ಕುಂಬಳೆ: ಮಂಜೇಶ್ವರ ಹಾಗೂ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರ ಶ್ರೀಅನಂತೇಶ್ವರ ದೇವಸ್ಥಾನ ಸನಿಹದ ನಿವಾಸಿ ಅಶೋಕ್ ಶೆಣೈ(46)ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಶೋಕ್ ಶೆಣೈ ಮಾ. 22ರಂದು ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಸಹೋದರ ಅಶ್ವಿನ್ ಕೆ. ಶೆಣೈ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕುಂಬಳೆ ಕೊಯಿಪ್ಪಾಡಿ ಶಾಂತಿಪಳ್ಳದಲ್ಲಿ ವಾಸಿಸುತ್ತಿರುವ, ಚಿಪ್ಪಾರು ಕುರುವೇರಿ ನಿವಾಸಿ ಈಶ್ವರ ಮೂಲ್ಯ(65)ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾ. 24ರಂದು ಈಶ್ವರ ಮೂಲ್ಯ ಮನೆಯಿಂದ ಹೊರಟವರು ವಾಪಸಾಗಿಲ್ಲ ಎಂದು ಪುತ್ರಿ ಅಕ್ಷತಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

