ವಾಷಿಂಗ್ಟನ್: ಇತ್ತೀಚಿಗೆ ನಡೆದ ಯುದ್ಧದಲ್ಲಿ ಪಶ್ಚಿಮ ಏಷ್ಯಾದಾದ್ಯಂತ ಇರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಇರಾನ್ ರಹಸ್ಯವಾಗಿ ಚೀನಾದ ಗೂಢಚಾರ ಉಪಗ್ರಹವೊಂದನ್ನು ಪಡೆದುಕೊಂಡಿತ್ತು ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.
ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿಗೆ ಚೀನಾದ ಗೂಢಾಚಾರ ಉಪಗ್ರಹ ಬಳಸಿದ್ದ ಇರಾನ್!
ಒಂದು ಸಾಲಿನಲ್ಲಿಅಮೆರಿಕ ಸೇನಾ ನೆಲೆಗಳ ಮೇಲಿನ ದಾಳಿಗೆ ಇರಾನ್ ಚೀನಾದ ಗೂಢಚಾರ ಉಪಗ್ರಹವನ್ನು ಬಳಸಿಕೊಂಡು ರಹಸ್ಯವಾಗಿ ಕಣ್ಗಾವಲು ನಡೆಸಿದೆ ಎಂದು ವರದಿ ಬಹಿರಂಗಪಡಿಸಿದೆ.ಪ್ರಮುಖ ಅಂಶಗಳು• ಚೀನಾದಿಂದ ಗೂಢಚಾರ ಉಪಗ್ರಹ ಖರೀದಿಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಚೀನಾದ ಅರ್ಥ್ ಐ ಕಂಪನಿಯ 'TEE-01B' ಎಂಬ ಗೂಢಚಾರ ಉಪಗ್ರಹವನ್ನು ಪಡೆದುಕೊಂಡಿದೆ.• ಅಮೆರಿಕ ನೆಲೆಗಳ ಮೇಲೆ ಕಣ್ಗಾವಲುಇರಾನ್ ಸೌದಿ ಅರೇಬಿಯಾ, ಬಹರೇನ್, ಜೋರ್ಡಾನ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳ ಚಲನವಲನಗಳನ್ನು ಪತ್ತೆಹಚ್ಚಲು ಈ ಉಪಗ್ರಹವನ್ನು ಬಳಸಿದೆ.• ದಾಳಿಗೆ ಮುನ್ನ ಮತ್ತು ನಂತರದ ಚಿತ್ರಣಮಾರ್ಚ್ ತಿಂಗಳಲ್ಲಿ ನಡೆದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಗೂ ಮುನ್ನ ಹಾಗೂ ನಂತರದ ಸೂಕ್ಷ್ಮ ಚಿತ್ರಗಳನ್ನು ಈ ಉಪಗ್ರಹದ ಮೂಲಕ ಸೆರೆಹಿಡಿಯಲಾಗಿದೆ.• ಅಪಾಯಕಾರಿ ತಂತ್ರಜ್ಞಾನ ಹಸ್ತಾಂತರಚೀನಾ 'ಇನ್-ಆರ್ಬಿಟ್ ಡೆಲಿವರಿ' ಮಾದರಿಯನ್ನು ಅನುಸರಿಸಿ, ಕಕ್ಷೆಗೆ ಸೇರಿದ ಬಾಹ್ಯಾಕಾಶ ನೌಕೆಯನ್ನು ನೇರವಾಗಿ ಇರಾನ್‌ನಂತಹ ವಿದೇಶಿ ಗ್ರಾಹಕರಿಗೆ ಹಸ್ತಾಂತರಿಸಿದೆ.• ನಾಗರಿಕ ಮೂಲಸೌಕರ್ಯಗಳ ಮೇಲೂ ಕಣ್ಣುಸೇನಾ ನೆಲೆಗಳಲ್ಲದೆ, ಯುಎಇಯ ಕಂಟೈನರ್ ಪೋರ್ಟ್ ಮತ್ತು ಬಹರೇನ್‌ನಂತಹ ದೇಶಗಳ ಪ್ರಮುಖ ನಾಗರಿಕ ಮೂಲಸೌಕರ್ಯಗಳ ಮೇಲೂ ಈ ಉಪಗ್ರಹ ನಿಗಾ ಇರಿಸಿದೆ.ಪ್ರಮುಖ ಅಂಕಿಅಂಶಗಳು2024ಉಪಗ್ರಹ ಉಡಾವಣೆಯ ವರ್ಷಮಾರ್ಚ್ 13, 14 ಮತ್ತು 15ಕಣ್ಗಾವಲು ನಡೆದ ದಿನಾಂಕಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'TEE-01B' ಎನ್ನುವ ಉಪಗ್ರಹವನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ವಾಯುಪಡೆ ಚೀನಾದಿಂದ ಪಡೆದುಕೊಂಡಿದೆ. 2024ರಲ್ಲಿ ಈ ಉಪಗ್ರಹ ಚೀನಾದಿಂದಲೇ ಉಡ್ಡಯನಗೊಂಡಿತ್ತು.
ಸೋರಿಕೆಯಾದ ಮಾಹಿತಿಯಿಂದ ಇದು ಗೊತ್ತಾಗಿದೆ 'ಫೈನಾನ್ಷಿಯಲ್ ಟೈಮ್ಸ್' ಹೇಳಿದೆ.
