HEALTH TIPS

ಕಚ್ಚಾ ತೈಲ ಮತ್ತು LNG ಸರಬರಾಜು ಹೆಚ್ಚಿಸಲು ನಾವು ಸಿದ್ಧ: ಭಾರತಕ್ಕೆ ರಷ್ಯಾ ಭರವಸೆ

 ನವದೆಹಲಿ: ಜಾಗತಿಕ ಭೌಗೋಳಿಕ-ಆರ್ಥಿಕ ಪರಿಸ್ಥಿತಿಗಳ ಬದಲಾವಣೆಯ ನಡುವೆಯೂ ದ್ವಿಪಕ್ಷೀಯ ವಾಣಿಜ್ಯವನ್ನು ಸ್ಥಿರಗೊಳಿಸುವುದು ಹಾಗೂ ಆರ್ಥಿಕ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತ ಮತ್ತು ರಷ್ಯಾ ಸರ್ಕಾರಗಳು ಮತ್ತೆ ಒತ್ತು ನೀಡಿವೆ. ಈ ಚರ್ಚೆಯಲ್ಲಿ ಇಂಧನ ಭದ್ರತೆ, ಸರಕು ಸಾಗಣೆ ವ್ಯವಸ್ಥೆ ಮತ್ತು ಹೂಡಿಕೆಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. 


ಈ ವಿಷಯಗಳು ದೆಹಲಿಯಲ್ಲಿ ನಡೆದ ಅಂತರ-ಸರ್ಕಾರಿ ಆಯೋಗದ ಸಭೆಯಲ್ಲಿ ಚರ್ಚಿಸಲ್ಪಟ್ಟವು. ಈ ಸಭೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾದ ಮೊದಲ ಉಪ ಪ್ರಧಾನಿ ಡೆನಿಸ್ ಮಂಟುರೋವ್ ಸಹ-ಅಧ್ಯಕ್ಷತೆ ವಹಿಸಿದ್ದರು.

ವಾಣಿಜ್ಯ, ಆರ್ಥಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ಮೇಲ್ವಿಚಾರಣೆ ಮಾಡುವ ಪ್ರಮುಖ ಸಚಿವ ಮಟ್ಟದ ವ್ಯವಸ್ಥೆಯಾಗಿರುವ ಈ ಆಯೋಗವು ಪರಸ್ಪರ ವಹಿವಾಟುಗಳು ಮತ್ತು ಸರಬರಾಜು ಸರಪಳಿಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಚರ್ಚಿಸಿತು. ಎರಡೂ ದೇಶಗಳು ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವುದು ಮತ್ತು ಸಂಯುಕ್ತ ಹೂಡಿಕೆ ಹಾಗೂ ಯೋಜನೆಗಳನ್ನು ವೇಗಗೊಳಿಸುವ ಅಗತ್ಯವನ್ನೂ ಸಾರಿವೆ.

ಅಂತರ-ಸರ್ಕಾರಿ ಆಯೋಗದ ಸಭೆಯಲ್ಲಿ ಏನು ನಡೆಯಿತು?

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯ ಪ್ರಕಾರ, ವಾಣಿಜ್ಯ, ಕೈಗಾರಿಕೆ, ಇಂಧನ, ರಸಗೊಬ್ಬರ, ಸಂಪರ್ಕ ಮತ್ತು ಚಲನವಲನ ಸೇರಿದಂತೆ ತಂತ್ರಜ್ಞಾನ, ಹೊಸತನ ಮತ್ತು ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಅಸ್ಥಿರತೆಯ ಹಿನ್ನೆಲೆಯಲ್ಲಿಯೇ ಈ ಮಾತುಕತೆಗಳು ನಡೆದವು. ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಐಓಉ) ಸರಬರಾಜನ್ನು ಹೆಚ್ಚಿಸಲು ರಷ್ಯಾ ಸಿದ್ಧವಿದೆ ಎಂದು ಸೂಚಿಸಿತು.

ರಷ್ಯಾದ ಕಂಪನಿಗಳಿಗೆ ಭಾರತೀಯ ಮಾರುಕಟ್ಟೆಗೆ ತೈಲ ಮತ್ತು ಎಲ್ ಎನ್ ಜಿ ಸರಬರಾಜನ್ನು ನಿರಂತರವಾಗಿ ಹೆಚ್ಚಿಸುವ ಸಾಮರ್ಥ್ಯವಿದೆ ಎಂದು ರಷ್ಯಾ ರಾಯಭಾರ ಕಚೇರಿ ಹೇಳಿದೆ.

ಹಾರ್ಮುಜ್ ಜಲಸಂಧಿ ಕುರಿತು ಬ್ರಿಟನ್ ನೇತೃತ್ವದಲ್ಲಿ ಮಾತುಕತೆ; ಭಾರತ ಭಾಗಿ: ತೈಲ ಬಿಕ್ಕಟ್ಟಿಗೆ ಬ್ರೇಕ್?

ಇಂಧನ ಸಹಕಾರವು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರವಾಗಿಯೇ ಉಳಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಷ್ಯಾ ರಸಗೊಬ್ಬರ ರಫ್ತುಗಳಲ್ಲಿ ಸಾಧನೆಗಳನ್ನು ಉಲ್ಲೇಖಿಸಿದ್ದು, 2025ರ ಅಂತ್ಯದ ವೇಳೆಗೆ ಭಾರತಕ್ಕೆ ಖನಿಜ ರಸಗೊಬ್ಬರಗಳ ಸರಬರಾಜು 40 ಶೇಕಡಾ ಹೆಚ್ಚಾಗಿದೆ ಎಂದು ಮಂಟುರೋವ್ ತಿಳಿಸಿದ್ದಾರೆ. ಭಾರತ ಕೃಷಿ ಅಗತ್ಯಗಳನ್ನು ಪೂರೈಸಲು ಮುಂದುವರಿಯುವ ಸಿದ್ಧತೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ನಾಗರಿಕ ಅಣುಶಕ್ತಿ ಸಹಕಾರವೂ ಪ್ರಮುಖವಾಗಿ ಚರ್ಚಿಸಲ್ಪಟ್ಟಿದ್ದು, ಕುಡಂಕುಳಂ ಅಣುಶಕ್ತಿ ಯೋಜನೆಯಲ್ಲಿ ಹೆಚ್ಚುವರಿ ವಿದ್ಯುತ್ ಘಟಕಗಳ ಪ್ರಗತಿಯನ್ನು ಎರಡೂ ದೇಶಗಳು ಪರಿಶೀಲಿಸಿವೆ. ಒಪ್ಪಿಕೊಂಡ ವೇಳಾಪಟ್ಟಿಯಂತೆ ವಿದ್ಯುತ್ ಘಟಕಗಳ ನಿರ್ಮಾಣ ಯೋಜನೆ ಜಾರಿಯಲ್ಲಿದೆ ಎಂದು ರಷ್ಯಾ ಹೇಳಿಕೆ ತಿಳಿಸಿದೆ.

ವಿದೇಶಾಂಗ ಸಚಿವಾಲಯವು ಕಳೆದ ಡಿಸೆಂಬರ್‌ನಲ್ಲಿ ನಡೆದ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪ್ರಗತಿಯನ್ನು ಪರಿಶೀಲಿಸಿದ್ದು, ಪಶ್ಚಿಮ ಏಷ್ಯಾದ ಸಂಘರ್ಷ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು ಎಂದು ತಿಳಿಸಿದೆ.

ಮಂಟುರೋವ್ ಅವರ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೂ ಭೇಟಿ ಮಾಡಿದರು. ದೋವಲ್ ಅವರೊಂದಿಗೆ ನಡೆದ ಚರ್ಚೆಯಲ್ಲಿ ರಕ್ಷಣಾ ಸಹಕಾರ, ಪ್ರಾದೇಶಿಕ ಭದ್ರತೆ ಮತ್ತು ಪಶ್ಚಿಮ ಏಷ್ಯಾದ ಯುದ್ಧ ಕುರಿತು ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಭೇಟಿ ಕೆಲ ದಿನಗಳ ಹಿಂದಷ್ಟೇ ಭಾರತವು ಎಸ್-400 ಕ್ಷಿಪಣಿ ವ್ಯವಸ್ಥೆಯ ಇನ್ನೂ ಐದು ಘಟಕಗಳನ್ನು ಖರೀದಿಸಲು ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಇದು ಎರಡು ದೇಶಗಳ ನಡುವೆ ನಿರಂತರ ರಕ್ಷಣಾ ಸಹಕಾರವನ್ನು ತೋರಿಸುತ್ತದೆ.

ಮೂಲಗಳ ಪ್ರಕಾರ, ಈ ಮಾತುಕತೆಗಳು ಆರ್ಥಿಕ ಸ್ಥಿರತೆಯನ್ನು ಬಲಪಡಿಸುವುದು, ಇಂಧನ ಸರಬರಾಜನ್ನು ಭದ್ರಪಡಿಸುವುದು ಮತ್ತು ಸಾಂಪ್ರದಾಯಿಕ ಹಾಗೂ ಹೊಸ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮೂಲಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಉದ್ದೇಶವನ್ನು ಸೂಚಿಸುತ್ತವೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries