HEALTH TIPS

ವಿಶ್ವಸಂಸ್ಥೆಯ CESCR ಸಮಿತಿಗೆ ಭಾರತದ ಪ್ರೀತಿ ಸರಣ್ ಮರು ಆಯ್ಕೆ

 ನ್ಯೂಯಾರ್ಕ್: ಭಾರತದ ವಿದೇಶಾಂಗ ಇಲಾಖೆಯ ಮಾಜಿ ಅಧಿಕಾರಿ, ಹಿರಿಯ ರಾಜತಾಂತ್ರಿಕರೂ ಆಗಿರುವ ಪ್ರೀತಿ ಸರಣ್ ಅವರನ್ನು ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ ಉಪ ಮುಖ್ಯಸ್ಥರಾಗಿ (ಸಿಇಎಸ್‌ಸಿಆರ್) ಮರು ಆಯ್ಕೆ ಮಾಡಲಾಗಿದೆ.


ಅಂತರರಾಷ್ಟ್ರೀಯ ಸಹಕಾರ, ಅಭಿವೃದ್ಧಿಯಲ್ಲಿ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ವಿಶ್ವಸಂಸ್ಥೆಯ ಸಿಇಎಸ್‌ಸಿಆರ್ ಪ್ರಮುಖ ಸಮಿತಿಯಾಗಿದೆ.

ಭಾರತದ ವಿದೇಶಾಂಗ ಇಲಾಖೆಯಲ್ಲಿ 36 ವರ್ಷ ಸೇವೆ ಸಲ್ಲಿಸಿದ್ದ ಪ್ರೀತಿ ಅವರು ಏಷ್ಯಾ, ಯುರೋಪ್, ಆಫ್ರಿಕಾದ ಹಲವು ದೇಶಗಳಲ್ಲಿ ಯಶಸ್ವಿ ರಾಜತಾಂತ್ರಿಕರಾಗಿ ಕಾರ್ಯನಿರ್ವಹಿಸಿದ್ದರು.

ಬಳಿಕ ಪ್ರೀತಿ ಸರಣ್ ಅವರು 2018 ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದಲ್ಲಿ ಭಾರತದ ಪ್ರತಿನಿಧಿಯಾಗಿದ್ದರು. 2023 ರಲ್ಲಿ ಸಿಇಎಸ್‌ಸಿಆರ್‌ ಸೇರಿದ್ದರು. 2027 ರಿಂದ 2029ರವರೆಗೆ ಅವರ ಅಧಿಕಾರದ ಅವಧಿ ವಿಸ್ತರಣೆಯಾಗಿದೆ ಎಂದು ಸಿಇಎಸ್‌ಸಿಆರ್ ಪ್ರಕಟಣೆ ತಿಳಿಸಿದೆ.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಹೇಗೆ ಜಾರಿಗೊಳಿಸುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯುತ ಸಂಸ್ಥೆಯಾಗಿ ಸಿಇಎಸ್‌ಸಿಆರ್ ಕಾರ್ಯನಿರ್ವಹಿಸುತ್ತದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries