ಇಂದಿನ ಡಿಜಿಟಲ್ ಯುಗದಲ್ಲಿ Smartphone ನಮ್ಮ ದೈನಂದಿನ ಜೀವನದ ಅವಿಭಾಜ್ಯ ಹಾಗೂ ಅಗತ್ಯ ಸಾಧನವಾಗಿದೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಬ್ಯಾಂಕಿಂಗ್, ಸೋಶಿಯಲ್ ಮೀಡಿಯಾ, OTP, ವೈಯಕ್ತಿಕ ಫೋಟೋಗಳು ಹೀಗೆ ಎಲ್ಲವೂ ನಮ್ಮ ಸ್ಮಾರ್ಟ್‌ಫೋನ್‌ನಲ್ಲೇ ಇರುತ್ತವೆ. ಆದ್ದರಿಂದ ಇಂದಿನ ದಿನಗಳಲ್ಲಿ ಮೊಬೈಲ್ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಇನ್ನೊಂದೆಡೆ ಹೊಸ ತಂತ್ರಗಳ ಮೂಲಕ ಜನರನ್ನು ವಂಚಿಸುವ ಕೆಲಸಗಳು ನಡೆಯುತ್ತಿವೆ. ಕೆಲವೊಮ್ಮೆ ಜನರು ಸಣ್ಣ ತಪ್ಪುಗಳೇ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು.
ಬಹುತೇಕರು ತಿಳಿಯದೆ ಮೊಬೈಲ್‌ಗಳಿಗೆ ಬಂದ ಫೇಕ್ ಲಿಂಕ್‌ಗಳನ್ನು ಕ್ಲಿಕ್ ಮಾಡುತ್ತಾರೆ ಅಥವಾ ಅಸುರಕ್ಷಿತ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುತ್ತಾರೆ. ಈ ಕಾರಣಗಳಿಂದ ಅವರ ವೈಯಕ್ತಿಕ ಮಾಹಿತಿಯು ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ಮಾರ್ಟ್‌ಫೋನ್ ಬಳಕೆದಾರರು ಸರಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಬಹಳ ಅಗತ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Smartphone ಸುರಕ್ಷಿತವಾಗಿಡಲು ಪ್ರಮುಖ ಸಲಹೆಗಳು
ಕಠಿಣ ಪಾಸ್‌ವರ್ಡ್ ಮತ್ತು ಲಾಕ್ ಬಳಸಿ
ನಿಮ್ಮ Smartphone ಗೆ ಯಾವಾಗಲು PIN, Password ಅಥವಾ Fingerprint ಅಥವಾ Face Lock ಇಡಿ. ಯಾರಾದರೂ ಸುಲಭವಾಗಿ ಊಹಿಸಲು ಸಾಧ್ಯವಾದ ಪಾಸ್‌ವರ್ಡ್‌ಗಳನ್ನು ಬಳಸಬೇಡಿ. ಕಠಿಣ ಪಾಸ್‌ವರ್ಡ್ ಇರಲಿ.

ಅನಪರಿಚಿತ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ
ಗೂಗಲ್ ಪ್ಲೇ ಸ್ಟೋರ್ ಅಥವಾ App Store ಹೊರತುಪಡಿಸಿ ಥರ್ಡ್ ಪಾರ್ಟಿ ಮೂಲಕ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಪಾಯಕಾರಿಯಾಗಿದೆ. ಇದರಿಂದ ವೈರಸ್ ಅಥವಾ ಮಾಲ್ವೇರ್ ನಿಮ್ಮ ಫೋನ್‌ಗೆ ಬರಬಹುದು. ಹೀಗಾಗಿ ಎಚ್ಚರವಹಿಸುವುದು ಅಗತ್ಯ.
ಫೇಕ್ ಲಿಂಕ್‌ಗಳ ಬಗ್ಗೆ ಎಚ್ಚರಿಕೆ
ವಾಟ್ಸಾಪ್, ಎಸ್ಎಮ್‌ಎಸ್ ಅಥವಾ Email ಮೂಲಕ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇವು ನಿಮ್ಮ ಬ್ಯಾಂಕ್ ಡೇಟಾ ಕಳವು ಮಾಡಲು ಬಳಸಲಾಗುತ್ತದೆ.
Two-Factor Authentication ಬಳಸಿರಿ
ಬಳಕೆದಾರರೇ ನಿಮ್ಮ ಜಿ-ಮೇಲ್, ಫೇಸ್‌ಬುಕ್, ಬ್ಯಾಂಕಿಂಗ್ ಆಪ್ಸ್ ಹೀಗೆ ಎಲ್ಲದಲ್ಲೂ Two-Factor Authentication ಆನ್ ಮಾಡಿ. ಇದು ನಿಮ್ಮ ಮಾಹಿತಿಗಳಿಗೆ ಹೆಚ್ಚುವರಿ ಸುರಕ್ಷತೆ ನೀಡುತ್ತದೆ.
ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿರಿ
ನಿಮ್ಮ ಫೋನ್‌ನ ಸಾಫ್ಟ್‌ವೇರ್ ಮತ್ತು ಆಪ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುವುದು ಬಹಳ ಮುಖ್ಯ. ಹೊಸ ಅಪ್‌ಡೇಟ್‌ಗಳಲ್ಲಿ ಸುರಕ್ಷತಾ ಫೀಚರ್ಸ್‌ಗಳು ಸೇರಿರುತ್ತವೆ.
ಉಚಿತ Wi-Fi ಬಳಸುವಾಗ ಎಚ್ಚರ
ಉಚಿತ Wi-Fi ಬಳಸುವಾಗ ನಿಮ್ಮ ಡೇಟಾ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಬ್ಯಾಂಕಿಂಗ್ ಅಥವಾ ಪರ್ಸನಲ್ ಕೆಲಸಗಳಿಗೆ ಉಚಿತ ಪಬ್ಲಿಕ್ Wi-Fi ಬಳಕೆ ಮಾಡಬೇಡಿ.
ಆಪ್ Permissions ಪರಿಶೀಲಿಸಿ
ಯಾವುದೇ ಆಪ್ ಯಾವ Permissions ತೆಗೆದುಕೊಳ್ಳುತ್ತಿದೆ ಎಂಬುದನ್ನು ಚೆಕ್ ಮಾಡಿ. ಆಪ್ ಇನ್‌ಸ್ಟಾಲ್ ಮಾಡುವಾಗ ಅನಗತ್ಯ Permissions ನೀಡಬೇಡಿ.
Antivirus ಅಥವಾ ಸೆಕ್ಯುರಿಟಿ ಆಪ್ ಬಳಸಿ
ಅಧಿಕೃತ ಹಾಗೂ ಅತ್ಯುತ್ತಮ Security App ಇನ್‌ಸ್ಟಾಲ್ ಮಾಡುವುದು ಸೂಕ್ತ. ಸೆಕ್ಯುರಿಟಿ ಆಪ್ ಇದ್ದರೆ ವೈರಸ್‌ಗಳು ಮತ್ತು ಅಪಾಯಕಾರಿಯಾದ ಫೈಲ್‌ಗಳನ್ನು ಪತ್ತೆಹಚ್ಚಬಹುದು.

