HEALTH TIPS

ಭಾರತೀಯರಲ್ಲಿ ಅನಾರೋಗ್ಯ ಹೆಚ್ಚಳವಾಗಿದ್ದು, ಚಿಕಿತ್ಸಾ ವೆಚ್ಚ ಏರಿಕೆಯಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಕುಸಿತ: ವರದಿ

 ನವದೆಹಲಿ: ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಈ ತಿಂಗಳು ಬಿಡುಗಡೆಗೊಳಿಸಿರುವ 'ಮನೆಯ ಸಾಮಾಜಿಕ ಬಳಕೆ:ಆರೋಗ್ಯ' ವರದಿಯ ಪ್ರಕಾರ ' ಹೆಚ್ಚೆಚ್ಚು ಭಾರತೀಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಅದಕ್ಕೆ ಅನುಗುಣವಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿಲ್ಲ, ಚಿಕಿತ್ಸಾ ವೆಚ್ಚಗಳಲ್ಲಿ ತೀವ್ರ ಏರಿಕೆ ಇದಕ್ಕೆ ಪ್ರಮುಖ ಕಾರಣವಾಗಿದೆ.


ವರದಿಯು ಜನವರಿಯಿಂದ ಡಿಸೆಂಬರ್ 2025ರವರೆಗೆ ಸಂಗ್ರಹಿಸಲಾದ ದತ್ತಾಂಶಗಳನ್ನು ಆಧರಿಸಿದೆ. ವರದಿಯ ಪ್ರಕಾರ, ಶೇ.13.1ರಷ್ಟು ಭಾರತೀಯರು 15 ದಿನಗಳ ಅವಧಿಯಲ್ಲಿ ಅನಾರೋಗ್ಯವನ್ನು ವರದಿ ಮಾಡಿದ್ದು, 2017-18ರ ಶೇ.7.5ಕ್ಕೆ ಹೋಲಿಸಿದರೆ ಇದು ತೀವ್ರ ಏರಿಕೆಯಾಗಿದೆ. ಆದರೆ ಆಸ್ಪತ್ರೆ ದಾಖಲಾತಿ ಪ್ರಮಾಣವು ಶೇ.2.9ರಲ್ಲೇ ಸ್ಥಿರವಾಗಿದೆ.

ಇದು ರೋಗಗಳ ಸ್ವರೂಪದಲ್ಲಿ ಬದಲಾವಣೆಯನ್ನು ಸೂಚಿಸುತ್ತಿದೆ. ತುರ್ತು ಸಾಂಕ್ರಾಮಿಕ ರೋಗಗಳಿಂದ ಆಸ್ಪತ್ರೆಗೆ ದಾಖಲಾಗುವ ಬದಲು ದೀರ್ಘಕಾಲೀನ ಆರೈಕೆಯು ಅಗತ್ಯವಾಗಿರುವ ರೋಗಗಳಾಗಿ ಬದಲಾವಣೆಯಾಗುತ್ತಿದೆ. ಈಗ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳು ಪ್ರಮಖ ಸಮಸ್ಯೆಗಳಾಗಿವೆ.

ಹಿಂದಿನ ಎರಡು ಸಮೀಕ್ಷೆಗಳಂತೆ ಆಸ್ಪತ್ರೆಗೆ ದಾಖಲಾತಿ ಪ್ರಮಾಣ ಶೇ.2.9ರಲ್ಲಿ ಸ್ಥಿರವಾಗಿ ಉಳಿದುಕೊಂಡಿದೆ. ರೋಗಿಗಳ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರೂ ಒಳರೋಗಿಗಳಾಗಿ ದಾಖಲಾಗುವವರ ಸಂಖ್ಯೆ ಸ್ಥಿರವಾಗಿರುವಂತೆ ಕಂಡು ಬರುತ್ತಿದೆ. ಇದು ಎರಡು ಸಾಧ್ಯತೆಗಳನ್ನು ಸೂಚಿಸುತ್ತದೆ: ದೀರ್ಘಕಾಲಿಕ ರೋಗಿಗಳಿಗೆ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಹೆಚ್ಚಾಗಿರುವುದು ಅಥವಾ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಆಸ್ಪತ್ರೆಗೆ ದಾಖಲಾಗಲು ಹಿಂಜರಿಕೆ.

