ತೆಹ್ರಾನ್: ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Iಖಉಅ) ಗುಪ್ತಚರ ವಿಭಾಗದ ಮುಖ್ಯಸ್ಥ ಮಜೀದ್ ಖಾದಿಮಿ ಸಾವನ್ನಪ್ಪಿದ್ದಾರೆ ಎಂದು Iಖಉಅ ತಿಳಿಸಿದೆ.
Iಖಉಅ ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್ ನ 'ಪ್ರೆಸ್ ಟಿವಿ' ವರದಿ ಮಾಡಿದೆ.
ಖಾಡೆಮಿ ಸುಮಾರು ಐದು ವರ್ಷಗಳಿಂದ ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗಿದೆ.
ವಿದೇಶಿ ಶಕ್ತಿಗಳ ಒಳನುಸುಳುವಿಕೆಯನ್ನು ತಡೆಯುವ ಕಾರ್ಯಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು ಎಂದು Iಖಉಅ ತಿಳಿಸಿದೆ.
ದಾಳಿಯ ಸ್ಥಳ ಮತ್ತು ಇತರ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

