ಕುಂಬಳೆ: ಶಿರಿಯ ಹೊಳೆಯಿಂದ ಸರಿಯಾದ ದಾಖಲು ಪತ್ರಗಳಿಲ್ಲದೆ ಸರಕಾರಿ ಮಾಲು ಆಗಿರುವ ಹೊಳೆಯ ಹೊಯ್ಗೆಯನ್ನು ಟಿಪ್ಪರ್ ಲಾರಿಯಲ್ಲಿ ಕದ್ದು ಸಾಗಿಸಿದ ಆರೋಪದಂತೆ, ಲಾರಿ ಚಾಲಕ ಸೇರಿದಂತೆ ಐದು ಮಂದಿಯ ವಿರುದ್ಧ ಕುಂಬಳೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಯ್ಗೆ ಹೇರಿದ ಲಾರಿಯನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದರೆಂದೂ, ಸರ್ಕಾರಿ ಮಾಲು ಆಗಿರುವ ಹೊಳೆ ಹೊಯ್ಗೆ ಕದ್ದು ಸಾಗಿಸಿದ ಆರೋಪದಂತೆ ಇವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಹೇರೂರು ಗ್ರಾಮದ ಪಯ್ಯಾರ್ ಕಡವಿನಲ್ಲಿ ಈ ಪೋಲೀಸ್ ಕಾರ್ಯಾಚರಣೆ ನಡೆದಿದೆ.