ಅಮೆರಿಕದ ಪ್ರಮುಖ ಸೇನಾ ನೆಲೆಗಳ ಮೇಲೆ ಕಣ್ಗಾವಲು ಇರಿಸಲು ಇರಾನ್‌ನ ಮಿಲಿಟರಿ ಕಮಾಂಡರ್‌ಗಳು ಈ ಉಪಗ್ರಹವನ್ನು ಬಳಸಿಕೊಂಡಿದ್ದು ಉಪಗ್ರಹ ಚಿತ್ರಗಳು ಮತ್ತು ಕಕ್ಷೀಯ ವಿಶ್ಲೇಷಣೆಗಳಿಂದ ತಿಳಿದು ಬಂದಿದೆ. ಈ ಚಿತ್ರಗಳನ್ನು ಮಾರ್ಚ್ ತಿಂಗಳಲ್ಲಿ ಆಯಾ ಸ್ಥಳಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುವ ಮೊದಲು ಮತ್ತು ನಂತರ ಸೆರೆಹಿಡಿಯಲಾಗಿದೆ.
'ಅರ್ಥ್ ಐ' ಎನ್ನವ ಚೀನಾ ಕಂಪನಿಯ ಈ ಉಪಗ್ರಹವನ್ನು ನಿರ್ಮಿಸಿ, ಉಡಾವಣೆ ಮಾಡಿದೆ. ಈ ಕಂಪನಿಯು 'ಇನ್-ಆರ್ಬಿಟ್ ಡೆಲಿವರಿ' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಚೀನಾದಲ್ಲಿ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಗಳು ಕಕ್ಷೆಯನ್ನು ತಲುಪಿದ ನಂತರ ಅದನ್ನು ವಿದೇಶಿ ಗ್ರಾಹಕರಿಗೆ ಹಸ್ತಾಂತರಿಸಲಾಗುತ್ತದೆ.
ನೆರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಚೀನಾ ನಿರ್ಮಿತ ಉಪಗ್ರಹವನ್ನು ಬಳಸಿರುವುದು ಅತ್ಯಂತ ಸೂಕ್ಷ್ಮ ವಿಷಯ. ಚೀನಾವು ಗಲ್ಫ್ ರಾಷ್ಟ್ರಗಳ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರ ಮಾತ್ರವಲ್ಲದೆ, ಅವರ ತೈಲದ ಪ್ರಮುಖ ಖರೀದಿದಾರನಾಗಿರುವುದರಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ದಾಖಲೆಗಳ ಪ್ರಕಾರ, ಈ ಉಪಗ್ರಹವು ಮಾರ್ಚ್ 13, 14 ಮತ್ತು 15ರಂದು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯು ನೆಲೆಯ ಚಿತ್ರಗಳನ್ನು ಸೆರೆಹಿಡಿದಿದೆ. ಜೋರ್ಡಾನ್‌ನ ಮುವಾಫಕ್ ಸಾಲ್ಟಿ ವಾಯು ನೆಲೆ, ಬಹರೇನ್‌ನ ಮನಾಮಾದಲ್ಲಿರುವ ಅಮೆರಿಕದ ಐದನೇ ಫ್ಲೀಟ್ ನೌಕಾ ನೆಲೆ ಮತ್ತು ಇರಾಕ್‌ನ ಅರ್ಬಿಲ್ ವಿಮಾನ ನಿಲ್ದಾಣಗಳ ಮೇಲೂ ಈ ಉಪಗ್ರಹವು ಕಣ್ಗಾವಲು ನಡೆಸಿತ್ತು.
ಕುವೈತ್‌ನ ಕ್ಯಾಂಪ್ ಬ್ಯೂಹ್ರಿಂಗ್ ಮತ್ತು ಅಲಿ ಅಲ್ ಸಾಲೆಮ್ ವಾಯು ನೆಲೆ, ಜಿಬೂಟಿಯ ಕ್ಯಾಂಪ್ ಲೆಮೋನಿಯರ್ ಅಮೆರಿಕ ಸೇನಾ ನೆಲೆ ಮತ್ತು ಒಮಾನ್‌ನ ದುಕ್ಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೂ ಈ ಉಪಗ್ರಹ ಕಣ್ಗಾವಲು ನಡೆಸಿದೆ. ಯುಎಇಯ ಖೋರ್ ಫಕ್ಕನ್ ಕಂಟೈನರ್ ಪೋರ್ಟ್ ಮತ್ತು ಬಹರೇನ್‌ನ ಅಲ್ಬಾ ಅಲ್ಯೂಮಿನಿಯಂ ಸ್ಮೆಲ್ಟರ್‌ನಂತಹ ನಾಗರಿಕ ಮೂಲಸೌಕರ್ಯಗಳ ಚಿತ್ರವನ್ನು ಈ ಉಪಗ್ರಹ ಸೆರೆಹಿಡಿದಿತ್ತು. ಚೀನಾ ನಿರ್ಮಿತ ಈ ಹೊಸ ಉಪಗ್ರಹವು ವಿಮಾನಗಳು, ವಾಹನಗಳನ್ನು ಸ್ಪಷ್ಟವಾಗಿ ಗುರುತಿಸಲು ಇರಾನ್‌ಗೆ ಸಹಾಯ ಮಾಡಿದೆ.

