HEALTH TIPS

ರಾಷ್ಟ್ರೀಯ ಶರಣಾಗತಿ ಸಂಘ'; ಬಿಜೆಪಿ ನಾಯಕ ರಾಮ್ ಮಾಧವ್ ರಿಂದ RSS ನಿಜವಾದ ಬಣ್ಣ ಬಯಲು

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಆರ್‌ಎಸ್‌ಎಸ್ ಅನ್ನು "ರಾಷ್ಟ್ರೀಯ ಶರಣಾಗತಿ ಸಂಘ" ಎಂದು ಟೀಕಿಸಿದ್ದು, ಅದರ ನಾಯಕ ರಾಮ್ ಮಾಧವ್ ಅವರು ಅಮೆರಿಕದಲ್ಲಿ ಸಂಘಟನೆಯ ನಿಜವಾದ ಬಣ್ಣ "ಫಾರ್ಜಿ(ನಕಲಿ) ರಾಷ್ಟ್ರೀಯತೆ" ಮತ್ತು "ಶುದ್ಧ ದಾಸ್ಯ"ವನ್ನು ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಮ್ ಮಾಧವ್ ಅವರ ವಿಡಿಯೋವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ರಾಹಲ್ ಗಾಂಧಿ, ಅಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ, ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು ಅಮೆರಿಕ ವಿಧಿಸಿದ ಹೆಚ್ಚಿನ ಸುಂಕಗಳಿಗೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.

ಆದಾಗ್ಯೂ, ರಾಮ್ ಮಾಧವ್ ನಂತರ ಕ್ಷಮೆಯಾಚಿಸಿದ್ದು, ಅವರು ಹೇಳಿದ್ದು "ವಾಸ್ತವಿಕವಾಗಿ ತಪ್ಪು". ಏಕೆಂದರೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಒಪ್ಪಿಲ್ಲ ಮತ್ತು ಟ್ರಂಪ್ ಆಡಳಿತ ಶೇಕಡಾ 50 ರಷ್ಟು ಸುಂಕ ವಿಧಿಸುವುದನ್ನು "ತೀವ್ರವಾಗಿ ಪ್ರತಿಭಟಿಸಿದೆ" ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಕ್ಸ್‌ನಲ್ಲಿ "ರಾಷ್ಟ್ರೀಯ ಶರಣಾಗತಿ ಸಂಘ. ನಾಗ್ಪುರದಲ್ಲಿ ಫಾರ್ಜಿ ರಾಷ್ಟ್ರೀಯತೆ ಇದೆ. ಇದು ಶುದ್ಧ ದಾಸ್ಯ. ರಾಮ್ ಮಾಧವ್ ಅವರು ಅಮೆರಿಕದಲ್ಲಿ ಸಂಘದ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್, ಪ್ರಧಾನಿ ನರೇಂದ್ರ ಮೋದಿ ಅವರು ಹುದ್ದೆಯಲ್ಲಿ ಮುಂದುವರಿಯುವ ಅಧಿಕಾರವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವೇಣುಗೋಪಾಲ್, "ಹಿರಿಯ ಆರ್‌ಎಸ್‌ಎಸ್ ನಾಯಕರೊಬ್ಬರ ಸ್ಪಷ್ಟ ಒಪ್ಪಿಗೆ - ಪ್ರಧಾನಿ ಮೋದಿ ವಾಷಿಂಗ್ಟನ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ರಾಮ್ ಮಾದವ್ ಹೇಳಿದ್ದೇನು?

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಹಡ್ಸನ್ ಇನ್‌ಸ್ಟಿಟ್ಯೂಟ್ ಸಮ್ಮೇಳನದಲ್ಲಿ ಮಾತನಾಡಿದ ಮಾಧವ್, 'ಭಾರತವು ಇರಾನ್‌ನಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿತು. ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದರೂ ರಶ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ನಾವು ಒಪ್ಪಿಕೊಂಡೆವು. ಭಾರತವು ಹೆಚ್ಚು ಮಾತನಾಡದೆ ಶೇ.50ರಷ್ಟು ಸುಂಕವನ್ನೂ ಒಪ್ಪಿಕೊಂಡಿತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಗಳಿಗೆ ಭಾರತವು ಮಣಿದಿತ್ತು ಎಂದು ರಾಮ್ ಮಾದವ್ ಅವರು ವಾಷಿಂಗ್ಟನ್‌ನಲ್ಲಿ ಜಾಗತಿಕ ಸಭಿಕರ ಮುಂದೆ ಒಪ್ಪಿಕೊಳ್ಳುವ ಮೂಲಕ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries