೀಕರಿಸಿದ ರಾಜಗೋಪುರ, ರಾಜಾಂಗಣ ಮೇಲ್ಛಾವಣಿ ಮತ್ತು ನೂತನ ಭೋಜನಶಾಲೆಯ ಲೋಕಾರ್ಪಣೆ ಶನಿವಾರ ನಡೆಯಿತು. ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ನಾಮಫಲಕ ಅನಾವರಣಗೊಳಿಸಿದರು. ವಿಶ್ರಾಂತ ಪ್ರಾಂಶುಪಾಲ ಡಾ. ಪಾದೆಕಲ್ಲು ವಿಷ್ಣು ಭಟ್, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಜಯದೇವ ಖಂಡಿಗೆ, ನಿರಂಜನ ರೈ ಪೆರಡಾಲ, ಜಗನ್ನಾಥ ರೈ, ಸೀತಾರಾಮ ನವಕಾನ, ಕೃಷ್ಣ ಬದಿಯಡ್ಕ, ಗಣೇಶಕೃಷ್ಣ ಅಳಕ್ಕೆ, ಭಾಸ್ಕರ ಪಂಜಿತ್ತಡ್ಕ, ಕೃಷ್ಣರಾಜ ಬಲ್ಲಾಳ್ ಕೊಡ್ಯಮೆ ಅರಮನೆ, ಕೃಷ್ಣಮೂರ್ತಿ ಪುದುಕೋಳಿ, ವಿವಿಧ ಸಮಿತಿಗಳ ಸದಸ್ಯರು ಪಾಲ್ಗೊಂಡಿದ್ದರು.


