HEALTH TIPS

ಕದನ ವಿರಾಮ: ಪಾಕ್‌ಗೆ ಸಂಧಾನಕಾರರು ಹೋಗಿಲ್ಲ ಎಂದ ಇರಾನ್

 ಟೆಹರಾನ್: ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ಅವರಂತಹ ಹಿರಿಯ ಅಧಿಕಾರಿಗಳು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆಗಳು ದೃಢವಾಗಿ ತಿರಸ್ಕರಿಸಿವೆ ಎಂದು ಪ್ರೆಸ್ ಟಿವಿ ಶುಕ್ರವಾರ ವರದಿ ಮಾಡಿದೆ. 


ವಿಶ್ವಾಸಾರ್ಹ ಮೂಲವನ್ನು ಉಲ್ಲೇಖಿಸಿ ತಸ್ನಿಮ್ ಸುದ್ದಿ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಅರಾಘ್ಚಿ ಅಥವಾ ಸ್ಪೀಕರ್ ಖಾಲೀಬಾಫ್ ಇಬ್ಬರೂ ದೇಶವನ್ನು ತೊರೆದಿಲ್ಲ, ಪ್ರಾದೇಶಿಕ ಬೆಳವಣಿಗೆಗಳ ನಡುವೆ ಅವರು ತಮ್ಮ ರಾಷ್ಟ್ರೀಯ ಕರ್ತವ್ಯಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾರೆ ಎಂದು ಪ್ರೆಸ್ ಟಿವಿ ಹೇಳಿದೆ.

ಅಮೆರಿಕದೊಂದಿಗೆ ಮಾತುಕತೆಗಾಗಿ ಇರಾನ್‌ನ ಅಧಿಕಾರಿಗಳು ಇಸ್ಲಾಮಾಬಾದ್‌ಗೆ ತೆರಳಿದ್ದಾರೆ ಎಂಬ ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯನ್ನು ತಸ್ನಿಮ್ ನ್ಯೂಸ್ ಅನ್ನು ಉಲ್ಲೇಖಿಸಿ ಇರಾನಿನ ಪ್ರೆಸ್ ಟಿವಿ ತಿರಸ್ಕರಿಸಿದೆ.

ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ನಿಲ್ಲುವವರೆಗೆ ಮತ್ತು ದೇಶದಲ್ಲಿ ಕದನ ವಿರಾಮಕ್ಕೆ ಅಮೆರಿಕ ತನ್ನ ಬದ್ಧತೆಯನ್ನು ಪೂರೈಸುವವರೆಗೆ ಮಾತುಕತೆ ಸ್ಥಗಿತಗೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ತಸ್ಲೀಮ್ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ಪ್ರೆಸ್ ಟಿವಿ ವರದಿ ಮಾಡಿದೆ.

ಇರಾನ್‌ನ ಸಂಧಾನಕಾರರ ತಂಡ ಪಾಕಿಸ್ತಾನಕ್ಕೆ ತೆರಳಿದೆ ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ಮಾಡಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಅದು ಹೇಳಿದೆ.

ಫೆಬ್ರುವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇರಾನ್ ನಡೆಸಿದ ಜಂಟಿ ದಾಳಿಯಲ್ಲಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿ ಹತ್ಯೆಯಾಗಿದ್ದರು. ಇದಾದ ಬಳಿಕ, ಇರಾನ್ ತಿರುಗಿಬಿದ್ದು, ಪ್ರತಿ ದಾಳಿ ನಡೆಸಿತ್ತು. ಹೊರ್ಮುಜ್ ಜಲಸಂಧಿ ಮುಚ್ಚುವ ಮೂಲಕ ತೈಲ ಬಿಕ್ಕಟ್ಟು ಸೃಷ್ಟಿಸಿತ್ತು. ಮಹತ್ವದ ಬೆಳವಣಿಗೆಯಲ್ಲಿ ಏಪ್ರಿಲ್ 7ರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮ ಘೋಷಿಸಿದ್ದರು. ಉಭಯ ದೇಶಗಳು ಪರಸ್ಪರ ದಾಳಿ ಬದಿಗಿಟ್ಟು ಮಾತುಕತೆಗೆ ಮುಂದಾಗಿದ್ದವು. ಆದರೆ, ಇಸ್ರೇಲ್, ಲೆಬನಾನ್‌ಗೆ ದಾಳಿ ಮುಂದುವರಿಸಿದ್ದು, ಕದನ ವಿರಾಮದ ಮಾತುಕತೆ ಮೇಲೆ ಕರಿನೆರಳು ಬಿದ್ದಿದೆ ಎಂದು ವರದಿ ತಿಳಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries