HEALTH TIPS

ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲು: NDA ನಡೆಗೆ 'ಇಂಡಿಯಾ' ಬೇಲಿ

 ನವದೆಹಲಿ: ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಏರಿಸುವ ಹಾಗೂ 2029ರ ಚುನಾವಣೆಯಿಂದ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಶುಕ್ರವಾರ ಸೋಲಾಗಿದೆ. ಇದರಿಂದ, ಐದು ರಾಜ್ಯಗಳ ಚುನಾವಣೆಯ ನಡುವಿನಲ್ಲೇ ಮಸೂದೆಗೆ ಅಂಗೀಕಾರ ಪಡೆಯಲು ಶತಪ್ರಯತ್ನ ನಡೆಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿದೆ.


ಎರಡು ದಿನಗಳಲ್ಲಿ ಸುಮಾರು 23 ಗಂಟೆಗಳ ಚರ್ಚೆ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆ ಕುರಿತ ಚರ್ಚೆಯಲ್ಲಿ 56 ಮಹಿಳಾ ಸಂಸದರು ಸೇರಿದಂತೆ 123 ಸದಸ್ಯರು ಭಾಗಿಯಾದರು. ಎನ್‌ಡಿಎ ಮೈತ್ರಿಕೂಟವು ವೈಎಸ್‌ಆರ್‌ ಕಾಂಗ್ರೆಸ್‌ನ ನಾಲ್ವರು ಸಂಸದರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ, ಮಸೂದೆ ಅಂಗೀಕಾರಕ್ಕೆ ಈ ಬೆಂಬಲ ಸಾಕಾಗಲಿಲ್ಲ. ಟಿಎಂಸಿಯ ಏಳು ಸಂಸದರು ಸೇರಿದಂತೆ ವಿಪಕ್ಷ ಮೈತ್ರಿಕೂಟದ ಕೆಲವು ಸಂಸದರು ಗೈರಾದರು.

2021ರಲ್ಲಿ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಬಿಜೆಪಿ ಸರ್ಕಾರ ರದ್ದುಗೊಳಿಸಿತ್ತು. ದಣಿವರಿಯದ ರೈತರ ಸಂಘಟಿತ ಹೋರಾಟಕ್ಕೆ ಪ್ರಧಾನಿ ಮೋದಿ ಮಣಿದಿದ್ದರು. ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಅದಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಸೋಲು ಮೋದಿ ಸರ್ಕಾರಕ್ಕೆ ಎರಡನೇ ಪ್ರಮುಖ ಶಾಸಕಾಂಗ ಹಿನ್ನಡೆಯಾಗಿದೆ. ಮೋದಿ ಆಡಳಿತದ ಅವಧಿಯಲ್ಲಿ ಸಂಸತ್ತಿನಲ್ಲಿ ಮಸೂದೆಗೆ ಸೋಲು ಆಗಿದ್ದು ಇದೇ ಮೊದಲು.

ಸಂವಿಧಾನ (131 ನೇ ತಿದ್ದುಪಡಿ) ಮಸೂದೆಯ ಪ್ರಕಾರ, 2011ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ನಡೆಸಲಾಗುತ್ತದೆ. 2029ರ ಲೋಕಸಭಾ ಚುನಾವಣೆಗೆ ಮೊದಲು ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಲೋಕಸಭಾ ಸ್ಥಾನಗಳನ್ನು 543 ರಿಂದ 850ಕ್ಕೆ ಏರಿಸಲಾಗುತ್ತದೆ ಎಂದು ವಿವರಿಸಲಾಗಿತ್ತು.

ಸಂವಿಧಾನ ತಿದ್ದುಪಡಿ ಮಸೂದೆಗೆ ಸೋಲಾಗಿರುವುದರಿಂದ ಉಳಿದ ಎರಡು ಸಾಮಾನ್ಯ ಮಸೂದೆಗಳಿಗೆ ಅಂಗೀಕಾರ ಪಡೆಯುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಸಂಸದೀಯ ವ್ಯವಹಾರ ಕಿರಣ್‌ ರಿಜಿಜು ಸ್ಪಷ್ಟಪಡಿಸಿದರು. ಬಳಿಕ ಕಲಾಪವನ್ನು ಶನಿವಾರಕ್ಕೆ ಮುಂದೂಡಲಾಯಿತು.

ಕಳೆದ 48 ಗಂಟೆಗಳಲ್ಲಿ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚಿಸುತ್ತಿದ್ದಂತೆ ಮೂರನೇ ಎರಡರಷ್ಟು ಬಹುಮತದ ಕೊರತೆ ಇರುವುದು ಸರ್ಕಾರಕ್ಕೆ ಸ್ಪಷ್ಟವಾಗಿತ್ತು. ಈ ಮಸೂದೆಗೆ ಸೋಲಾಗಲಿದೆ ಎಂದು ಬಿಜೆಪಿ ಸಂಸದರೇ ಹೇಳಿಕೊಂಡಿದ್ದರು. ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರದ ಮುಂದೆ ಮೂರು ಆಯ್ಕೆಗಳಿದ್ದವು- ಮಸೂದೆಯನ್ನು ಹೆಚ್ಚಿನ ಚರ್ಚೆಗಾಗಿ ಸಂಸದೀಯ ಸಮಿತಿಗೆ ಕಳುಹಿಸುವುದು ಅಥವಾ ಮಸೂದೆಯನ್ನು ಹಿಂತೆಗೆದುಕೊಳ್ಳುವುದು ಅಥವಾ ವಿಪಕ್ಷಗಳ ಸದಸ್ಯರು ಗೈರಾಗುವಂತೆ ನೋಡಿಕೊಳ್ಳುವುದು.

ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ವಿಧಾನಸಭೆಗಳ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ, 'ಇಂಡಿಯಾ ಬಣವು ಮಹಿಳಾ ವಿರೋಧಿ' ಎಂಬ ಸಂಕಥನ ಸೃಷ್ಟಿಸುವ ಮಾರ್ಗವನ್ನು ಬಿಜೆಪಿ ಆಯ್ದುಕೊಂಡಿತು. ಮಹಿಳಾ ಸಬಲೀಕರಣ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿತು.

'ವಿರೋಧಿಸುವವರು ಮಹಿಳಾ ಮತದಾರರ ಕೋಪ ಎದುರಿಸಬೇಕಾಗುತ್ತದೆ' ಎಂದು ಗೃಹ ಸಚಿವ ಅಮಿತ್ ಶಾ ಎಚ್ಚರಿಸಿದರು. 'ಮಸೂದೆ ಅಂಗೀಕಾರದ ಶ್ರೇಯಸ್ಸು ನೀವೇ ಪಡೆದುಕೊಳ್ಳಿ. ನಾನು ಖಾಲಿ ಚೆಕ್ ನೀಡುತ್ತೇನೆ' ಎಂದು ಮೋದಿ ಓಲೈಸಿದರು. ಶಾ ಅವರದ್ದು ಅದಕ್ಕೆ ವಿಭಿನ್ನ ಮಾರ್ಗ. ಮಸೂದೆಗೆ ಸೋಲಾಗುವುದು ಖಚಿತವಾಗುತ್ತಿದ್ದಂತೆ ವಿಪಕ್ಷಗಳ ವಿರುದ್ಧ ಹೆಚ್ಚು ಆಕ್ರಮಣಕಾರಿಯಾದರು.

ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ ಇಂಡಿಯಾ ಮೈತ್ರಿಕೂಟವು ಈ ಮಸೂದೆಯನ್ನು ಸೋಲಿಸಿಯೇ ತಿರುವುದಾಗಿ ಅಧಿವೇಶನಕ್ಕೆ ಮುನ್ನವೇ ಶಪಥ ಮಾಡಿತ್ತು. ನವದೆಹಲಿಯಲ್ಲಿ ಮಂಗಳವಾರ ನಡೆದ ವಿರೋಧ ಪಕ್ಷದ ಸಭೆಯಲ್ಲಿ ರಾಹುಲ್ ಗಾಂಧಿ, 'ಮತದಾನದಿಂದ ಗೈರುಹಾಜರಾಗುವುದು ಎಂದರೆ ಪರೋಕ್ಷವಾಗಿ ಮಸೂದೆಯನ್ನು ಅಂಗೀಕರಿಸಲು ಬಿಜೆಪಿಗೆ ಸಹಾಯ ಮಾಡಿದಂತೆ' ಎಚ್ಚರಿಸಿದ್ದು ವಿರೋಧ ಪಕ್ಷಗಳನ್ನು ಹುರಿದುಂಬಿಸಿತು.

