HEALTH TIPS

ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ-ಮಧ್ಯವಯಸ್ಕನ ವಿರುದ್ಧ ಪೆÇೀಕ್ಸೋ ಕೇಸು

ಕಾಸರಗೋಡು: ಹತ್ತು ಹಾಗೂ 15 ವರ್ಷ ಪ್ರಾಯದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 55ರ ಹರೆಯದ ವ್ಯಕ್ತಿ ವಿರುದ್ಧ ಮೇಲ್ಪರಂಬ ಪೆÇಲೀಸರು ಪೆÇೀಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. 

ಕಿರುಕುಳಕ್ಕೊಳಗಾದ ಬಾಲಕರು ಕಾಸರಗೋಡು ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾಗಿದ್ದು, ಬಾಲಕರ ಸಂಬಂಧಿಕನಾದ 55ರ ಹರೆಯದ ವ್ಯಕ್ತಿಯ ಮನೆಗೆ ಹೋದ ಸಂದರ್ಭ ಹಲವು ಬಾರಿ ಕಿರುಕುಳ ನೀಡಿದ್ದರೂ,  ಭಯದಿಂದ ಕಿರುಕುಳ ವಿಷಯ ಬಹಿರಂಗಪಡಿಸಿರಲಿಲ್ಲ.  ಇತ್ತೀಚೆಗೆ ಆರೋಪಿ ಮತ್ತೆ ಕಿರುಕುಳಕ್ಕೆ ಯತ್ನಿಸಿದ್ದು, ಇದನ್ನು ಬಾಲಕರು ವಿರೋಧಿಸಿದಾಗ ವ್ಯಕ್ತಿ ಬಾಲಕರ ಮೇಲೆ ಹಲ್ಲೆಗೈದಿದ್ದನು. ಹಲ್ಲೆಗೆ ಸಂಬಂಧಿಸಿ ಪೆÇಲೀಸರು ವ್ಯಕ್ತಿ ವಿರುದ್ಧ ಕೇಸು ದಾಖಲಿಸಿಕೊಂಡು, ಆತನನ್ನು ವಿಚಾರಣೆಗೊಳಪಡಿಸಿದಾಗ ಕಿರುಕುಳ ಮಾಹಿತಿ ಬೆಳಕಿಗೆ ಬಂದಿತ್ತು.  ಈ ಹಿನ್ನೆಲೆಯಲ್ಲಿ ಪೆÇೀಕ್ಸೋ ಅನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries