ಕಾಸರಗೋಡು: ನುಳ್ಳಿಪ್ಪಾಡಿಯ ಕನ್ನಡ ಭವನದ ಅಭಿಮಾನಿಗಳ ಸವಿ ಸಂಭ್ರಮ ಕಾರ್ಯಕ್ರಮ ಬೇಕಲ್ ಇಂಟರ್‍ನ್ಯಾಷನಲ್ ಬೀಚ್‍ನಲ್ಲಿ ನಡೆಯಿತು. ಈ ಸಂದರ್ಭ ಕನ್ನಡ ಭವನ ಪ್ರದಾನ ಕಾರ್ಯದರ್ಶಿ ವಸಂತ್ ಕೆರೆಮನೆ-ದಿವ್ಯ ಶ್ರೀ ದಂಪತಿಗೆ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ ವತಿಯಿಂದ "ಕನ್ನಡ ಸೇವಾ ನಿರತರು "ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಸಂತ್ ಕೆರೆಮನೆ-ದಿವ್ಯ ಶ್ರೀ ದಂಪತಿಯ ವಿವಾಹ ವಾರ್ಷಿಕ ದಶಮಾನೋತ್ಸವ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು. ರಾಮರಾಜ ಕ್ಷತ್ರಿಯ ಕಾಸರಗೋಡು ಅಧ್ಯಕ್ಷರೂ, ನಾರಾಯಣ ಆಚಾರ್ಯ, ಸರಸ್ವತಿ, ತೃಷನ್, ಕಾಸಿಂ ಪಾಲಕುನ್ನು ಉಪಸ್ಥೀತರಿದ್ದರು. ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಮುಖ್ಯಸ್ಥೆಯಾದ ಸಂಧ್ಯಾರಾಣಿ ಟೀಚರ್ ವಸಂತ ಕೆರೆಮನೆ ದಂಪತಿಯನ್ನು ಹಾರಾರ್ಪಣೆ ಗೈದು, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕನ್ನಡ ಕಾಯಕದ ಜತೆಗೆ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯ ನಿರತರಾಗಿರುವ ವಸಂತ್ ಕೆರೆಮನೆ ದಂಪತಿಗಳಿಗೆ, ಈ ಪ್ರಶಸ್ತಿ ಹೆಚ್ಚಿನ ಸ್ಫೂರ್ತಿ ನೀಡಲಿ ಎಂದು ಹಾರೈಸಿದರು. ಸಂಧ್ಯಾ ರಾಣಿ ಸ್ವಾಗತಿಸಿದರು. ವಾಮನ್ ರಾವ್ ಬೇಕಲ್ ನಿರೂಪಿಸಿದರು. ಕನ್ನಡ ಭವನ ಉಪಾಧ್ಯಕ್ಷ ವಿದ್ಯಾನಂದ ಹೂಡೆ ವಂದಿಸಿದರು.