ಗ್ರಾಮೀಣ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಪ್ರತಿ ವ್ಯಕ್ತಿ (ಹೆರಿಗೆ ಪ್ರಕರಣಗಳನ್ನು ಹೊರತುಪಡಿಸಿ) ಮಾಡುವ ಸರಾಸರಿ ಸ್ವಂತ ವೆಚ್ಚವು 2014ರಲ್ಲಿ 5,636 ರೂ.ಗಳಾಗಿದ್ದರೆ 2017-18ರಲ್ಲಿ 16,676 ರೂ.ಗೆ ಮತ್ತು 2025ರಲ್ಲಿ 31,488 ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ಒಂದು ದಶಕದಲ್ಲಿ ಐದು ಪಟ್ಟು ಹೆಚ್ಚಾಗಿದೆ.

ನಗರ ಪ್ರದೇಶಗಳಲ್ಲಿಯೂ ಇಂತಹುದೇ ಪ್ರವೃತ್ತಿಯಿದೆ. ಸರಾಸರಿ ಸ್ವಂತ ವೆಚ್ಚ 2014ರಲ್ಲಿ 7,670 ರೂ.ಗಳಿಂದ 2017-18ರಲ್ಲಿ 26,475 ರೂ.ಗಳಿಗೆ ಮತ್ತು 2025ರಲ್ಲಿ 38,688 ರೂ.ಗಳಿಗೆ ಏರಿಕೆಯಾಗಿದ್ದು,ಇದು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಮತ್ತು ವೈದ್ಯಕೀಯ ಸೇವೆಗಳ ದುಬಾರಿ ದರಗಳನ್ನು ಪ್ರತಿಬಿಂಬಿಸುತ್ತದೆ.

ಆರೋಗ್ಯ ವಿಮೆಯ ವ್ಯಾಪ್ತಿ ವಿಸ್ತರಣೆಗೊಂಡಿದ್ದು ಶೇ.47ರಷ್ಟು ಗ್ರಾಮೀಣ ಮತ್ತು ಶೇ.44ರಷ್ಟು ನಗರ ನಿವಾಸಿಗಳು ವಿಮೆ ರಕ್ಷಣೆಯನ್ನು ಹೊಂದಿದ್ದಾರೆ. ಆದರೂ ಸ್ವಂತ ಜೇಬಿನಿಂದ ಮಾಡುವ ವೆಚ್ಚವು ಹೆಚ್ಚಿನ ಮಟ್ಟದಲ್ಲಿಯೇ ಉಳಿದಿದೆ. ವಿಮೆಯು ಕುಟುಂಬಗಳಿಗೆ ಹೆಚ್ಚುತ್ತಿರುವ ವೆಚ್ಚಗಳಿಂದ ಸಂಪೂರ್ಣವಾಗಿ ರಕ್ಷಣೆ ನೀಡುತ್ತಿಲ್ಲ. ಭಾಗಶಃ ವಿಮೆ ರಕ್ಷಣೆ, ವಿಮೆ ಯೋಜನೆಯಿಂದ ಹೊರಗಿಡಲಾದ ಕೆಲವು ಚಿಕಿತ್ಸೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಪ್ರಾಬಲ್ಯದಿಂದಾಗಿ ಜನರು ವೆಚ್ಚವನ್ನು ತಾವೇ ಭರಿಸುವುದು ಮುಂದುವರಿದಿದೆ.

ಸರಕಾರಿ ಆಸ್ಪತ್ರೆಗಳು ರೋಗಿಗಳಿಗೆ ನೆರವಾಗುತ್ತವೆಯಾದರೂ ಅವುಗಳ ಸೇವಾ ವ್ಯಾಪ್ತಿ ಅಸಮವಾಗಿದೆ.

ಸರಕಾರವು ಆರೋಗ್ಯಕ್ಕಾಗಿ ಮಾಡುವ ವೆಚ್ಚಕ್ಕಿಂತ ಜನರು ಆರೋಗ್ಯ ವಿಮೆಗಾಗಿ ಪಾವತಿಸುತ್ತಿರುವ ಪ್ರೀಮಿಯಂಗಳ ಮೊತ್ತವೇ ಹೆಚ್ಚಾಗುತ್ತಿದೆ ಎನ್ನುವುದನ್ನು ಇತ್ತೀಚಿನ ಹಣಕಾಸು ದತ್ತಾಂಶವು ಸೂಚಿಸಿದೆ.

ಸರಕಾರವು ಪ್ರಾಥಮಿಕ ಜವಾಬ್ದಾರಿಯನ್ನು ಹೊರುವ ಬದಲು ಕುಟುಂಬಗಳು ಹೆಚ್ಚಾಗಿ ವಿಮೆ ರಕ್ಷಣೆಯನ್ನೇ ಅವಲಂಬಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries