ಕುಂಬಳೆ: ವಾಗ್ವಾದ ನಡೆಯುತ್ತಿದ್ದ ವೇಳೆ ಅದರ ದೃಶವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ದ್ವೇಷದಿಂದ ತಂಡವೊಂದು ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಮೂವರ ವಿರುದ್ದ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕುಂಬಳೆ ಶ್ರೀ ನಿತ್ಯಾನಂದ ಆಶ್ರಮ ಬಳಿಯ ಅಂದುಪ್ಪ ಹೌಸ್‌ನ ಮುಹಮ್ಮದ್ ಹಿಲಾಲ್ ಕೆ.ಎ(19) ಈ ಬಗ್ಗೆ ದೂರು ನೀಡಿದ್ದು ಇದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ ಕುಂಬಳೆ ಪೇಟೆಯಲ್ಲಿ ದೂರದರ್ಶನ ಚ್ಯಾನೆಲ್‌ನ ಡಿಬೇಟ್ ಕಾರ್ಯಕ್ರಮ ನಡೆದ ಬಳಿಕ ಕೆಲವರ ಮಧ್ಯೆ ವಾಗ್ವಾದ ನಡೆಯಿ ತೆಂದೂ ಅದರ ದೃಶ್ಯವನ್ನು ತಾನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ದ್ವೇಷದಿಂದ ಕಂಡರೆ ಗುರುತುಹಚ್ಚಬಹು ದಾದ ಮೂವರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮುಹಮ್ಮದ್ ಹಿಲಾಲ್ ಆರೋಪಿಸಿದ್ದಾರೆ.


