ಮಸೂದೆ ಕುರಿತು ಸದನದಲ್ಲಿ ಮಾತನಾಡಿದ ಸಚಿವ ಕಿರಣ್ ರಿಜಿಜು, ಮಸೂದೆ ಕುರಿತು ಚರ್ಚೆ 12 ಗಂಟೆಗಳ ಕಾಲ ನಡೆಯಲಿದೆ.
ಅವಶ್ಯಕತೆ ಇದ್ದರೆ ಸ್ಪೀಕರ್ ಚರ್ಚೆಯ ಅವಧಿಯನ್ನು ವಿಸ್ತರಿಸಬಹುದು. ಮಸೂದೆಗಳ ಮೇಲಿನ ಮತದಾನ ನಾಳೆ ನಡೆಯಲಿದೆ ಎಂದು ಹೇಳಿದರು.
ಬಳಿಕ ಪ್ರತಿಕ್ರಿಯಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಈ ಮೂರು ಮಸೂದೆಗಳ ಕುರಿತ ಚರ್ಚೆ15 ರಿಂದ 18 ಗಂಟೆಗಳವರೆಗೆ ಮುಂದುವರಿಯಬಹುದು. ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ ಎಂದು ಹೇಳಿದರು.