ಪ್ರಚಾರದಲ್ಲಿ ನಿರತರಾಗಿರುವ ಟಿಎಂಸಿಯ 28 ಸಂಸದರು ಸದನಕ್ಕೆ ಹಾಜರಾಗಲು ಮತ್ತು ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆಯೇ ಎಂಬುದು ವಿಪಕ್ಷ ಕೂಟದಲ್ಲಿ ಕಳವಳಕ್ಕೆ ಕಾರಣವಾಗಿತ್ತು. ಮಮತಾ ಬ್ಯಾನರ್ಜಿ ಅವರ ನಿರ್ಣಾಯಕ ಬೆಂಬಲ ಪಡೆಯುವಲ್ಲಿ ರಾಹುಲ್‌ ಜಾಣ್ಮೆ ತೋರಿದರು. ಜತೆಗೆ, ಇನ್ನೆರಡು ಗಂಟೆಗಳಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಅವರು ಸದನದಲ್ಲಿ ಅಬ್ಬರಿಸಿದರು.

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಘೋರ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಎಚ್ಚರಿಸಿದರು. ಇದಕ್ಕೆ ಮೈತ್ರಿಕೂಟದ ನಾಯಕರು ಧ್ವನಿಗೂಡಿಸಿದರು. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಹಿಂದುಳಿದ ವರ್ಗದವರಿಗೆ ಕೋಟಾ ನೀಡಬೇಕು ಎಂದು ಸಮಾಜವಾದಿ ಪಕ್ಷ ಪಟ್ಟು ಹಿಡಿಯಿತು. 2027ರ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ, ಬಿಜೆಪಿ ವಿರುದ್ಧ ಅಖಿಲೇಶ್‌ ಯಾದವ್‌ ದಾಳಿಯನ್ನು ತೀವ್ರಗೊಳಿಸಿದರು. ಚುನಾವಣಾ ಪ್ರಚಾರದ ಸಂದರ್ಭದಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಸೂದೆಯ ಪ್ರತಿ ಸುಟ್ಟು ಆಕ್ರೋಶ ಹೊರ ಹಾಕಿದರು. ದಕ್ಷಿಣದ ರಾಜ್ಯಗಳಿಗೆ ಆಗುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗುವುದಿಲ್ಲ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟರು.

 ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ಸರ್ಕಾರ ಮಂಡಿಸಿದ್ದು ಮಹಿಳಾ ಮಸೂದೆ ಅಲ್ಲ, ಭಾರತದ ಚುನಾವಣಾ ರಚನೆಯನ್ನು ಬದಲಾಯಿಸುವ ಪ್ರಯತ್ನ. ಇದು ನಮ್ಮ ಸಂವಿಧಾನದ ಮೇಲಿನ ದಾಳಿ. ಈ ಪ್ರಯತ್ನವನ್ನು ನಾವು ಸೋಲಿಸಿದ್ದೇವೆ. ಕಿರಣ್‌ ರಿಜಿಜು, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವಿಪಕ್ಷವು ಮಹಿಳೆಯರನ್ನು ಗೌರವಿಸುವ ಐತಿಹಾಸಿಕ ಅವಕಾಶವನ್ನು ಸಂವಿಧಾನ ತಿದ್ದುಪಡಿ ಮಸೂದೆ ಸೋಲಿಸುವ ಮೂಲಕ ಕಳೆದುಕೊಂಡಿದೆ. ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ಮೋದಿ ಸರ್ಕಾರದ ಹೋರಾಟ ಮುಂದುವರಿಯಲಿದೆ.

ಅಮಿತ್‌ ಶಾ, ಕೇಂದ್ರ ಗೃಹ ಸಚಿವ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ಮಸೂದೆಯ ಸೋಲನ್ನು ಸಂಭ್ರಮಿಸುವುದು ಖಂಡನೀಯ. ಕಲ್ಪನೆಗೂ ಮೀರಿದ ಕೃತ್ಯ 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries