HEALTH TIPS

"ಮೋದಿ ಪ್ರಧಾನಿಯಾದ ದಿನ ಡಾ.ಮನಮೋಹನ್ ಸಿಂಗ್ ಕಳುಹಿಸಿದ ಫೈಲ್ ನೋಡಿ ಬೆಚ್ಚಿಬಿದ್ದಿದ್ದೇಕೆ?": ಮಧು ಕೀಶ್ವರ್ ಮತ್ತೆ ವಾಗ್ದಾಳಿ

ನವದೆಹಲಿ: ಸಾಮಾಜಿಕ-ರಾಜಕೀಯ ವಿಶ್ಲೇಷಕಿ, ಹಿಂದುತ್ವವಾದಿ ಲೇಖಕಿ ಮಧು ಕೀಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ‌ʼಎಕ್ಸ್ʼ ಪೋಸ್ಟ್ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಪೋಸ್ಟ್ ನಲ್ಲಿ ಅವರು ಮೋದಿ ವಿರುದ್ಧ ರಾಜಿ ಮಾಡಿಕೊಂಡಿದ್ದಾರೆ, ಪ್ರಭಾವಕ್ಕೊಳಗಾಗಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

"ಮೋದಿಯವರು ರಾಜಿ ಮಾಡಿಕೊಂಡಿದ್ದಾರೆ. ಅದರಿಂದ ಅವರು ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಪ್ರಧಾನಿ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುವ ವ್ಯಕ್ತಿಯಿಂದ ಈ ಬಹಿರಂಗ ಮಾಹಿತಿ ಲಭಿಸಿದೆ. ಗೂಗಲ್ ಹುಡುಕಾಟ ಮಾಡಬಲ್ಲ ಯಾರಾದರೂ ಮಾಹಿತಿಗಳನ್ನು ಪರಿಶೀಲಿಸಬಹುದು," ಎಂದು ಕೀಶ್ವರ್ ಹೇಳಿದ್ದಾರೆ.

2014 ರಲ್ಲಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕದ ಘಟನೆಯನ್ನು ಉಲ್ಲೇಖಿಸಿ, ಅಂದಿನ ಕ್ಯಾಬಿನೆಟ್ ಕಾರ್ಯದರ್ಶಿ ಅಜಿತ್ ಕುಮಾರ್ ಸೇಠ್ ಮತ್ತು ಮೋದಿ ನಡುವೆ ನಡೆದಿದೆ ಎನ್ನಲಾದ ಘಟನೆಯೊಂದನ್ನು ಅವರು ವಿವರಿಸಿದ್ದಾರೆ. "ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ, ಅಜಿತ್ ಕುಮಾರ್ ಸೇಠ್ ದೊಡ್ಡ ದಪ್ಪ ಫೈಲ್ ಹಿಡಿದು ಭೇಟಿ ನೀಡಿದರು," ಎಂದು ಅವರು ಹೇಳಿದ್ದಾರೆ.

ಸೇಠ್ ಅವರು "ಡಾ. ಸಾಹೇಬ್ ಈ ಫೈಲ್ ಅನ್ನು ಎಚ್ಚರಿಕೆಯಿಂದ ನೋಡುವಂತೆ ಹೇಳಿದ್ದಾರೆ", ಎಂದರು.

"ಇದು ನಿಮಗೆ ಹೇಗೆ ತಲುಪಿತು?"ಎಂದು ಮೋದಿ ಆಶ್ಚರ್ಯದಿಂದ ಕೇಳಿದರು. ಅದಕ್ಕೆ ಸೇಠ್ "ಪಿಎಂಒದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ, ಎಲ್ಲಾ ಪ್ರಮುಖ ಫೈಲ್‌ ಗಳು ನನ್ನ ಬಳಿಗೆ ಬರುತ್ತವೆ", ಎಂದು ಪ್ರತಿಕ್ರಿಯಿಸಿದರು.

ಫೈಲ್‌ ನಲ್ಲಿದ್ದ ವಿಷಯಗಳನ್ನು ನೋಡಿ ಮೋದಿ "ಮಸುಕಾದರು" ಹಾಗೂ "ನಡುಗುತ್ತಿರುವಂತೆ ಕಂಡರು." ಬಳಿಕ ಅವರು ಫೈಲ್ ಅನ್ನು ಹಿಂತಿರುಗಿಸಿದರು ಎಂದು ಮಧು ಕೀಶ್ವರ್ ಹೇಳಿದ್ದಾರೆ.

ಈ ಘಟನೆಯ ನಂತರ ಸೇಠ್ ಅವರಿಗೆ ವಿಸ್ತರಣೆ ನೀಡಲಾಗಿದ್ದು, ಅವರನ್ನು ಮೋದಿ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಮುಂದುವರಿಸಲಾಯಿತು ಎಂದು ಕೀಶ್ವರ್ ಅವರು ತಿಳಿಸಿದ್ದಾರೆ. "2014ರಲ್ಲಿ ಮೋದಿ ಅವರು ಸೇಠ್ ಅವರಿಗೆ ಮತ್ತಷ್ಟು ವಿಸ್ತರಣೆ ನೀಡಿದರು. ಅವರು ಜೂನ್ 2015ರವರೆಗೆ ಸೇವೆ ಸಲ್ಲಿಸಿದರು," ಎಂದು ಅವರು ಉಲ್ಲೇಖಿಸಿದ್ದಾರೆ.

"ಇದರರ್ಥ, ಮೋದಿ ಪಿಎಂಒದಲ್ಲಿನ ಕೆಲಸಗಳು ಮತ್ತು ನಿರ್ಧಾರಗಳು ಡಾ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಅವರಿಗೆ ತಿಳಿದಿತ್ತು," ಎಂದು ಕೀಶ್ವರ್ ಆರೋಪಿಸಿದ್ದಾರೆ.

ನಿವೃತ್ತಿಯ ನಂತರವೂ ಸೇಠ್ ಅವರಿಗೆ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (PESB) ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

"ಜಗತ್ತಿನಲ್ಲಿ ಯಾವ ಪ್ರಧಾನಿಯೂ ತಮ್ಮ ರಾಜಕೀಯ ವಿರೋಧಿಗಳ ವಿಶ್ವಾಸಾರ್ಹ ಅಧಿಕಾರಿಯನ್ನು ತಮ್ಮದೇ ಪಿಎಂಒ ಮುಖ್ಯಸ್ಥನನ್ನಾಗಿ ನೇಮಿಸಿದ ಉದಾಹರಣೆ ಇದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

'ಈ 56 ಇಂಚಿನ ಮಹಾಮಾನವ್' ಅವರು ತಮ್ಮ ವಿರುದ್ಧ ವಿದೇಶಿ ಖಾತೆಗಳ ಆರೋಪ ಮಾಡಿದ ಸೋನಿಯಾ, ರಾಬರ್ಟ್ ವಾದ್ರಾ, ಚಿದಂಬರಂ ಮತ್ತು ಇತರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆ ಧೈರ್ಯವನ್ನೂ ಮಾಡಲಿಲ್ಲ. ಇದು ರಾಜಿ ಮಾಡಿಕೊಂಡಿರುವುದಕ್ಕೆ ಸೂಚನೆಯೇ ಎಂದು ಅವರು ಹೇಳಿದ್ದಾರೆ.

"ಭಾರತ ಮತ್ತು ವಿದೇಶಗಳಲ್ಲಿ ಮಹಾಮಾನವ್ ಅವರ ಈ 'ಕರಾಳ' ಕಾರ್ಯಗಳ ಮಾಹಿತಿ ಸೋನಿಯಾ ಅವರಲ್ಲದೆ ಹಲವರಿಗಿದೆ. ಅದಕ್ಕಾಗಿಯೇ ಮೋದಿ ಭಾರತದ ಅತ್ಯಂತ ಅಸುರಕ್ಷಿತ ರಾಜಕಾರಣಿಗಳಲ್ಲಿ ಒಬ್ಬರು," ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

"ಇತರ ರಾಜಕಾರಣಿಗಳಂತೆ ಅಲ್ಲ, ಈ '56 ಇಂಚಿನ' ನಾಯಕ ತಾನೇ ತುಂಬಾ ಪವಿತ್ರ ವ್ಯಕ್ತಿ ಎಂದು ಜನರಿಗೆ ತೋರಿಸಲು ಹೆಚ್ಚು ಪ್ರಯತ್ನಿಸುತ್ತಾರೆ. ಅದರಿಂದ ಅವರು ಭಾಷಣ ಮಾಡುವಾಗ ತುಂಬಾ ಜೋರಾಗಿ, ಭಾವೋದ್ರಿಕ್ತವಾಗಿ ಮಾತನಾಡುತ್ತಾರೆ," ಎಂದು ಅವರು ಹೇಳಿದ್ದಾರೆ.

2014ರ ಚುನಾವಣಾ ಪ್ರಚಾರದ ಸಂದರ್ಭವನ್ನು ನೆನೆದು, ತಮ್ಮ ಮತ್ತು ಮೋದಿ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭ ಮೋದಿಯವರು 56 ಇಂಚಿನ ಎದೆ ಎಂದು ತಮ್ಮ ಚುನಾವಣಾ ಭಾಷಣಗಳಲ್ಲಿ ಹೇಳಿಕೊಂಡಿದ್ದರು. "ನರೇಂದ್ರ ಭಾಯಿ, '56 ಇಂಚು' ಎಂಬ ಮಾತು ಬಳಸಬೇಡಿ. ಇದು ಅಸಭ್ಯವಾಗಿ ಕಾಣುತ್ತದೆ", ಎಂದು ಮೋದಿಯವರಿಗೆ ತಾನು ಹೇಳಿದ್ದಾಗಿ ಮಧು ಕೀಶ್ವರ್ ಹೇಳಿದ್ದಾರೆ. ಆಗ ಪ್ರತಿಕ್ರಿಯಿಸಿದ ಮೋದಿ, "ಸಾಮಾನ್ಯ ಜನರು ಇದನ್ನು ಇಷ್ಟಪಡುತ್ತಾರೆ, ಮಧು ಜಿ. ನಿಮ್ಮಂತಹ ಬುದ್ಧಿಜೀವಿಗಳು ಮಾತ್ರ ಅತ್ಯಾಧುನಿಕ ಭಾಷೆ ಬಯಸುತ್ತಾರೆ", ಮೋದಿ ಹೇಳಿದ್ದಾಗಿ ಮಧು ಕೀಶ್ವರ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

"ಮೋದಿ ಜಿ ಅವರು ಅಸಭ್ಯ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ನೀವು ನಿಮ್ಮ ಸುಳ್ಳು ಆರೋಪಗಳಿಂದ ನನ್ನನ್ನು ಕೆರಳಿಸಿದಷ್ಟು, ನಿಮ್ಮ 56 ಇಂಚಿನ ಹೃದಯ ಸಾಮ್ರಾಟ್ ಬಗ್ಗೆ ಇನ್ನಷ್ಟು ವಿಷಯಗಳು ಹೊರಬರುತ್ತವೆ," ಎಂದು ಕೀಶ್ವರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries