HEALTH TIPS

Islamabad talks | ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ: ಇರಾನ್ ಸ್ಪಷ್ಟನೆ

ಟೆಹರಾನ್ : ನಾಳೆ ನಡೆಯಲಿದೆ ಎಂದು ಅಮೆರಿಕ ಹೇಳಿರುವ ಎರಡನೇ ಸುತ್ತಿನ ಶಾಂತಿ ಮಾತುಕತೆ ಕುರಿತು ಇರಾನ್ ಗೊಂದಲ ನಿವಾರಣೆ ಮಾಡಿದ್ದು, ಆ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ಅವಾಸ್ತವಿಕ ನಿರೀಕ್ಷೆಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಇರಾನ್ ಆರೋಪಿಸಿದೆ ಎಂದು Aljazeera ವರದಿ ಮಾಡಿದೆ.


ಇರಾನಿನ ಅಧಿಕೃತ ಸುದ್ದಿ ಸಂಸ್ಥೆ IRNAದ ಪ್ರಕಾರ, ಅಮೆರಿಕ ತನ್ನ ನಿಲುವನ್ನು ಪದೇಪದೇ ಬದಲಾಯಿಸುತ್ತಿದ್ದು, ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದೆ. ಜೊತೆಗೆ ನೌಕಾ ದಿಗ್ಬಂಧನವನ್ನು ಮುಂದುವರಿಸುತ್ತಿರುವುದು ಕದನ ವಿರಾಮದ ಉಲ್ಲಂಘನೆ ಎಂದು ಇರಾನ್ ಟೀಕಿಸಿದೆ.

ಇಸ್ಲಾಮಾಬಾದ್‌ ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನೂ Iಖಓಂ ತಳ್ಳಿಹಾಕಿದೆ. ಅಮೆರಿಕ ನೀಡಿರುವ ಹೇಳಿಕೆಗಳು ಮಾಧ್ಯಮಗಳ ಮೂಲಕ ಒತ್ತಡ ಹೇರುವ ಪ್ರಯತ್ನವಾಗಿದ್ದು, ಇರಾನ್ ವಿರುದ್ಧ ಆರೋಪಗಳನ್ನು ಹರಡುವ ಯತ್ನವಾಗಿದೆ ಎಂದು ಆರೋಪಿಸಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries